ನಗರಗಳಿಂದ ಹೊರಬಂದು ಶಾಶ್ವತ 'ವರ್ಕ್‌ ಫ್ರಮ್‌ ಹೋಮ್' ಅನುಸರಿಸುವ ಕಾಲ ಬಂದಿದೆ: ನಿತಿನ್‌ ಕಾಮತ್‌

ಮಹಾನಗರಗಳನ್ನು ತೊರೆದು ಪಟ್ಟಣ ಪ್ರದೇಶ ಹಾಗೂ ಹಳ್ಳಿಗಳಿಗೆ ಹೋಗುವುದರಿಂದ ಜೀವನೋಪಾಯ ಸೃಷ್ಟಿಯಾಗುವ ಜತೆಗೆ ಇಂಗಾಲದ ಹೊರಸೂಸುವಿಕೆಯನ್ನೂ ಕಡಿಮೆ ಮಾಡಬಹುದು ಎಂದು ಉದ್ಯಮಿ ನಿತಿನ್‌ ಕಾಮತ್‌ ತಿಳಿಸಿದ್ದಾರೆ.

ನಗರಗಳಿಂದ ಹೊರಬಂದು ಶಾಶ್ವತ 'ವರ್ಕ್‌ ಫ್ರಮ್‌ ಹೋಮ್' ಅನುಸರಿಸುವ ಕಾಲ ಬಂದಿದೆ: ನಿತಿನ್‌ ಕಾಮತ್‌
Linkup
ಹೊಸದಿಲ್ಲಿ: ಮಹಾನಗರಗಳನ್ನು ತೊರೆದು ಪಟ್ಟಣ ಪ್ರದೇಶ ಹಾಗೂ ಹಳ್ಳಿಗಳಿಗೆ ಹೋಗುವುದರಿಂದ ಜೀವನೋಪಾಯ ಸೃಷ್ಟಿಯಾಗುವ ಜತೆಗೆ ಇಂಗಾಲದ ಹೊರಸೂಸುವಿಕೆಯನ್ನೂ ಕಡಿಮೆ ಮಾಡಬಹುದು ಎಂದು ಉದ್ಯಮಿ ನಿತಿನ್‌ ಕಾಮತ್‌ ತಿಳಿಸಿದ್ದಾರೆ. ದೇಶದ ಬೃಹತ್‌ ನಗರಗಳು ಉಸಿರುಗಟ್ಟಿಸುತ್ತಿವೆ. ನಗರಗಳು ಪ್ರತಿ ಬಾರಿಯು ಯಾವುದಾದರೊಂದು ಸಮಸ್ಯೆಯಲ್ಲಿ ಸಿಲುಕಿರುತ್ತವೆ. ಇಂದು ಕೋವಿಡ್‌ ಸಮಸ್ಯೆ ಜತೆಗೆ ನೀರಿನ ಕೊರತೆ, ಮಾಲಿನ್ಯ, ಪ್ರವಾಹ ಇತ್ಯಾದಿ ಕೊರತೆಗಳು ಸಾಮಾನ್ಯವೆನಿಸಿಬಿಟ್ಟಿವೆ. ಹೀಗಾಗಿ ಮಹಾನಗರಗಳಿಂದ ಮೊದಲು ಗಂಟುಮೂಟೆ ಕಟ್ಟಬೇಕಾದ ಕಾಲ ಬಂದಿದೆ ಎಂದು ನಿತಿನ್‌ ಕಾಮತ್ ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಈಗಾಗಲೇ ಸಾಧ್ಯವಾದಷ್ಟು ಉದ್ಯೋಗಿಗಳನ್ನು ಶಾಶ್ವತ ಕೆಲಸಕ್ಕೆ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದೆ. "ನಾವು ಈಗ ನಮ್ಮ ಗ್ರಾಹಕ ಬೆಂಬಲ ತಂಡಕ್ಕಾಗಿ ಶಾಶ್ವತ ವರ್ಕ್ ಫ್ರಮ್‌ ಹೋಮ್ ಸ್ಥಾನಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಇತರ ತಂಡಗಳಿಗೂ ಸಹ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಇತರ ವ್ಯವಹಾರಗಳು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವಂತೆ ಇರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮುಂದಿನ ನಡೆ ಸಣ್ಣ ನಗರಗಳತ್ತ ಎಂದು ನಿತಿನ್‌ ಕಾಮತ್‌ ಒಬ್ಬರೇ ಹೇಳಿಲ್ಲ. ಇನ್ನೊಬ್ಬ ಬಿಲಿಯನೇರ್, ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಅವರು ದೀರ್ಘಕಾಲದಿಂದ ವಕೀಲರಾಗಿದ್ದಾರೆ. ಇವರು ಬಹಳ ಹಿಂದೆಯೇ ತಮಿಳುನಾಡಿನ ಮಾಥಲಂಪರೈ ಎಂಬ ಸಣ್ಣ ಹಳ್ಳಿಗೆ ತೆರಳಿ ಅಲ್ಲಿಂದಲೇ ಜೊಹೊ ಕಂಪನಿ ನಡೆಸುತ್ತಿದ್ದಾರೆ. ಆದರೆ, ಕೋವಿಡ್‌-19 ಆವರಿಸಿದ ನಂತರ ವರ್ಕ್‌ ಫ್ರಂ ಹೋಮ್‌ ಸಾಮಾನ್ಯವಾಗಿಬಿಟ್ಟಿದೆ. ಸಾವಿರಾರು ಉದ್ಯೋಗಿಗಳು ಮಹಾನಗರಗಳಿಂದ ಪಲಾಯನಗೊಂಡು ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಈ ಬೆನ್ನಲ್ಲೇ ಬಹುತೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವುದನ್ನು ಅಳವಡಿಸಿಕೊಂಡಿವೆ.