ಹೊಸ ಐಟಿ ನಿಯಮ ಪಾಲನೆಗೆ ಮುಂದಾದ ಜಾಲತಾಣ ಕಂಪನಿಗಳು!

ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಐಟಿ ನಿಯಮಗಳನ್ನು ಗಾಳಿಗೆ ತೂರಿದ್ದ ಬಹುರಾಷ್ಟ್ರೀಯ ಜಾಲತಾಣ ಕಂಪನಿಗಳು ಕೊನೆಗೂ ನಿಯಮಗಳ ಪಾಲನೆಗೆ ಮುಂದಾಗಿವೆ. ಟ್ವಿಟರ್‌ ನಿಯಮ ಪಾಲಿಸುವುದಾಗಿ ಭರವಸೆ ಕೊಟ್ಟಿದೆ. ಈ ಕುರಿತ ವಿವರ ಇಲ್ಲಿದೆ.

ಹೊಸ ಐಟಿ ನಿಯಮ ಪಾಲನೆಗೆ ಮುಂದಾದ ಜಾಲತಾಣ ಕಂಪನಿಗಳು!
Linkup
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿಗಳ ವಲಯವನ್ನು ಬಲಪಡಿಸಲು, ದುರ್ಬಳಕೆ ತಡೆಯಲು ಹಾಗೂ ಸಾಮಾನ್ಯ ಬಳಕೆದಾರ ಅಹವಾಲು, ಕುಂದುಕೊರತೆಗಳನ್ನು ಬಗೆಹರಿಸಲು ಕೇಂದ್ರ ಸರಕಾರ 2021ರ ಮೇ 26ರಂದು ಜಾರಿಗೊಳಿಸಿದ್ದ ನೂತನ ಐಟಿ ನಿಯಮಗಳನ್ನು ಗಾಳಿಗೆ ತೂರಿದ್ದ ಬಹುರಾಷ್ಟ್ರೀಯ ಜಾಲತಾಣ ಕಂಪನಿಗಳು ಕೊನೆಗೂ ನಿಯಮಗಳ ಪಾಲನೆಗೆ ಮುಂದಾಗಿವೆ. ಈ ಕುರಿತ ವಿವರ ಇಲ್ಲಿದೆ. ಟ್ವಿಟರ್‌ನಿಂದ ಅಹವಾಲು ಅಧಿಕಾರಿ ನೇಮಕ: ನೂತನ ಐಟಿ ನಿಯಮಗಳನ್ನು ಪಾಲಿಸಿಗಳನ್ನು ಆರಂಭದಲ್ಲಿ ನಿರ್ಲಕ್ಷಿಸಿದ್ದ ಜಾಲತಾಣ ದಿಗ್ಗಜ ಟ್ವಿಟರ್‌ಗೆ ಸರಕಾರ ಕಳೆದ ಜೂನ್‌ನಲ್ಲಿ ಸರಕಾರ ಅಂತಿಮ ನೋಟಿಸ್‌ ಅನ್ನು ಜಾರಿಗೊಳಿಸಿತ್ತು. ನಂತರ ಜುಲೈನಲ್ಲಿ ದಿಲ್ಲಿ ಹೈಕೋರ್ಟಿಗೂ ಈ ಸಂಬಂಧ ಸರಕಾರ ಪ್ರಮಾಣಪತ್ರ ಸಲ್ಲಿಸಿತ್ತು. ನಂತರ ಟ್ವಿಟರ್‌ ನಿಯಮ ಪಾಲಿಸುವುದಾಗಿ ಭರವಸೆ ಕೊಟ್ಟಿತ್ತು. ನೂತನ ಐಟಿ ನಿಯಮಗಳ ಅಡಿಯಲ್ಲಿ ಅಹವಾಲುಗಳ ಸ್ವೀಕೃತಿಗೆ ಸಂಬಂಧಿಸಿ ಸಿಸಿಒ, ಆರ್‌ಜಿಒ ಮತ್ತು ನೋಡಲ್‌ ಕಾಂಟ್ಯಾಕ್ಟ್ ಪರ್ಸನ್‌ ಅಧಿಕಾರಿಗಳನ್ನು ನೇಮಿಸಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ಟ್ವಿಟರ್‌ ಜುಲೈ 6ರಂದು ತಿಳಿಸಿದೆ. ಫೇಸ್‌ಬುಕ್‌ನಿಂದ ಮಾಸಿಕ ವರದಿ: 2021ರ ಜುಲೈನಲ್ಲಿ ನೂತನ ಐಟಿ ನಿಯಮ ಪಾಲನೆ ಕುರಿತ ಮೊದಲ ಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದೆ. ಮೊದಲ ವರದಿಯಲ್ಲೇ ಜಾಲತಾಣ ದಿಗ್ಗಜ ರಚನಾತ್ಮಕ ಪ್ರಗತಿಯನ್ನು ಸಾಧಿಸಿರುವುದಾಗಿ ತಿಳಿಸಿದೆ. ಫೇಸ್‌ಬುಕ್‌ ಬಹುತೇಕ ಎಲ್ಲ ವಿಭಾಗದ ವಸ್ತು ವಿಷಯಗಳ ಮೇಲೆ ನಿಗಾ ವಹಿಸಿರುವುದಾಗಿ ಹಾಗೂ ಶೇ.95ರಷ್ಟು ಕ್ರಮ ಜರುಗಿಸಿರುವುದಾಗಿ ತಿಳಿಸಿರುವುದು ವಿಶೇಷ. ಅಶ್ಲೀಲತೆ, ದ್ವೇಷಮಯ ಭಾಷಣ, ಭಯೋತ್ಪಾದನೆಗೆ ಕುಮ್ಮಕ್ಕು, ಆತ್ಮಹತ್ಯಾಕಾರಕ ದೃಶ್ಯಾವಳಿ, ಹಿಂಸಾಚಾರ, ಡ್ರಗ್ಸ್‌ ಮತ್ತು ಸ್ಪಾಮ್‌ ವಿಷಯಗಳಿಗೆ ಸಂಬಂಧಿಸಿ ಕ್ರಮ ಜರುಗಿಸಿರುವುದಾಗಿ ತಿಳಿಸಿದೆ. ಬಹುತೇಕ ಪ್ರಕರಣಗಳಲ್ಲಿ ಶೇ.80ರಷ್ಟು ಕ್ರಮ ಕೈಗೊಂಡಿರುವುದಾಗಿ ಇನ್‌ಸ್ಟಾಗ್ರಾಮ್‌ ತಿಳಿಸಿದೆ. ಗೂಗಲ್‌ನಿಂದ 27,762 ದೂರು ಸ್ವೀಕೃತಿ! ಸರ್ಚ್ ಎಂಜಿನ್‌ ಗೂಗಲ್‌ ನೂತನ ಐಟಿ ನಿಯಮ ಪಾಲನೆ ಕುರಿತು ಏಪ್ರಿಲ್‌ ತಿಂಗಳಿನ ಪ್ರಗತಿ ವರದಿಯನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್‌ನಲ್ಲಿ ಒಟ್ಟು 27,762 ದೂರುಗಳನ್ನು ಸ್ವೀಕರಿಸಿದ್ದಾಗಿ ಹಾಗೂ 59,350 ವಸ್ತು ವಿಷಯಗಳನ್ನು ಡಿಲೀಟ್‌ ಮಾಡಿರುವುದಾಗಿ ತಿಳಿಸಿದೆ. ಕಾಪಿರೈಟ್‌ಗೆ ಸಂಬಂಧಿಸಿ 26,707 ದೂರುಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದೆ. ದಿಲ್ಲಿ ಹೈಕೋರ್ಟ್‌ನಿಂದ ಆ.27ಕ್ಕೆ ವಿಚಾರಣೆ ಪ್ರಮುಖ ಜಾಲತಾಣ ಕಂಪನಿಗಳು ನೂತಯನ ಐಟಿ ನಿಯಮಗಳನ್ನು ಪಾಲಿಸಲು ಆರಂಭಿಸಿದ್ದರೂ, ಈ ಕುರಿತ ಕೇಸ್‌ ವಿಚಾರಣೆ ದಿಲ್ಲಿ ಹೈಕೋರ್ಟ್‌ನಲ್ಲಿ ಮುಂದುವರಿದಿದೆ. ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ಆಗಸ್ಟ್‌ 27ಕ್ಕೆ ನಿಗದಿಪಡಿಸಿದೆ.