'ಪುಷ್ಪ' ನಂತರ ಅಲ್ಲು ಅರ್ಜುನ್ ಕೈಯಲ್ಲಿರುವ ಸಿನಿಮಾಗಳೆಷ್ಟು? ಇದು ಫ್ಯಾನ್ಸ್‌ಗೆ ಥ್ರಿಲ್ ಎನಿಸುವ ಸುದ್ದಿ!

ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್‌ಗೆ ಈಗ ಭಾರಿ ಬೇಡಿಕೆ ಇದೆ. ಅದರಲ್ಲೂ 'ಅಲಾ ವೈಕುಂಠಪುರಮುಲೋ' ಹಿಟ್ ಆಗುತ್ತಿದ್ದಂತೆಯೇ ಅವರತ್ತ ಬಾಲಿವುಡ್‌ ಕೂಡ ತಿರುಗಿ ನೋಡುತ್ತಿದೆ. ಸದ್ಯ 'ಪುಷ್ಪ' ಸಿನಿಮಾವನ್ನು ಪ್ಯಾನ್ ಇಂಡಿಯಾದ ರೇಂಜ್‌ನಲ್ಲಿ ಮಾಡುತ್ತಿರುವ ಅಲ್ಲು ಕೈಯಲ್ಲಿ ಈಗ ಎಷ್ಟು ಸಿನಿಮಾಗಳಿವೆ?

'ಪುಷ್ಪ' ನಂತರ ಅಲ್ಲು ಅರ್ಜುನ್ ಕೈಯಲ್ಲಿರುವ ಸಿನಿಮಾಗಳೆಷ್ಟು? ಇದು ಫ್ಯಾನ್ಸ್‌ಗೆ ಥ್ರಿಲ್ ಎನಿಸುವ ಸುದ್ದಿ!
Linkup
ಟಾಲಿವುಡ್‌ನ ಐಕಾನ್ ಸ್ಟಾರ್ ಎನಿಸಿಕೊಂಡಿರುವ ನಟ '' ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ. ಅವರ 'ಪುಷ್ಪ' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಳ್ಳಲಾಗಿದೆ. ಅಲ್ಲದೆ, ಆ ಸಿನಿಮಾ 2 ಭಾಗದಲ್ಲಿ ತೆರೆಗೆ ಬರಲಿದೆ. ಅಂದಹಾಗೆ, 'ಪುಷ್ಪ' ನಂತರ ಮುಂದೇನು? ಅಲ್ಲು ಅರ್ಜುನ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ? ಆ ಕುರಿತು ಇಲ್ಲಿದೆ ಅಪ್‌ಡೇಟ್‌. ಅಲ್ಲು ಕೈಯಲ್ಲಿ ಆರು ಸಿನಿಮಾಗಳು! 'ಪುಷ್ಪ' ಸಿನಿಮಾದ ಪಾರ್ಟ್ 1ರ ಕೆಲಸಗಳು ಮುಗಿಯುತ್ತಿದ್ದಂತೆಯೇ, ಬಹಳ ಹಿಂದೆಯೇ ಘೋಷಣೆಯಾಗಿದ್ದ 'ಐಕಾನ್‌' ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಅಲ್ಲು ಅರ್ಜುನ್. 'ವಕೀಲ್ ಸಾಬ್' ಖ್ಯಾತಿಯ ವೇಣು ಶ್ರೀರಾಮ್ ನಿರ್ದೇಶನದ ಈ ಸಿನಿಮಾವನ್ನು 'ದಿಲ್' ರಾಜು ನಿರ್ಮಾಣ ಮಾಡಲಿದ್ದಾರೆ. ಅದರ ಕೆಲಸ ಮುಗಿಯುತ್ತಿದ್ದಂತೆಯೇ, 'ಪುಷ್ಪ' ಚಿತ್ರದ ಪಾರ್ಟ್‌ 2 ಕೆಲಸಗಳಿಗೆ ಅಲ್ಲು ಮರಳಲಿದ್ದಾರೆ. ಅದು ಮುಗಿದ ಮೇಲೆ ಸಾಲು ಸಾಲು ನಿರ್ದೇಶಕರಿಗೆ ಕಾಲ್‌ಶೀಟ್ ನೀಡಿದ್ದಾರೆ ಅವರು. ಬನ್ನಿ ವಾಸು ನೀಡಿದ ಮಾಹಿತಿ ಏನು?ಅಲ್ಲು ಅರ್ಜುನ್ ಆಪ್ತ, ನಿರ್ಮಾಪಕ ಬನ್ನಿ ವಾಸು ಅವರು ಈಚೆಗೆ ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 'ಪುಷ್ಪ ಸಿನಿಮಾದ 2 ಪಾರ್ಟ್‌ಗಳು ತೆರೆಕಂಡ ಮೇಲೆ ಅನೇಕ ನಿರ್ದೇಶಕರಿಗೆ ಅಲ್ಲು ಅರ್ಜುನ್‌ ಕಾಲ್‌ಶೀಟ್ ನೀಡಿದ್ದಾರೆ. ತಮಿಳು ನಿರ್ದೇಶಕ ಎ.ಆರ್. ಮುರುಗದಾಸ್‌ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ. 'ಸರೈನೋಡು' ಸಿನಿಮಾ ಮಾಡಿದ್ದ ಬೋಯಪಾಟಿ ಶ್ರೀನು ಜೊತೆಗೆ ಒಂದು ಸಿನಿಮಾದಲ್ಲಿ ಕೆಲಸ ಮಾಡಲಿದ್ದು, ಆ ಚಿತ್ರವನ್ನು ಅಲ್ಲು ಅರ್ಜುನ್ ಅವರ ಹೋಮ್ ಬ್ಯಾನರ್ ಗೀತಾ ಆರ್ಟ್ಸ್‌ ನಿರ್ಮಿಸಲಿದೆ' ಎಂದಿದ್ದಾರೆ ಬನ್ನಿ ವಾಸು. ಇದಾದ ಬಳಿಕ ಸೆನ್ಸೇಷನಲ್‌ ಡೈರೆಕ್ಟರ್‌ ಕೊರಟಾಲ ಶಿವ ಅವರೊಂದಿಗೂ ಕೂಡ ಅಲ್ಲು ಅರ್ಜುನ್ ಕೈ ಜೋಡಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು, 'ಕೆಜಿಎಫ್‌' ನಂತರ ಪ್ಯಾನ್ ಇಂಡಿಯಾ ಡೈರೆಕ್ಟರ್ ಎನಿಸಿಕೊಂಡಿರುವ ಪ್ರಶಾಂತ್ ನೀಲ್, ಅವರು ಈಗಾಗಲೇ ಪ್ರಭಾಸ್ ಜೊತೆಗೆ ಸಲಾರ್‌ ಮಾಡುತ್ತಿದ್ದು, ಅದಾದ ಬಳಿಕ ಜೂ.ಎನ್‌ಟಿಆರ್ ಜೊತೆಗೂ ಒಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಇದೀಗ ನೀಲ್ ಜೊತೆಗೆ ಅಲ್ಲು ಅರ್ಜುನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.