ತೆಲುಗಿನ 'ಸ್ಟಾರ್' ನಟನ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ; ಮತ್ತೊಂದು ಬಿಗ್ ಆಫರ್‌ ಪಡೆದ 'ಕರಾವಳಿ ಬೆಡಗಿ'

ಟಾಲಿವುಡ್‌ನಲ್ಲಿ ಹೊಸ ಹವಾ ಸೃಷ್ಟಿಸಿರುವ ನಟಿ ಪೂಜಾ ಹೆಗ್ಡೆ. ಒಂದಾದ ಮೇಲೊಂದು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರ 'ರಾಧೆ ಶ್ಯಾಮ್‌' ರಿಲೀಸ್‌ಗೆ ಸಿದ್ಧವಾಗಿದ್ದು, ಮತ್ತೊಂದು ಸ್ಟಾರ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ತೆಲುಗಿನ 'ಸ್ಟಾರ್' ನಟನ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ; ಮತ್ತೊಂದು ಬಿಗ್ ಆಫರ್‌ ಪಡೆದ 'ಕರಾವಳಿ ಬೆಡಗಿ'
Linkup
ನಟಿ ಪೂಜಾ ಹೆಗ್ಡೆಗೆ ಟಾಲಿವುಡ್‌ನಲ್ಲಿ ಭಾರಿ ಬೇಡಿಕೆ ಇದೆ. ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅವರು, ಈಗ ಸಾಕಷ್ಟು ಅವಕಾಶಗಳು ಕೈಯಲ್ಲಿಟ್ಟುಕೊಂಡಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ನಟಿಸಿದ್ದ 'ಅಲಾ ವೈಕುಂಠಪುರಮುಲೋ' ಸಿನಿಮಾದಿಂದ ಭಾರಿ ಬ್ರೇಕ್ ಪಡೆದುಕೊಂಡಿರುವ ಪೂಜಾ ಈಗ ಮತ್ತೋರ್ವ ಸ್ಟಾರ್ ನಟನಿಗೆ ನಾಯಕಿಯಾಗಿದ್ದಾರೆ. ಯಾರು ಆ ಹೀರೋ? 'ಪ್ರಿನ್ಸ್‌' ಮಹೇಶ್ ಬಾಬು. ಹೌದು, ಮತ್ತು ತ್ರಿವಿಕ್ರಮ್‌ ಶ್ರೀನಿವಾಸ್‌ ಕಾಂಬಿನೇಷನ್‌ನ ಹೊಸ ಸಿನಿಮಾಗೆ ಇಂದು (ಫೆ.3) ಮುಹೂರ್ತ ನೆರವೇರಿದೆ. ಈ ವೇಳೆ ಚಿತ್ರದ ನಾಯಕಿಯಾಗಿ ಹೆಸರು ಅಂತಿಮಗೊಂಡಿದೆ. ಮೊದಲ ದೃಶ್ಯಕ್ಕೆ ಮಹೇಶ್ ಪತ್ನಿ ನಮ್ರತಾ ಶಿರೋಡ್ಕರ್ ಕ್ಲ್ಯಾಪ್ ಮಾಡಿದ್ದಾರೆ. ಈ ಹಿಂದೆ 'ಅತಡು' ಮತ್ತು 'ಖಲೇಜಾ' ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಮೂರನೇ ಬಾರಿಗೆ ಈ ಜೋಡಿ ಒಂದಾಗಿದೆ. ಮಹೇಶ್ ಬಾಬು ನಟನೆಯ 28ನೇ ಚಿತ್ರ ಇದಾಗಿರಲಿದ್ದು, ಸಿನಿಮಾಕ್ಕಿನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಸದ್ಯ ನಾಯಕಿಯ ಆಯ್ಕೆ ಅಂತಿಮಗೊಂಡಿದೆ. ಈ ಹಿಂದೆ 'ಮಹರ್ಷಿ' ಸಿನಿಮಾದಲ್ಲಿ ಮಹೇಶ್‌ ಬಾಬುಗೆ ನಾಯಕಿಯಾಗಿ ಪೂಜಾ ನಟಿಸಿದ್ದರು. ಇದೀಗ ಎರಡನೇ ಬಾರಿಗೆ ನಾಯಕಿಯಾಗುವ ಅಕವಾಶ ಅವರಿಗೆ ಸಿಕ್ಕಿದೆ. ತ್ರಿವಿಕ್ರಮ್‌ ಜೊತೆಗೆ ಪೂಜಾ ಹ್ಯಾಟ್ರಿಕ್ಅಂದಹಾಗೆ, ನಿರ್ದೇಶಕ ತ್ರಿವಿಕ್ರಮ್‌ಗೆ ಯಾರಾದರೂ ನಟಿಯರು ಇಷ್ಟವಾಗಿಬಿಟ್ಟರೆ, ಪ್ರತಿ ಸಿನಿಮಾಗೂ ಅವರನ್ನೇ ರಿಪೀಟ್ ಮಾಡುವುದು ವಾಡಿಕೆ. 'ಅತ್ತಾರಿಂಟಿಕಿ ದಾರೇದಿ', 'ಸನ್‌ ಆಫ್ ಸತ್ಯಮೂರ್ತಿ', 'ಅ ಆ' ಸಿನಿಮಾಗಳಿಗೆ ಸತತವಾಗಿ ಸಮಂತಾ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು ತ್ರಿವಿಕ್ರಮ್‌. ಇದೀಗ ಪೂಜಾ ಹೆಗ್ಡೆಗೆ ಅವರು ಬ್ಯಾಕ್ ಟು ಬ್ಯಾಕ್ ಚಾನ್ಸ್ ನೀಡುತ್ತಿದ್ದಾರೆ. 'ಅರವಿಂದ ಸಮೇತ ವೀರ ರಾಘವ', 'ಅಲಾ ವೈಕುಂಠಪುರಮುಲೋ' ಸಿನಿಮಾಗಳಲ್ಲಿ ಪೂಜಾಗೆ ಅವಕಾಶ ನೀಡಿದ್ದ ತ್ರಿವಿಕ್ರಮ್‌, ಈಗ ಮಹೇಶ್ ಬಾಬು ಸಿನಿಮಾಗೂ ಪೂಜಾ ಅವರೇ ನಾಯಕಿಯಾಗಿದ್ದಾರೆ. ಇನ್ನು, ಈ ಸಿನಿಮಾದಲ್ಲಿನ ಮಹೇಶ್ ಬಾಬು ಅವರ ಮನೆ ಹೈಲೈಟ್ ಆಗಲಿದ್ದು, ಅದಕ್ಕಾಗಿ ಪ್ಲಾನಿಂಗ್ ಶುರುವಾಗಿದೆ. ಆರ್ಟ್ ಡೈರೆಕ್ಟರ್ ಪ್ರಕಾಶ್ ಎಂಬುವವರು ಈ ಚಿತ್ರಕ್ಕಾಗಿ ಬೃಹತ್ ಮನೆಯ ಸೆಟ್ ನಿರ್ಮಾಣ ಮಾಡಲಿದ್ದಾರೆ. ಹೈದರಾಬಾದ್‌ನಲ್ಲಿ ತಲೆಯೆತ್ತಲಿರುವ ಈ ಬೃಹತ್ ಮನೆಯ ಸೆಟ್‌ಗಾಗಿ ಎಷ್ಟು ಖರ್ಚಾಗುತ್ತಿದೆ ಗೊತ್ತಾ? ಬರೋಬ್ಬರಿ 5 ಕೋಟಿ ರೂಪಾಯಿ! ಈ ಚಿತ್ರಕ್ಕೆ ಎಸ್‌.ರಾಧಾಕೃಷ್ಣ ಬಂಡವಾಳ ಹಾಕುತ್ತಿದ್ದಾರೆ.