'ರಾಮ್‌ ಯುಗ್‌'ದಲ್ಲಿ ಕನ್ನಡ ನಟ ದಿಗಂತ್ ಮಂಚಾಲೆ; ರಾಮನಾಗಿ ಮಿಂಚಿದ ಸ್ಯಾಂಡಲ್‌ವುಡ್ ನಟ!

ನಟ ದಿಗಂತ್ ಮಂಚಾಲೆ ಅವರು ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಮ್ ಯುಗ್' ವೆಬ್ ಸಿರೀಸ್‌ನಲ್ಲಿ ದಿಗಂತ್ ಮಂಚಾಲೆ ಅವರು ರಾಮನ ಪೋಷಾಕು ಧರಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

'ರಾಮ್‌ ಯುಗ್‌'ದಲ್ಲಿ ಕನ್ನಡ ನಟ ದಿಗಂತ್ ಮಂಚಾಲೆ; ರಾಮನಾಗಿ ಮಿಂಚಿದ ಸ್ಯಾಂಡಲ್‌ವುಡ್ ನಟ!
Linkup
'' ಎಲ್ಲ ಕಾಲಕ್ಕೂ ಸಲ್ಲುವ ಚರಿತ್ರೆ. ಕಳೆದ ವರ್ಷ ಲಾಕ್‌ಡೌನ್ ಘೋಷಣೆಯಾದಾಗ ಟಿವಿಯಲ್ಲಿ 'ರಾಮಾಯಣ', 'ಮಹಾಭಾರತ' ಪ್ರಸಾರ ಆಯ್ತು. ದೊಡ್ಡ ಮಟ್ಟದ ಮೆಚ್ಚುಗೆಯೂ ವ್ತಕ್ತವಾಯ್ತು. ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರೂ ಕೂಡ ಈ ಎರಡು ಮಹಾಕಾವ್ಯಗಳನ್ನು ತೆರೆ ಮೇಲೆ ನೋಡಿ ಖುಷಿ ಪಟ್ಟರು. ಕೆಲವರು ಹಿಂದಿಯಲ್ಲಿ ನೋಡಿದರೆ, ಇನ್ನೂ ಕೆಲವರು ಕನ್ನಡಕ್ಕೆ ಡಬ್ ಆದಮೇಲೆ ನೋಡಿದರು. ಈಗ ಕನ್ನಡ ನಟ ದಿಗಂತ್‌ರನ್ನು ಮತ್ತೊಮ್ಮೆ ರಾಮನ ಅವತಾರದಲ್ಲಿ ನೋಡಬಹುದಾಗಿದೆ. ನಟನೆ! ದಿಗಂತ್ ಮಂಚಾಲೆ, ಅಕ್ಷಯ್ ದೊಗ್ರ, ಐಶ್ವರ್ಯಾ ಒಜಾ, ವಿವಾನ್ ಭಾತೆನಾ, ಅನುಪ್ ಸೋನಿ, ಕಬೀರ್ ದುಹಾನ್ ಸಿಂಗ್ ಅಭಿನಯದ 'ರಾಮ್ ಯುಗ್' ವೆಬ್ ಸಿರೀಸ್‌ನ್ನು ಈಗ ಎಂಎಕ್ಸ್ ಪ್ಲೇಯರ್‌ನಲ್ಲಿ ನೋಡಬಹುದು. ಅತ್ಯಧುನಿಕ ತಂತ್ರಜ್ಞಾನದ ಜೊತೆ ಈ ಸಿರೀಸ್ ರಿಲೀಸ್ ಆಗಿದೆ. ಕುನಾಲ್ ಕೊಹ್ಲಿ ಇದಕ್ಕೆ ನಿರ್ದೇಶನ ಮಾಡಿದ್ದರು. ಅತ್ಯಾಧುನಿಕ ತಂತ್ರಜ್ಞಾನ! 'ರಾಮ್ ಯುಗ್' ವೆಬ್ ಸಿರೀಸ್‌ ವಾಲ್ಮೀಕಿ ರಾಮಾಯಣ ಆಧಾರಿತವಾಗಿದೆ. ಸೀತೆ ಅಪಹರಣ ಮಾಡಿದ ರಾವಣನನ್ನು ಹೇಗೆ ಶ್ರೀರಾಮ ಸಂಹಾರ ಮಾಡುತ್ತಾನೆ ಎಂಬುದೇ ಇದರ ಕಥೆ. ಧರ್ಮ ಹಾಗೂ ಅಧರ್ಮದ ಮಧ್ಯೆ ನಡೆಯುವ ಹೋರಾಟ ಇದಾಗಿದೆ. ಈ ಸಿರೀಸ್‌ನಲ್ಲಿ ತಂತ್ರಜ್ಞಾನವನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿದೆ. ಯುವ ಜನತೆಗೆ ತಲುಪಲು ಉದ್ದೇಶ! ರಾಮ ಸೇತುವೆ ಕಟ್ಟುವುದನ್ನು ಅದ್ಭುತವಾಗಿ ತೋರಿಸಲಾಗಿದೆಯಂತೆ. ಹಿನ್ನಲೆ ಸಂಗೀತ, ಹಾಡುಗಳು, ಸಾಹಿತ್ಯ ಎಲ್ಲವೂ ಚೆನ್ನಾಗಿವೆ. ಅಬ್ಬಾಸ್ ಅಲಿ ಮೋಘಲ್ ಅವರು ಅದ್ಭುತವಾಗಿ ಕೊರಿಯೋಗ್ರಫಿ ಮಾಡಿದ್ದಾರೆ. ಕಲ್ಮೇಶ್ ಪಾಂಡೆ ಅವರು ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ರಮಾನಂದ್ ಸಾಗರ್ ಅವರ 'ರಾಮಾಯಣ'ವನ್ನು ಪ್ರೇಕ್ಷಕರು ನೋಡಿದ್ದಾರೆ. ಈ 'ರಾಮ್ ಯುಗ್' ಮೂಲಕ ದೊಡ್ಡ ಮಟ್ಟದಲ್ಲಿ ಯುವ ಜನತೆ ತಲುಪಬೇಕು ಎಂಬುದು ಕುನಾಲ್ ಆಶಯವಾಗಿತ್ತು.