ಎಕ್ಸಿಟ್‌ ಪೋಲ್‌: ಕೇರಳದಲ್ಲಿ ಮತ್ತೆ ಪಿಣರಾಯಿ ದರ್ಬಾರ್‌, ಕಾಂಗ್ರೆಸ್‌ಗೆ ಭಾರಿ ಮುಖಭಂಗ; ಬಿಜೆಪಿಗೆಷ್ಟು ಸೀಟ್‌?

ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ಸತತ ಎರಡನೇ ಅವಧಿಗೆ ಕೇರಳದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಕನಿಷ್ಠ ಮೂರು ಸಮೀಕ್ಷೆಗಳು ಹೇಳಿವೆ. ಇನ್ನೂ ಹಲವು ಸಮೀಕ್ಷೆಗಳು ಇದಕ್ಕೆ ಧ್ವನಿಗೂಡಿಸುವ ಸಾಧ್ಯತೆ ಇದೆ.​​

ಎಕ್ಸಿಟ್‌ ಪೋಲ್‌: ಕೇರಳದಲ್ಲಿ ಮತ್ತೆ ಪಿಣರಾಯಿ ದರ್ಬಾರ್‌, ಕಾಂಗ್ರೆಸ್‌ಗೆ ಭಾರಿ ಮುಖಭಂಗ; ಬಿಜೆಪಿಗೆಷ್ಟು ಸೀಟ್‌?
Linkup
ತಿರುವನಂತರಪುರಂ: ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಇತಿಹಾಸ ಇರುವ ಕೇರಳದಲ್ಲಿ ಕಳೆದ 4 ದಶಕದಲ್ಲೇ ಮೊದಲ ಬಾರಿಗೆ ಒಂದೇ ಪಕ್ಷ ಸತತ ಎರಡು ಚುನಾವಣೆಗಳನ್ನು ಗೆಲ್ಲಲಿದೆ. ಹೀಗಂತ ಎಲ್ಲಾ ಗಳು ಹೇಳುತ್ತಿವೆ. ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸತತ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಟಿವಿ 9- ಪೋಲ್‌ಸ್ಟ್ರಾಟ್‌, ರಿಪಬ್ಲಿಕ್‌ ಟಿವಿ-ಸಿಎನ್‌ಎಕ್ಸ್, ಇಂಡಿಯಾ ಟುಡೇ- ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಗಳು ಹೇಳಿವೆ. ಇನ್ನೂ ಹಲವು ಸಮೀಕ್ಷೆಗಳು ಇದಕ್ಕೆ ಧ್ವನಿಗೂಡಿಸುವ ಸಾಧ್ಯತೆ ಇದೆ. ಅಚ್ಚರಿಯ ಸಂಗತಿ ಎಂದರೆ ಎರಡು ವರ್ಷ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ 20 ರಲ್ಲಿ 19 ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್‌) ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸುತ್ತಿದೆ. ಜತೆಗೆ ಭಾರಿ ಪ್ರಯತ್ನ ನಡೆಸಿಯೂ ಈ ಬಾರಿಯೂ ಕೇರಳದಲ್ಲಿ ಬಿಜೆಪಿ ಹೇಳಿಕೊಳ್ಳುವ ಸಾಧನೆ ಮಾಡುತ್ತಿಲ್ಲ ಎಂಬುದಾಗಿ ಸಮೀಕ್ಷೆಗಳು ಹೇಳಿವೆ. ಸಮೀಕ್ಷೆಗಳ ಚಿತ್ರಣ ಹೀಗಿದೆ,
ಮೈತ್ರಿಕೂಟ/ಸಮೀಕ್ಷೆ ಸಂಸ್ಥೆ ಟಿವಿ 9 - ಪೋಲ್‌ಸ್ಟ್ರಾಟ್‌ ರಿಪಬ್ಲಿಕ್‌ ಟಿವಿ-ಸಿಎನ್‌ಎಕ್ಸ್ ಇಂಡಿಯಾ ಇಂಡಿಯಾ ಟುಡೇ - ಆಕ್ಸಿಸ್‌ ಮೈ ಇಂಡಿಯಾ
ಎಲ್‌ಡಿಎಫ್‌ 70-80 72-80 104-120
ಯುಡಿಎಫ್‌ 59-69 58-64 20-36
ಬಿಜೆಪಿ 0-2 1-5 0-2
ಇತರ - - 0-2
ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಯಂತೂ ಕೇರಳದಲ್ಲಿ ಎಲ್‌ಡಿಎಫ್‌ 104-120 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಬಿಜೆಪಿ ಗರಿಷ್ಠ 1-5 ಸ್ಥಾನ ಗಳಿಸಲಿದೆ ಎಂದು ರಿಪಬ್ಲಿಕ್‌ ಟಿವಿ-ಸಿಎನ್‌ಎಕ್ಸ್‌ ಹೇಳಿದೆ. ಯುಡಿಎಫ್‌ ಪಾಲಿಗೆ ಅತೀ ಹೆಚ್ಚಿನ ಸೀಟು ನೀಡಿರುವ ಟಿವಿ 9 - ಪೋಲ್‌ಸ್ಟ್ರಾಟ್‌ ಸಮೀಕ್ಷೆ ನಿಜವಾದರೂ ಯುಡಿಎಫ್‌ ಅಧಿಕಾರಕ್ಕೇರುವುದಿಲ್ಲ. ಈ ಸಮೀಕ್ಷೆ ಹೇಳಿದಂತೆ ಗರಿಷ್ಠ 69 ಸ್ಥಾನಗಳನ್ನು ಯುಡಿಎಫ್‌ ಗೆದ್ದರೂ ಮ್ಯಾಜಿಕ್‌ ನಂಬರ್‌ನಿಂದ ದೂರವೇ ಇರಲಿದ್ದು, ಎಲ್‌ಡಿಎಫ್‌ ಸರಕಾರ ರಚಿಸಲಿದೆ. ಹೀಗಾಗಿ ಯುಡಿಎಫ್‌ ಕೇರಳದಲ್ಲಿ ಸರಕಾರ ರಚಿಸಲಿದೆ ಎಂದು ಯಾವೊಂದು ಸಮೀಕ್ಷೆಯೂ ಹೇಳುತ್ತಿಲ್ಲ. ವಿಧಾನಸಭೆಯಲ್ಲಿ 140 ಶಾಸಕ ಸ್ಥಾನಗಳಿದ್ದು, ಸರಳ ಬಹುಮತಕ್ಕೆ 71 ಸೀಟುಗಳು ಅಗತ್ಯವಾಗಿವೆ. ಕೇರಳ ಸೇರಿ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೇ 2 ರಂದು ನಡೆಯಲಿದೆ.