ಐಷರಾಮಿ ಮತ್ತು ಬಡತನ: ಕೋವಿಡ್‌ ಕಾಲದಲ್ಲಿ ಭಾರತದ ಎರಡು ಮುಖಗಳಿವು!

ಮರ್ಸಿಡಿಸ್-ಬೆನ್ಜ್ ಎಜಿ ಇತ್ತೀಚೆಗೆ ತನ್ನ ಮೇಬ್ಯಾಕ್ ಸ್ಪೋರ್ಟ್ ಯುಟಿಲಿಟಿ ಕಾರನ್ನು ಪರಿಚಯಿಸಿದೆ. ಭಾರತದಲ್ಲಿ ಕೋವಿಡ್‌ 2ನೇ ಅಲೆ ಬಿಕ್ಕಟ್ಟಿನ ನಡುವೆಯೂ ಭಾರತೀಯರು ಈ ಕಾರನ್ನು ಕೊಳ್ಳಲು ಮುಗಿಬಿದ್ದಿದ್ದಾರೆ.

ಐಷರಾಮಿ ಮತ್ತು ಬಡತನ: ಕೋವಿಡ್‌ ಕಾಲದಲ್ಲಿ ಭಾರತದ ಎರಡು ಮುಖಗಳಿವು!
Linkup
ಹೊಸದಿಲ್ಲಿ: ಮರ್ಸಿಡಿಸ್-ಬೆನ್ಜ್ ಎಜಿ ಇತ್ತೀಚೆಗೆ ತನ್ನ ಮೇಬ್ಯಾಕ್ ಸ್ಪೋರ್ಟ್ ಯುಟಿಲಿಟಿ ಕಾರನ್ನು ಪರಿಚಯಿಸಿದೆ. ಭಾರತದಲ್ಲಿ ಕೋವಿಡ್‌ 2ನೇ ಅಲೆ ಬಿಕ್ಕಟ್ಟಿನ ನಡುವೆಯೂ ಭಾರತೀಯರು ಈ ಕಾರನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಜರ್ಮನ್ ಕಂಪನಿಯಾದ ಬೆನ್ಜ್‌ 2021 ರ ಅಂತ್ಯದ ವೇಳೆಗೆ 50 ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿತ್ತು. ಒಂದೇ ತಿಂಗಳಲ್ಲಿ ಈ ಕಾರುಗಳು ಬುಕ್‌ ಆಗಿವೆ. ಪ್ರಸ್ತುತ ದಿನಗಳಲ್ಲಿ ಕಾರು ಕೊಳ್ಳುವುದೇನೂ ಮಹತ್ಕಾರ್ಯವಲ್ಲ. ಆದರೆ, ಬೆನ್ಜ್‌ನ ಈ ಹೊಸ ಕಾರಿನ ಬೆಲೆ ಬರೋಬ್ಬರಿ 4 ಲಕ್ಷ ಡಾಲರ್ (ಸುಮಾರು 3 ಕೋಟಿ ರೂಪಾಯಿ). ಬೃಹತ್‌ ಮೊತ್ತದ ಐಷಾರಾಮಿ ಕಾರು ಕರೀದಿಸುವವರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾದರೂ, ಇದು ಭಾರತದಲ್ಲಿ ಆದಾಯ ಅಸಮಾನತೆಯನ್ನು ಎತ್ತಿತೋರಿಸುತ್ತಿದೆ. ಕೋವಿಡ್‌ ಬಿಕ್ಕಟ್ಟಿನಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಮಂದಿ ಒಂದೆಡೆಯಾದರೆ, ಐಷಾರಾಮಿ ಕಾರು ಖರೀದಿಸುತ್ತಿರುವವರು ಮತ್ತೊಂದೆಡೆ. ಇದರ ಮಧ್ಯೆ ದೇಶದ ವಾರ್ಷಿಕ ತಲಾ ಆದಾಯವು 2,000 ಡಾಲರ್‌ಗಿಂತಲೂ ಕೆಳಗಿಳಿದಿರುವುದು ಮತ್ತೊಂದು ಆಘಾತಕಾರಿ ಸಂಗತಿ. ಈ ಮೂಲಕ ಭಾರತ ತಲಾದಾಯ ನೆರೆಯ ಬಾಂಗ್ಲಾದೇಶಕ್ಕಿಂತಲೂ ಹಿಂದೆ ಬಿದ್ದಿದೆ. ಉದಯೋನ್ಮುಖ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಆದರೆ ಇಲ್ಲಿ ಆರ್ಥಿಕ ಅಸಮಾನತೆ ಪ್ರಮಾಣ ಹೆಚ್ಚುತ್ತಲೇ ಇದೆ. ಒಂದು ವರ್ಗದ ಆದಾಯ ಹೆಚ್ಚತ್ತಲೇ ಇದೆ. ಮತ್ತೊಂದು ವರ್ಗದವರ ಆದಾಯ ಕುಸಿಯುತ್ತಿವೆ. ಆರ್ಥಿಕ ತಜ್ಞರು ಹೇಳಿವು ಪ್ರಕಾರ ಭಾರತದಲ್ಲಿ ಮತ್ತೊಮ್ಮೆ ಆಹಾರದ ಅಭಾವ ಉಂಟಾಗಲಿದೆ. ಕೋವಿಡ್‌-19 ಸೋಂಕು ಸಣ್ಣ ಮತ್ತು ಅತಿಸಣ್ಣ ಕೈಗಾರಿಗಳಿಗೆ ಭಾರೀ ಹೊಡೆತ ನೀಡಿದೆ. ಕೆಲವರು ಚಿಕಿತ್ಸಾ ವೆಚ್ಚ ಭರಿಸಲೂ ಹಣ ಇಲ್ಲದಂತಾಗಿದ್ದಾರೆ. ಇಂತಹ ಕೈಗಾರಿಕೆಗಳಿಕೆ 'ತುರ್ತು ಸಾಲ ಸೌಲಭ್ಯ' ಒದಗಿಸಲು ಕೇಂದ್ರ ಸರಕಾರ ಯೋಜನೆ ಆರಂಭಿಸಿದೆಯಾದರೂ, ಈ ಯೋಜನೆ ಇದುವರೆಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಕೇಂದ್ರ ಸರಕಾರವು ದೇಶದ 80 ಕೋಟಿ ಜನತೆಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ. ಈ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ಬಡಜನರ ಅಪೌಷ್ಟಿಕತೆ ನಿವಾರಣೆಗೆ ಪ್ರತಿದಿನ 150 ರೂ. ನೆರವು ಒದಗಿಸಬೇಕು ಎಂದು ಬೆಂಗಳೂರು ಮೂಲದ ಅಜಿಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯ ವರದಿ ನೀಡಿತ್ತು. ಆದರೆ, ಸರಕಾರವು ಜನರಿಗೆ ಹಣಕಾಸು ನೆರವು ಒದಗಿಸುವ ಬದಲು ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಮತ್ತಷ್ಟು ಹೊರೆ ಏರಿದೆ. ಆದರೆ, ಧನಿಕರು ಧನಿಕರಾಗುತ್ತಲೇ ಸಾಗಿದ್ದಾರೆ. ಈ ವರ್ಷ ಗುಜರಾತ್‌ ಮೂಲದ ಗೌತಮ್ ಅದಾನಿಯ ಸಂಪತ್ತಿನಲ್ಲಿ 43 ಬಿಲಿಯನ್ ಡಾಲರ್‌ ಹೆಚ್ಚಳವಾಗಿದೆ. ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಕೂಡ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಬಿಲಿಯನೇರ್ ಹೂಡಿಕೆದಾರ ರಾಧಾಕಿಶನ್ ದಮಾನಿ ಕಳೆದ ಏಪ್ರಿಲ್‌ನಲ್ಲಿ ಮುಂಬೈನಲ್ಲಿ 137 ಮಿಲಿಯನ್ ಡಾಲರ್‌ ಮೌಲ್ಯ ಬಂಗಲೆ ಭವನವನ್ನು ಖರೀದಿಸಿದರು. ಇದು ದೇಶದ ಅತ್ಯಂತ ಬೆಲೆಬಾಳುವ ಆಸ್ತಿ ವ್ಯವಹಾರವಾಗಿದೆ.