ವಿಶ್ವದ ಟಾಪ್‌ ಕ್ರಿಪ್ಟೋಕರೆನ್ಸಿಗಳ ಬೆಲೆ ಹೆಚ್ಚಳ: ಶೇ.4ರಷ್ಟು ಮೌಲ್ಯ ಹೆಚ್ಚಿಸಿಕೊಂಡ ಇಥೆರಿಯಂ

ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯು ಭಾನುವಾರ ಶೇ. 2.15ರಷ್ಟು ಹೆಚ್ಚಳ ಕಂಡಿದ್ದು, ಪ್ರಸ್ತುತ ಕ್ರಿಪ್ಟೋ ಮಾರ್ಕೆಟ್‌ ಕ್ಯಾಪ್ 2.14 ಟ್ರಿಲಿಯನ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆ ಗಾತ್ರದಲ್ಲಿ $99.33 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದೆ

ವಿಶ್ವದ ಟಾಪ್‌ ಕ್ರಿಪ್ಟೋಕರೆನ್ಸಿಗಳ ಬೆಲೆ ಹೆಚ್ಚಳ: ಶೇ.4ರಷ್ಟು ಮೌಲ್ಯ ಹೆಚ್ಚಿಸಿಕೊಂಡ ಇಥೆರಿಯಂ
Linkup
ಹೊಸದಿಲ್ಲಿ: ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯು ಭಾನುವಾರ ಶೇ. 2.15ರಷ್ಟು ಹೆಚ್ಚಳ ಕಂಡಿದ್ದು, ಪ್ರಸ್ತುತ ಕ್ರಿಪ್ಟೋ ಮಾರ್ಕೆಟ್‌ ಕ್ಯಾಪ್ 2.14 ಟ್ರಿಲಿಯನ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆ ಗಾತ್ರದಲ್ಲಿ $99.33 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದೆ. ಆದರೆ, ಕಳೆದ ದಿನದ ಬೆಳವಣಿಗೆಗೆ ಹೋಲಿಸಿದರೆ ಶೇ.15.37ರಷ್ಟು ಇಳಿಕೆಯಾಗಿದೆ. ಕ್ರಿಪ್ಟೋ ಮಾರುಕಟ್ಟೆಯ ನಾಯಕನೆಂದೇ ಗುರುತಿಸಿಕೊಂಡಿರುವ ಬಿಟ್‌ಕಾಯಿನ್ ಒಟ್ಟು ಮಾರುಕಟ್ಟೆಯಲ್ಲಿ ಶೇ.42.31ರಷ್ಟು ಪಾಲು ಹೊಂದಿದೆ. ಆದರೆ, ಕಳೆದ ಒಂದು ದಿನದಲ್ಲಿ ಈ ಪ್ರಮಾಣ ಶೇ.0.69ರಷ್ಟು ಇಳಿಕೆಯಾಗಿದೆ. ಪ್ರಸ್ತುತ ಬೆಲೆ 36,69,001 ರೂಪಾಯಿಯಷ್ಟಿದೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಪ್ರಸ್ತುತ ಕ್ರಿಪ್ಟಟೋಕರೆನ್ಸಿ ಮಾರುಕಟ್ಟೆ ಗಾತ್ರ 157.19 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿನ ತ್ವರಿತ ಗತಿಯ ಬೆಳವಣಿಗೆಯು ಹೊಸ ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ಆದರೆ, ಡಿಜಿಟಲ್‌ ಕರೆನ್ಸಿಗಳು ಆರ್ಥಿಕತೆಯ ಸ್ಥಿರತೆ ಮೇಲೆ ದೊಡ್ಡ ಸವಾಲುಗಳನ್ನು ತಂದೊಡ್ಡಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿದೆ. ಆದರೆ, ಹೊಸ ತಂತ್ರಜ್ಞಾನದ ಆವಿಷ್ಕಾರವು ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ. ಇದೀ ಕ್ರಿಪ್ಟೋ ತಂತ್ರಜ್ಞಾನವು ಹಣದ ಚಲಾವಣೆ, ವರ್ಗಾವಣೆ, ಪಾವತಿಗಳು ಮತ್ತು ಇತರ ಹಣಕಾಸು ಸೇವೆಗಳನ್ನು ಅಗ್ಗವಾಗಿ, ವೇಗವಾಗಿ, ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಅಲ್ಲದೆ ಗಡಿಗಳ ಎಲ್ಲೆಯನ್ನೂ ಮೀರಿ ವೇಗದ ಚಲಾವಣೆಗೆ ಕ್ರಿಪ್ಟೋ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ಜಾಗತಿಕ ಹಣಕಾಸು ಸ್ಥಿರತೆ ವರದಿಯಲ್ಲಿ ಹೇಳಲಾಗಿದೆ. ಅಂತಾರಾಷ್ಟ್ರೀಯ ಚಲಾವಣೆಗಳನ್ನು ವೇಗವಾಗಿ, ಸರಳವಾಗಿ ಮತ್ತು ಅಗ್ಗದ ದರದಲ್ಲಿ ತರಲು ಕ್ರಿಪ್ಟೋ ಕರೆನ್ಸಿಗಳಿಂದ ಸಾಧ್ಯವಾಗಿದೆ. ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು ವಿಶ್ವದಲ್ಲಿ ಹೆಚ್ಚು ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಕಳೆದುಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್‌ 3ರಂದು ಅವುಗಳ ಮೌಲ್ಯ ಹೀಗಿದೆ.
  • ಬಿಟ್‌ಕಾಯಿನ್‌: ₹36,69,001
  • ಇಥೆರಿಯಂ: ₹2,63,370.5
  • ಬಿನಾನ್ಸ್‌ ಕಾಯಿನ್‌ : ₹32,916
  • ಟೆಥರ್‌: ₹77.19
  • ಕಾರ್ಡಾನೋ: ₹173.5085
  • ಡೋಜೆಕಾಯಿನ್‌: ₹16.8899
  • ಎಕ್ಸ್‌ಆರ್‌ಪಿ: ₹80.2517
  • ಪೊಲ್‌ಕಾಡಾಟ್‌: ₹2,480
ಎಲ್‌ ಸಾಲ್ವೆಡಾರ್‌ ರಾಷ್ಟ್ರವು ತನ್ನ ಬಿಟ್‌ಕಾಯಿನ್ ಕಾನೂನನ್ನು ಸೆಪ್ಟೆಂಬರ್ 7 ರಂದು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಹೂಡಿಕೆದಾರರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ತಜ್ಞರ ಪ್ರಕಾರ, ಬಿಟ್ ಕಾಯಿನ್ ಇನ್ನೂ ಪ್ರಬಲವಾಗಿದೆ.