ಪುನೀತ್ ನಿಧನದ ನಂತರ 'ಸ್ಟಾರ್' ನಟರ ಅಭಿಮಾನಿಗಳು ಮಾಡಿದ ಪ್ರತಿಜ್ಞೆ ಇದು!

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರು ಇನ್ನಿಲ್ಲ ಎಂಬುದನ್ನು ಯಾರಿಂದಲೂ ಅರಗಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಈ ಮಧ್ಯೆ ಅವರ ನಿಧನದ ನಂತರ ಎಲ್ಲ ನಟರ ಫ್ಯಾನ್‌ಗಳು ಒಂದು ಪ್ರತಿಜ್ಞೆ ಮಾಡುತ್ತಿದ್ದಾರೆ.

ಪುನೀತ್ ನಿಧನದ ನಂತರ 'ಸ್ಟಾರ್' ನಟರ ಅಭಿಮಾನಿಗಳು ಮಾಡಿದ ಪ್ರತಿಜ್ಞೆ ಇದು!
Linkup
ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಕಂಡಾಗ, ಬಾಕ್ಸ್ ಆಫೀಸ್‌ ವಾರ್, ಫ್ಯಾನ್ಸ್ ವಾರ್ ಸಹಜ. ಅದರಲ್ಲೂ ಫ್ಯಾನ್ಸ್ ವಾರ್ ಒಮ್ಮೊಮ್ಮೆ ಅತಿರೇಕಕ್ಕೆ ಹೋದ ಉದಾಹರಣೆಯೂ ಇದೆ. ಆದರೆ, ಅವರ ನಿಧನ ಇದೆಲ್ಲದಕ್ಕೂ ಅಂತ್ಯ ಹಾಡುವಂತೆ ಆಗಿದೆ. ಹೌದು, ಒಂದಷ್ಟು ಬೇರೆ ಬೇರೆ ನಟರ ಫ್ಯಾನ್ಸ್‌, 'ಇನ್ಮೇಲೆ ನೋ ಫ್ಯಾನ್ಸ್ ವಾರ್‌..' ಅಂತ ಅಭಿಯಾನ ಶುರು ಮಾಡಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಯಲ್ಲಿ ಅಭಿಮಾನಿಗಳ ಕೊಡುಗೆ ಅಪಾರ. ಇದೀಗ ಫ್ಯಾನ್ಸ್ ವಾರ್ ಬಿಟ್ಟು, ಚಿತ್ರರಂಗದ ಬೆಳವಣಿಗೆಗೆ ಒಂದಾಗಿ ಪ್ರೋತ್ಸಾಹಿಸಲು ಎಲ್ಲಾ ನಟ ನಟಿಯರ ಅಭಿಮಾನಿಗಳಿಂದ ಟ್ವಿಟರ್ ಟ್ರೆಂಡ್‌ಗೆ ಕರೆ ನೀಡಲಾಗಿದೆ. ಮಂಗಳವಾರ (ನ.2) ಸಂಜೆ ಆರು ಗಂಟೆಗೆ ಟ್ಟಿಟರ್ ಟ್ರೆಂಡ್ ಶುರುವಾಗಲಿದೆ. ಇನ್ನು, 'ಕಿಚ್ಚ' ಸುದೀಪ್ ಅವರ ™ ಫ್ಯಾನ್‌ ಪೇಜ್‌ನ ಅಡ್ಮಿನ್‌ ಬಹಿರಂಗವಾಗಿ ಒಂದು ಪತ್ರ ಬರೆದಿದ್ದಾರೆ. 