Rajinikanth: ತಲೈವಾ ರಜನಿಕಾಂತ್ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗರಿ

ಸೂಪರ್ ಸ್ಟಾರ್ ರಜನಿಕಾಂತ್‌ಗೆ ಭಾರತೀಯ ಚಿತ್ರರಂಗದ ಸರ್ವೋನ್ನತ ಪುರಸ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಸಿಕ್ಕಿದೆ.

Rajinikanth: ತಲೈವಾ ರಜನಿಕಾಂತ್ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗರಿ
Linkup
ಕಾಲಿವುಡ್‌ನ ಜನಪ್ರಿಯ ನಟ, ದಕ್ಷಿಣ ಭಾರತದ ಸ್ಟಂಟ್ ಗಾಡ್, ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್‌ಗೆ ಭಾರತೀಯ ಚಿತ್ರರಂಗದ ಸರ್ವೋನ್ನತ ಪುರಸ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಸಿಕ್ಕಿದೆ. ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಅವರಿಗೆ 51ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕೆಲ ತಿಂಗಳ ಹಿಂದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಘೋಷಿಸಿದ್ದರು. ಇವತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಜನಿಕಾಂತ್ ಅವರಿಗೆ ನೀಡಲಾಗಿದೆ. 67ನೇ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ಜರುಗಿತು. ಈ ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿಯನ್ನು ನೀಡಿದ ಗೌರವಿಸಿದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ರಜನಿಕಾಂತ್ ಸಂತಸಗೊಂಡರು. ಪ್ರಶಸ್ತಿಯನ್ನು ಸ್ವೀಕರಿಸಲು ಕುಟುಂಬ ಸಮೇತ ನಟ ರಜನಿಕಾಂತ್ ದೆಹಲಿಗೆ ತೆರಳಿದ್ದರು. ಕೆ.ಬಾಲಚಂದರ್‌ಗೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್ ‘’ಪ್ರತಿಷ್ಟಿತ ಪಡೆಯುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಕೇಂದ್ರ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಪ್ರಶಸ್ತಿಯನ್ನು ನಾನು ನನ್ನ ಗುರುಗಳಾದ ಕೆ.ಬಾಲಚಂದರ್ ಅವರಿಗೆ ಅರ್ಪಿಸುತ್ತೇನೆ. ಅವರಿಗೆ ನಾನು ಆಭಾರಿ. ನನಗೆ ಉತ್ತಮ ಮೌಲ್ಯಗಳು ಹಾಗೂ ಆಧ್ಯಾತ್ಮಿಕತೆಯನ್ನು ಕಲಿಸಿ ಬೆಳೆಸಿದ ನನ್ನ ಸಹೋದರ ಸತ್ಯನಾರಾಯಣ್ ಗಾಯಕ್ವಾಡ್ ಅವರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಕರ್ನಾಟಕದಲ್ಲಿರುವ ನನ್ನ ಸ್ನೇಹಿತ ರಾಜ್ ಬಹದ್ದೂರ್ ಅವರಿಗೂ ನನ್ನ ಧನ್ಯವಾದಗಳು. ನಾನು ಬಸ್ ಡ್ರೈವರ್ ಆಗಿದ್ದಾಗ, ನನ್ನಲ್ಲಿನ ನಟನೆಯ ಪ್ರತಿಭೆಯನ್ನು ಗುರುತಿಸಿ ಸಿನಿಮಾಗೆ ಸೇರುವಂತೆ ಪ್ರೋತ್ಸಾಹ ಕೊಟ್ಟಿದ್ದೇ ಅವರು. ನನ್ನ ಎಲ್ಲಾ ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು, ವಿತರಕರು, ಪತ್ರಿಕೆ ಮತ್ತು ಮಾಧ್ಯಮ ಹಾಗೂ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು’’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ರಜನಿಕಾಂತ್ ಹೇಳಿದ್ದಾರೆ. 12ನೇ ದಕ್ಷಿಣ ಭಾರತೀಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ 12ನೇ ದಕ್ಷಿಣ ಭಾರತೀಯ ನಟ ರಜನಿಕಾಂತ್. ಈ ಹಿಂದೆ ನಟಸಾರ್ವಭೌಮ ಡಾ.ರಾಜ್‌ಕುಮಾರ್, ಅಕ್ಕಿನೇನಿ ನಾಗೇಶ್ವರ್ ರಾವ್, ಕೆ.ಬಾಲಚಂದರ್ ಸೇರಿದಂತೆ 11 ಮಂದಿ ದಕ್ಷಿಣ ಭಾರತೀಯರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದರು. ಇಂದು ರಜನಿಕಾಂತ್ ಪಾಲಿಗೆ ವಿಶೇಷ ದಿನ ಇಂದು ಒಂದ್ಕಡೆ ರಜನಿಕಾಂತ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರೆ, ಇನ್ನೊಂದ್ಕಡೆ ತಮ್ಮ ಪುತ್ರಿಯ ಆಪ್‌ವೊಂದು ಇಂದೇ ಲಾಂಚ್ ಆಗುತ್ತಿದೆ. ಹಾಗೇ, ಇದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್ ಅಳಿಯ ಧನುಷ್ ಕೂಡ ಪ್ರಶಸ್ತಿ ಸ್ವೀಕರಿಸಿದರು. ಹೀಗಾಗಿ ಇಂದು (ಅಕ್ಟೋಬರ್ 25) ರಜನಿಕಾಂತ್ ಪಾಲಿಗೆ ವಿಶೇಷ ದಿನವಾಗಿದೆ. ಪ್ರಶಸ್ತಿ ಪ್ರದಾನ ದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಬಾಲಿವುಡ್ ನಟಿ ಕಂಗನಾ ರಣಾವತ್ ಸ್ವೀಕರಿಸಿದರು. ‘ಮಣಿಕರ್ಣಿಕಾ’ ಮತ್ತು ‘ಪಂಗಾ’ ಚಿತ್ರದ ನಟನೆಗಾಗಿ ನಟಿ ಕಂಗನಾ ರಣಾವತ್‌ಗೆ ಪ್ರಶಸ್ತಿ ಲಭಿಸಿದೆ. ‘ಅಸುರನ್’ ಚಿತ್ರದ ನಟನೆಗಾಗಿ ತಮಿಳು ನಟ ಧನುಷ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಭೋಂಸ್ಲೇ’ ಚಿತ್ರದ ನಟನೆಗೆ ಮನೋಜ್ ಬಾಜ್‌ಪೇಯಿ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.