'ನಮಿತಾ ಥಿಯೇಟರ್‌' ಶುರು ಮಾಡಿದ 'ನೀಲಕಂಠ' ಬೆಡಗಿ! ಆದ್ರೆ, ಇಲ್ಲಿ ಟಿಕೆಟ್ ಕೊಡಲ್ಲ, ಬೆಳ್ಳಿಪರದೆಯೂ ಇಲ್ಲ!

'ಕ್ರೇಜಿ ಸ್ಟಾರ್' ರವಿಚಂದ್ರನ್ ಜೊತೆಗೆ ನೀಲಕಂಠ ಹಾಗೂ ಹೂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಗ್ಲಾಮರಸ್ ನಟಿ ನಮಿತಾ ಯಾರಿಗೆ ತಾನೇ ನೆನಪಿಲ್ಲ ಹೇಳಿ? ಗ್ಲಾಮರ್ ಪಾತ್ರಗಳಿಂದಲೇ ಹೆಚ್ಚು ಗಮನಸೆಳೆದ ಈ ನಟಿ ಈಗ 'ನಮಿತಾ ಥಿಯೇಟರ್‌' ಶುರು ಮಾಡಿದ್ದಾರೆ.

'ನಮಿತಾ ಥಿಯೇಟರ್‌' ಶುರು ಮಾಡಿದ 'ನೀಲಕಂಠ' ಬೆಡಗಿ! ಆದ್ರೆ, ಇಲ್ಲಿ ಟಿಕೆಟ್ ಕೊಡಲ್ಲ, ಬೆಳ್ಳಿಪರದೆಯೂ ಇಲ್ಲ!
Linkup
ದಕ್ಷಿಣ ಭಾರತದಲ್ಲಿ ಗ್ಲಾಮರ್ ಪಾತ್ರಗಳಿಂದಲೇ ಎಲ್ಲರ ಗಮನ ಸೆಳೆದವರು ನಟಿ ನಮಿತಾ. ಅಂದಹಾಗೆ, ಅವರು ಹುಟ್ಟಿದ್ದು ಗುಜರಾತ್‌ನಲ್ಲಿಯಾದರೂ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಮಾತ್ರ ಟಾಲಿವುಡ್‌ನಿಂದ! ಆನಂತರ ಕಾಲಿವುಡ್‌ನಲ್ಲೂ ಮಿಂಚುಹರಿಸಿದ ನಮಿತಾ, ರವಿಚಂದ್ರನ್ ನಟನೆಯ '' ಚಿತ್ರದ ಮೂಲಕ 2006ರಲ್ಲಿ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದರು. ಅದು ಸರಿ, ಈಗ್ಯಾಕೆ ಬಗ್ಗೆ ಇಷ್ಟೊಂದು ಮಾತುಕತೆ ಅಂತೀರಾ? ಕಾರಣ ಇದೆ. ಅವರೀಗ ಈಗ ನಮಿತಾ ಅಂತಲೇ ಒಂದು ಥಿಯೇಟರ್ ಶುರು ಮಾಡಿದ್ದಾರೆ! ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚಿಹೋಗುತ್ತಿರುವ ಈ ಕಾಲದಲ್ಲಿ ನಮಿತಾ ಯಾಕೆ ಇಂಥಾ ರಿಸ್ಕ್‌ ತೆಗೆದುಕೊಂಡ್ರು ಅಂತ ಅಚ್ಚರಿಪಡಬೇಡಿ! ಅವರೇನು ಚಿತ್ರಮಂದಿರ ಶುರು ಮಾಡಿಲ್ಲ, 'ನಮಿತಾ ಥಿಯೇಟರ್‌' ಅನ್ನೋ ಓಟಿಟಿ ಪ್ಲಾಟ್‌ಫಾರ್ಮ್‌ ಅನ್ನು ಅವರು ಶುರು ಮಾಡಿದ್ದಾರೆ! ಈ 'ನಮಿತಾ ಥಿಯೇಟರ್‌' ಹೆಸರಿನ ಓಟಿಟಿಯಲ್ಲಿ ಕಿರುಚಿತ್ರಗಳು, ನೈಜ ಘಟನೆ ಆಧಾರಿತ ಸಿನಿಮಾಗಳು ಹಾಗೂ ಹೊಸತನ ಇರುವ ವಿಷಯಗಳಿಗೆ ಮೊದಲ ಆದ್ಯತೆಯಂತೆ. ಈ ಬಗ್ಗೆ ಮಾತನಾಡಿರುವ ಅವರು, 'ನಾನು ಯಾವಾಗಲೂ ಹೊಸ ನಿರ್ದೇಶಕ ಮತ್ತು ಕಲಾವಿದರಿಗೆ ಸಹಾಯ ಮಾಡುತ್ತೇನೆ. ಈ ಒಂದು ಪ್ಲಾಟ್‌ಫಾರ್ಮ್‌ ಮುಖೇನ ಸಣ್ಣ ಬಜೆಟ್‌ನ ಸಿನಿಮಾಗಳನ್ನು ಮಾಡುವ ನಿರ್ಮಾಪಕರಿಗೆ ಬಿಡುಗಡೆಗೆ ಸಹಾಯ ಮಾಡುತ್ತೇವೆ. ನಮಿತಾ ಥಿಯೇಟರ್‌ನ ಕಂಟೆಂಟ್‌ಗಳನ್ನ ಘೋಷಣೆ ಮಾಡಲು ಒಂದು ಒಳ್ಳೆಯ ದಿನಾಂಕವನ್ನು ಎದುರು ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ. 40ರ ಹರೆಯದ ನಮಿತಾ ಕಳೆದ ವರ್ಷ 'ಮಿಯಾ' ಅನ್ನೋ ತಮಿಳು ಸಿನಿಮಾ ಒಪ್ಪಿಕೊಂಡಿದ್ದರು. ಆದಾದ ನಂತರ 'ಬೌ ಬೌ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಅದಿನ್ನೂ ತೆರೆಕಂಡಿಲ್ಲ. ಎರಡು ವರ್ಷಗಳ ಹಿಂದೆ ಬಿಜೆಪಿಯನ್ನು ಸೇರಿಕೊಂಡಿದ್ದರೂ ಕೂಡ ಈಚೆಗೆ ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ನಮಿತಾ ಅಷ್ಟೇನೂ ಸಕ್ರಿಯವಾಗಿದ್ದಂತೆ ಕಾಣಲಿಲ್ಲ! ದಶಕದ ಹಿಂದೆ ದರ್ಶನ್‌ಗೆ ನಾಯಕಿಯಾಗಿ 'ಇಂದ್ರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ನಮಿತಾ. 'ಬೆಂಕಿ ಬಿರುಗಾಳಿ' ಅವರ ಕೊನೆಯ ಕನ್ನಡ ಸಿನಿಮಾ. ಈ ಹಿಂದೆ 'ಬಿಗ್‌ ಬಾಸ್‌ ತಮಿಳು ಸೀಸನ್‌ 1'ರಲ್ಲಿ ಕೂಡ ಕಾಣಿಸಿಕೊಂಡಿದ್ದರು. 2017ರಲ್ಲಿ ವೀರೇಂದ್ರ ಚೌಧರಿ ಅವರನ್ನು ನಮಿತಾ ವಿವಾಹವಾದರು. ಈಗ ನಮಿತಾ ಥಿಯೇಟರ್‌ ಮೂಲಕ ಸದ್ದು ಮಾಡುತ್ತಿದ್ದಾರೆ.