'ಪುನೀತ್ ಇದು ಹೆಸರಲ್ಲ ಅವರೊಬ್ಬ ಕನ್ನಡ ಚಿತ್ರರಂಗದ ಶಕ್ತಿ ಚಿತ್ರರಂಗದ ಉತ್ಸವಮೂರ್ತಿಯಾಗಿದ್ದರು. ನಡೆ, ನುಡಿ, ಆಚಾರ ವಿಚಾರದಿಂದಲೂ ಅವರು ನೀತಿವಂತ! ಅವರನ್ನು ನೋಡಿ ದೇವರಿಗೂ ಹೊಟ್ಟೆಕಿಚ್ಚಾಗಿರಬೇಕು ಅವರನ್ನು ಕರೆದುಕೊಂಡು ಬಿಟ್ಟ! ಚಿತ್ರರಂಗಕ್ಕೆ ಸ್ತಂಭದಂತಿದ್ದವರು ಇಂದು ಇಲ್ಲವೆಂದರೆ ನಮಗೆ ಹೇಗಾಗಬೇಡ ಹೇಳಿ. ಅವರು ದೈಹಿಕವಾಗಿಲ್ಲವಷ್ಟೇ! ಅಂತರಿಕವಾಗಿ ನಮ್ಮಲ್ಲಿಯೇ ಇದ್ದಾರೆ. ಅಪ್ಪು ಎಂದೆಂದಿಗೂ ಅಮರ, ನಮ್ಮೊಳಗಿನ ಪರಮಾತ್ಮ ಅವರು. ಅವರಿದ್ದಲ್ಲಿ ಒಳ್ಳೆಯದಿತ್ತು, ಪುಣ್ಯವಿತ್ತು, ಪ್ರೀತಿಯಿತ್ತು! ಕನ್ನಡ ಸಿನಿ ಪ್ರಿಯರಿಗೆ ಹಾಗೂ ಕನ್ನಡ ಸ್ಟಾರ್ ನಟರ ಅಭಿಮಾನಿ ಬಳಗದವರಿಗೂ ಈ ಮೂಲಕ ತಿಸುವುದೇನೆಂದರೆ, ಕನ್ನಡ ಚಿತ್ರರಂಗ ಈಗಾಗಲೇ ಊಹಿಸಲಾಗದ ಸಂಕಷ್ಟಕ್ಕೀಡಾಗಿದ್ದು ಅಪ್ಪು ಸರ್ ರವರ ಈ ಮರಣದ ಸಂಗತಿ ಗಂಟಲಲ್ಲಿ ಸಿಲುಕಿರುವ ತುತ್ತಂತೆ ಉಸಿರುಗಟ್ಟುವ ಪರಿಸ್ಥಿತಿ ನಮ್ಮದಾಗಿದೆ. ಜೀವನ ನಾವು ಅಂದುಕೊಂಡಿದ್ದಕ್ಕೆ ವಿರುದ್ಧ, ಊಹೆಗೂ ನಿಲುಕದ್ದು ಎಂದು ತಿಳಿಸಿಕೊಟ್ಟಿದೆ. ನಿಮಗೆ ತಿಳಿದಿರುವ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಫ್ಯಾನ್ ವಾರ್. 'ನಾವು ಮಾಡುವ ದೇಶ, ಜಗಳ, ಅವಮಾನಕ್ಕೀಡಾಗುವ ಮಾತುಗಳು.. ಕೊನಗೆ ಯಾವುದಕ್ಕೂ ಪ್ರಯೋಜನವಿರುವುದಿಲ್ಲ. ನಮ್ಮ ಕುಟುಂಬದವರ ಬಗ್ಗೆ ನಾವೇ ಕೆಟ್ಟದ್ದು ಮಾತಾಡುವುದು, ಮಾತಾಡಿ ನಮ್ಮ ಮರ್ಯಾದೆಗೆ ಧಕ್ಕೆ ತಂದುಕೊಳ್ಳುವುದು ಎಷ್ಟು ಸೂಕ್ತ? ನಾವು ಈ ಮೂಲಕ ತಿಳಿಯಪಡಿಸುವುದು ಇಷ್ಟೇ. ಕನ್ನಡ ನಟರಿಗೆ ನಮ್ಮಿಂದ ಬೇಕಿರುವುದು ಅವರ ಕೆಲಸಕ್ಕೆ ಸ್ಪೂರ್ತಿದಾಯಕವಾಗುವ 'ನಮ್ಮ ಬೆಂಬಲ ಹೊರತು, ತಾವೇ ಮೇಲೂ ಎಂಬ ಕಿರೀಟವಲ್ಲ'.. 'ಸುದೀಪ್ ಅಣ್ಣನ ಅಭಿಮಾನಿಯಾಗಿ ನಾನು ಇಷ್ಟು ದಿನ ಕೆಲವೊಮ್ಮೆ, ಅತಿರೇಕದಿಂದ ವರ್ತಿಸಿದ್ದೇನೆ. ಕ್ಷಮೆ ಇರಲಿ! ನಾನು ಬದಲಾಗುತ್ತೇನೆ, ನೀವು ಬದಲಾಗಿ, ಎಲ್ಲರೂ ಬದಲಾಗೋಣ' ಎಂದು ಕಿಚ್ಚ ಯುನಿವರ್ಸ್‌ ಪೇಜ್‌ನ ಅಡ್ಮಿನ್ ಟ್ವೀಟ್ ಮಾಡಿದ್ದಾರೆ.