ನಟ ಶರಣ್‌ ಬದುಕಿನಲ್ಲಿ ಸೆಪ್ಟೆಂಬರ್ 7 ಮರೆಯಲಾರದಂತಹ ದಿನ; ಕಾರಣ ಏನಿರಬಹುದು?

ಕನ್ನಡ ಸಿನಿಮಾರಂಗದಲ್ಲಿ ಅನೇಕ ವರ್ಷಗಳ ಕಾಲ ಪೋಷಕ ಪಾತ್ರಗಳನ್ನು ಮಾಡಿ, ಆನಂತರ ಹೀರೋ ಆಗಿ ಸಾಲು ಸಾಲು ಸಿನಿಮಾಗಳನ್ನು ನೀಡಿದ ನಟ ಶರಣ್. ಅಂದಹಾಗೆ, ಶರಣ್‌ಗೆ ಸೆಪ್ಟೆಂಬರ್ 7 ಎಂದಿಗೂ ಮರೆಯಲಾರದ ದಿನವಂತೆ! ಕಾರಣವೇನು?

ನಟ ಶರಣ್‌ ಬದುಕಿನಲ್ಲಿ ಸೆಪ್ಟೆಂಬರ್ 7 ಮರೆಯಲಾರದಂತಹ ದಿನ; ಕಾರಣ ಏನಿರಬಹುದು?
Linkup
ಕನ್ನಡದ ಜನಪ್ರಿಯ ಹೀರೋಗಳಲ್ಲಿ ನಟ ಕೂಡ ಒಬ್ಬರು. ಹಲವಾರು ವರ್ಷಗಳ ಕಾಲ ಪೋಷಕ ಪಾತ್ರ, ಹಾಸ್ಯ ಪಾತ್ರಗಳಿಂದ ಗುರುತಿಸಿಕೊಂಡ ಶರಣ್, ತಮ್ಮ 100ನೇ ಸಿನಿಮಾದಲ್ಲಿ ಹೀರೋ ಆದವರು. ಅದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಇಂಥ ಶರಣ್‌ ಬದುಕಿಗೆ ಸೆ.7 ಯಾವಾಗಲೂ ಸ್ಪೆಷಲ್. ಕಾರಣವೇನು ಅಂತೀರಾ? ಅದಕ್ಕೊಂದು ಬಲವಾದ ಕಾರಣ ಇದೆ. 2012 ಸೆ.7ರಂದು ಶರಣ್ ಪೂರ್ಣಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡಿದ್ದ '' ಸಿನಿಮಾ ತೆರೆಕಂಡಿತ್ತು. ಇಂದಿಗೆ ಆ ಸಿನಿಮಾ ತೆರೆಕಂಡು ಭರ್ತಿ 9 ವರ್ಷಗಳಾಯ್ತು. ದೊಡ್ಡ ತಿರುವು ನೀಡಿದಂತಹ ದಿನ'ಇಂದಿಗೆ ರ‍್ಯಾಂಬೊ 1 ಚಿತ್ರ ತೆರೆಯ ಮೇಲೆ ಕಂಡುಬಂದು 9 ವರ್ಷಗಳು ಪೂರ್ಣಗೊಂಡಿದೆ. 7/9/2012... ನನ್ನ ಜೀವನದಲ್ಲಿ ಮರೆಯಲಾರದಂತಹ ಹಾಗೂ ನನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ತಿರುವು ನೀಡಿದಂತಹ ದಿನ. ರ‍್ಯಾಂಬೊ ನನ್ನ ಬದುಕಿಗೆ ಹೊಸ ಆಯಾಮ ಕೊಟ್ಟು ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹೆಚ್ಚು ಮಾಡಿಸಿದ ಒಂದು ಅಕ್ಷಯ ಪಾತ್ರೆ ಎಂದರೆ ತಪ್ಪಾಗಲಾರದು. ಈ ಯಶಸ್ಸಿಗೆ ಕಾರಣಕರ್ತರಾದ ನನ್ನ ಇಡೀ ರ‍್ಯಾಂಬೊ ತಂಡ ಹಾಗೂ ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು' ಎಂದು ಶರಣ್ ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದ ಅಟ್ಲಾಂಟ ನಾಗೇಂದ್ರ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ತರುಣ್ ಸುಧೀರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಇಡೀ ತಂಡಕ್ಕೆ ಶರಣ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇನ್ನು, ಇದೇ ಸಿನಿಮಾದ ಮೂಲಕ ನಟರಾಗಿದ್ದ ತರುಣ್ ಸುಧೀರ್ ನಿರ್ದೇಶನ ವಿಭಾಗದತ್ತ ಎಂಟ್ರಿ ಕೊಟ್ಟರು. ಇದೀಗ ಅವರು 'ಚೌಕ', 'ರಾಬರ್ಟ್'ನಂತಹ ಹಿಟ್ ಸಿನಿಮಾಗಳನ್ನು ನೀಡಿರುವುದು ವಿಶೇಷ. ಇನ್ನು, ಶರಣ್ ಹೀರೋ ಆಗುವುದಕ್ಕೂ ಕನ್ನಡದ ಬಹುತೇಕ ಎಲ್ಲ ನಟರ ಜೊತೆಗೆ ಕಾಮಿಡಿ ನಟನಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. 'ರ‍್ಯಾಂಬೊ' ಮೂಲಕ ಸಕಲ ಸಿದ್ಧತೆಗಳೊಂದಿಗೆ ಅವರು ಹೀರೋ ಆದರು. ವಿಶೇಷವೆಂದರೆ, ಆ ಸಿನಿಮಾಕ್ಕೆ ಅವರು ನಿರ್ಮಾಪಕರು ಕೂಡ. ಎಂ.ಎಸ್. ಶ್ರೀನಾಥ್ ನಿರ್ದೇಶನದ ಆ ಸಿನಿಮಾಗೆ ತರುಣ್ ಸುಧೀರ್ ಸ್ಕ್ರಿಪ್ಟ್ ಬರೆದಿದ್ದರು. ಶರಣ್ ಎದುರು ನಾಯಕಿಯಾಗಿ ಮಾಧುರಿ ಇಟಗಿ ಕಾಣಿಸಿಕೊಂಡಿದ್ದರು. ತಬಲಾ ನಾಣಿ ಮತ್ತು ಉಮಾಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಾಧು ಕೋಕಿಲ, ರಂಗಾಯಣ ರಘು, , ಎಂ.ಎಸ್. ಉಮೇಶ್‌, ನವೀನ್ ಕೃಷ್ಣ ಪೋಷಕ ಪಾತ್ರಗಳನ್ನು ಮಾಡಿದ್ದರು. ಸದ್ಯ ಶರಣ್ 'ಅವತಾರ್ ಪುರುಷ' ಸಿನಿಮಾ ಮಾಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರಲಿರುವ ಈ ಸಿನಿಮಾದ ಕೆಲಸಗಳು ಬಹುತೇಕ ಮುಕ್ತಾಯಗೊಂಡಿವೆ. ಇದರಲ್ಲಿ ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ನಿಶ್ವಿಕಾ ನಾಯ್ಡು ಜೊತೆಗೆ 'ಗುರು ಶಿಷ್ಯರು' ಸಿನಿಮಾವನ್ನು ಶರಣ್ ಮಾಡುತ್ತಿದ್ದಾರೆ. ಜಡೇಶ್‌ಕುಮಾರ್ ಅದರ ನಿರ್ದೇಶಕ.