'ಪೆಗಾಸಸ್ ಸ್ಪೈವೇರ್ ಮಾಹಿತಿಗಳಿಗೆ ಬದ್ಧ': ತನ್ನ ಬಗ್ಗೆ ಸುಳ್ಳು ವದಂತಿ ಹರಡಲಾಗುತ್ತಿದೆ ಎಂದ ಆಮ್ನೆಸ್ಟಿ
'ಪೆಗಾಸಸ್ ಸ್ಪೈವೇರ್ ಮಾಹಿತಿಗಳಿಗೆ ಬದ್ಧ': ತನ್ನ ಬಗ್ಗೆ ಸುಳ್ಳು ವದಂತಿ ಹರಡಲಾಗುತ್ತಿದೆ ಎಂದ ಆಮ್ನೆಸ್ಟಿ
ಪೆಗಾಸಸ್ ಪ್ರಾಜೆಕ್ಟ್ ಕುರಿತಾಗಿ ಬಹಿರಂಗವಾಗಿರುವ ವಿಚಾರಗಳ ಪರವಾಗಿ ತಾನು ನಿಲ್ಲುವುದಾಗಿ ಹೇಳಿಕೆ ನೀಡಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್, ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಗಳು ಹರಡುತ್ತಿವೆ ಎಂದು ಆರೋಪಿಸಿದೆ.
ಹೊಸದಿಲ್ಲಿ: ಪೆಗಾಸಸ್ ಯೋಜನೆಯಲ್ಲಿ ಹೊರಬಂದಿರುವ ಸಂಗತಿಗಳನ್ನು ತಾನು ಒಪ್ಪಿಕೊಳ್ಳುವುದಾಗಿ ಮತ್ತು ಹೊರಬಂದಿರುವ ದತ್ತಾಂಶಗಳು ಪೆಗಾಸಸ್ ಸ್ಪೈವೇರ್‌ನ ಎನ್‌ಎಸ್‌ಒ ಗುಂಪಿನ ಗುರಿಗಳಾಗಿದ್ದವು ಎನ್ನುವುದು ನಿರಾಕರಣೀಯ ಎಂದು ಇಂಟರ್‌ನ್ಯಾಷನಲ್ ಗುರುವಾರ ಹೇಳಿದೆ.
ಸೋರಿಕೆಯಾದ ಫೋನ್ ಸಂಖ್ಯೆಗಳು ಇಸ್ರೇಲಿ ಎನ್‌ಎಸ್‌ಒ ಸಮೂಹದ ಪೆಗಾಸಸ್ ಸ್ಪೈವೇರ್‌ಗೆ ಸಂಬಂಧಿಸಿದ್ದು ಎಂಬುದನ್ನು ಆಮ್ನೆಸ್ಟಿ ನಿರಾಕರಿಸಿದೆ ಎಂಬಂತಹ ವರದಿಗಳು ಮತ್ತು ಸಾಮಾಜಿಕ ಪೋಸ್ಟ್‌ಗಳು ಹರಿದಾಡುತ್ತಿದ್ದು, ಅದನ್ನು ಮಾನವ ಹಕ್ಕುಗಳ ಸಂಸ್ಥೆ ಅಲ್ಲಗಳೆದಿದೆ.
ಪೆಗಾಸಸ್ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಆರೋಪಗಳು ಮತ್ತು ಮಾಧ್ಯಮಗಳ ನಿಖರವಲ್ಲದ ಸುದ್ದಿಗಳಿಗೆ ಪ್ರತಿಯಾಗಿ ಹೇಳಿಕೆ ನೀಡುತ್ತಿರುವುದಾಗಿ ಆಮ್ನೆಸ್ಟಿ ಹೇಳಿದೆ.
'ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಪೆಗಾಸಸ್ ಪ್ರಾಜೆಕ್ಟ್‌ನ ವಿವರಗಳಿಗೆ ವರ್ಗೀಯವಾಗಿ ಬದ್ಧವಾಗಿದೆ. ದತ್ತಾಂಶವು ಎನ್‌ಎಸ್‌ಒ ಸಮೂಹದ ಪೆಗಾಸಸ್ ಸ್ಪೈವೇರ್‌ನ ನಿರ್ದಿಷ್ಟ ಗುರಿಗಳಿಗೆ ದತ್ತಾಂಶಗಳು ಸಂಬಂಧಿಸಿದ್ದು ನಿರಾಕರಣೀಯ. ಪತ್ರಕರ್ತರು, ಚಳವಳಿಗಾರರು ಮತ್ತು ಇತರರನ್ನು ಕಾನೂನು ಬಾಹಿರವಾಗಿ ಗುರಿಮಾಡಿರುವ ಸಂಗತಿಯನ್ನು ಬೇರೆಡೆ ಸೆಳೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ವದಂತಿಗಳನ್ನು ಹರಡಿಸಲಾಗುತ್ತಿದೆ' ಎಂದು ಅದು ಹೇಳಿಕೆ ನೀಡಿದೆ.