ಮತ್ತೆ ಒಂದಾಯ್ತು 'ಖರಾಬು' ಜೋಡಿ; ಒಟ್ಟಿಗೆ ಕೆಲಸ ಮಾಡಲಿದ್ದಾರೆ ಚಂದನ್‌ ಶೆಟ್ಟಿ & ನಂದ ಕಿಶೋರ್!

ಈಚೆಗಷ್ಟೇ ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಜೊತೆ 'ಪೊಗರು' ಸಿನಿಮಾ ಮಾಡಿದ್ದ ನಿರ್ದೇಶಕ ನಂದ ಕಿಶೋರ್ ಈಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಹೊಸ ಪ್ರಾಜೆಕ್ಟ್‌ಗೂ ಅವರೊಂದಿಗೆ ಚಂದನ್ ಶೆಟ್ಟಿ ಕೆಲಸ ಮಾಡಲಿದ್ದಾರೆ.

ಮತ್ತೆ ಒಂದಾಯ್ತು 'ಖರಾಬು' ಜೋಡಿ; ಒಟ್ಟಿಗೆ ಕೆಲಸ ಮಾಡಲಿದ್ದಾರೆ ಚಂದನ್‌ ಶೆಟ್ಟಿ & ನಂದ ಕಿಶೋರ್!
Linkup
ಧ್ರುವ ಸರ್ಜಾ '' ಚಿತ್ರ ತೆರೆಕಾಣುವುದಕ್ಕೂ ಮುನ್ನ ಭಾರಿ ಸೌಂಡು ಮಾಡಿದ್ದು 'ಖರಾಬು' ಸಾಂಗ್. ಯೂಟ್ಯೂಬ್‌ನಲ್ಲಿ ಕೋಟಿಗಟ್ಟಲೇ ವೀವ್ಸ್ ಪಡೆದುಕೊಂಡು, ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿತು. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವುದಕ್ಕೆ ಈ ಹಾಡು ಕೂಡ ಕಾರಣವಾಯ್ತು ಅಂದರೆ ಅತಿಶಯೋಕ್ತಿ ಅಲ್ಲ. ಅಂದಹಾಗೆ, ಆ ಸಿನಿಮಾಗೆ ನಿರ್ದೇಶನ ಮಾಡಿದವರು ನಂದ ಕಿಶೋರ್. ಇದೀಗ ಅವರು ಮತ್ತೊಂದು ಹೊಸ ಸಿನಿಮಾ ಶುರು ಮಾಡಿದ್ದು, ಅದಕ್ಕೂ ಚಂದನ್ ಶೆಟ್ಟಿ ಅವರಿಂದಲೇ ಸಂಗೀತ ನಿರ್ದೇಶನ ಮಾಡಿಸುತ್ತಿದ್ದಾರೆ! ಜೊತೆ ಹೊಸ ಸಿನಿಮಾ! ಪೊಗರು ಆದಮೇಲೆ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜುಗೆ ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. 'ಟಗರು' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದ ಗುಜ್ಜಲ್ ಪುರುಷೋತ್ತಮ್, ಈಗ ತಮ್ಮದೇ ಗುಜ್ಜಲ್ ಟಾಕೀಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಚೆಗಷ್ಟೇ ಹೊಸಪೇಟೆ ಬಳಿಯ ಶ್ರೀ ಕ್ಷೇತ್ರ ಹುಲಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಕೊರೊನಾ ಹಾವಳಿ ಕಡಿಮೆ ಆದ ಮೇಲೆ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ನಡೆಯಲಿದೆ. ಸದ್ಯ ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನಾಗಿ ಚಂದನ್ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 'ಕೊರೊನಾ ಎರಡನೇ ಅಲೆ ಮತ್ತು ಲಾಕ್‌ಡೌನ್‌ ಇರುವುದರಿಂದ ಚಿತ್ರೀಕರಣ ಸದ್ಯ ಆರಂಭವಾಗುವುದಿಲ್ಲ. ಇವೆಲ್ಲವೂ ಮುಗಿದ ನಂತರ ಸಿನಿಮಾದ ಟೈಟಲ್‌ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಲಾಗುವುದು. ಇದೊಂದು ಕಂಪ್ಲೀಟ್‌ ಯೂತ್‌ಫುಲ್‌ ಸ್ಟೋರಿಯಾಗಿದ್ದು, ಶ್ರೇಯಸ್‌ ಇದಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿದ್ದಾರೆ. ಸಾಕಷ್ಟು ಆ್ಯಕ್ಷನ್‌ ದೃಶ್ಯಗಳು ಸಹ ಸಿನಿಮಾದಲ್ಲಿವೆ' ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ಚಿತ್ರದ ನಂತರ ಶ್ರೇಯಸ್‌ ಅವರಿಗೆ ಆ್ಯಂಗ್ರಿ ಯಂಗ್‌ ಮ್ಯಾನ್‌ ಲುಕ್‌ ಬರಲಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಪ್ರಸ್ತುತ ಈ ಕೊರೊನಾ ಆತಂಕ ದೂರವಾಗಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಮೊದಲ ಹಾಗೆ ಆರಂಭವಾಗಲಿ ಎನ್ನುವುದೇ ಚಿತ್ರತಂಡದ ಆಶಯ. ಈ ಸಿನಿಮಾಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. 'ಪೊಗರು' ಸೇರಿದಂತೆ ನಂದ ಕಿಶೋರ್ ಅವರ ಬಹುತೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಪ್ರಶಾಂತ್ ರಾಜಪ್ಪ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ.