ಸಿಎಂ ಬಸವರಾಜ್ ಬೊಮ್ಮಾಯಿಗೆ 'ನಿನ್ನ ಸನಿಹಕೆ' ಸಿನಿಮಾದ ಮೊದಲ ಟಿಕೆಟ್ ನೀಡಿದ ಚಿತ್ರತಂಡ

ನಟ ಸೂರಜ್‌ ನಿರ್ದೇಶನದ 'ನಿನ್ನ ಸನಿಹಕೆ' ಚಿತ್ರದ ಮೂಲಕ ನಟಿಯಾಗುತ್ತಿದ್ದಾರೆ ಧನ್ಯಾ ರಾಮ್‌ಕುಮಾರ್‌. ಇದೀಗ ಅವರ ಸಿನಿಮಾದ ಪ್ರಿಮಿಯರ್ ಶೋಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿಗೆ 'ನಿನ್ನ ಸನಿಹಕೆ' ಸಿನಿಮಾದ ಮೊದಲ ಟಿಕೆಟ್ ನೀಡಿದ ಚಿತ್ರತಂಡ
Linkup
ಡಾ. ರಾಜ್‌ಕುಮಾರ್ ಮೊಮ್ಮಗಳು, ನಟ ರಾಮ್‌ಕುಮಾರ್ ಮಗಳು ಧನ್ಯಾ ನಟಿಸಿರುವ, ಸೂರಜ್‌ ಗೌಡ ನಿರ್ದೇಶಿಸಿರುವ ಮೊದಲ 'ನಿನ್ನ ಸನಿಹಕೆ' ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಶೇ.100 ಆಸನ ಭರ್ತಿಗೆ ಅವಕಾಶ ಸಿಗುತ್ತಿದ್ದಂತೆಯೇ, ರಾಜ್ಯಾದ್ಯಂತ ಸಿನಿಮಾ ತೆರೆಕಾಣಿಸಲು ತಂಡಸಜ್ಜಾಗಿತ್ತು. ಇದೀಗ ಅಕ್ಟೋಬರ್ 8ರಂದು ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಪ್ರಿಮಿಯರ್ ಶೋ ಮಾಡಲಿರುವ ನಿನ್ನ ಸನಿಹಕೆ ಬಳಗ, ಅದಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಮೊದಲ ಟಿಕೆಟ್ ನೀಡಿದೆ. ಹೌದು, ಇಂದು (ಅ.5) ರಾಜ್ಯದ ಮುಖ್ಯಮಂತ್ರಿ ಅವರನ್ನು ಚಿತ್ರದ ನಾಯಕ ಸೂರಜ್ ಮತ್ತು ನಾಯಕಿ , ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಭೇಟಿ ಮಾಡಿ, ತಮ್ಮ ಚಿತ್ರದ ಪ್ರಿಮಿಯರ್ ಶೋಗೆ ಬರಬೇಕೆಂದು ಮೊದಲ ಟಿಕೆಟ್ ನೀಡಿದ್ದಾರೆ. ಈ ಆಹ್ವಾನಕ್ಕೆ ಒಪ್ಪಿಗೆ ನೀಡಿರುವ ಸಿಎಂ, ಗುರುವಾರ ನಡೆಯಲಿರುವ ಪ್ರಿಮಿಯರ್ ಶೋಗೆ ಬರಲಿದ್ದಾರೆ ಎನ್ನಲಾಗಿದೆ. ಇದೇ ಶುಕ್ರವಾರ (ಅ.8) ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ನಿನ್ನ ಸನಿಹಕೆ' ಚಿತ್ರ ತೆರೆಗೆ ಬರುತ್ತಿದೆ. ಪ್ರಿಮಿಯರ್ ಶೋನಲ್ಲಿ ರಾಜ್‌ ಕುಟುಂಬಡಾ. ರಾಜ್‌ ಕುಟುಂಬದ ಮೊದಲ ಹೀರೋಯಿನ್ ಎನಿಸಿಕೊಂಡಿರುವ ಧನ್ಯಾ ಅಭಿನಯದ 'ನಿನ್ನ ಸನಿಹಕೆ' ಸಿನಿಮಾವನ್ನು ರಾಜ್ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ನೋಡಲಿದ್ದಾರೆ. ಗುರುವಾರ ನಡೆಯಲಿರುವ ಪ್ರಿಮಿಯರ್ ಶೋಗೆ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನಯ್, ಯುವ ರಾಜ್‌ಕುಮಾರ್, ನಟ ಶ್ರೀಮುರಳಿ, ವಿಜಯ್ ರಾಘವೇಂದ್ರ ಧನ್ಯಾ ತಂದೆ, ಹಿರಿಯ ನಟ ರಾಮ್‌ಕುಮಾರ್, ಧನ್ಯಾ ಸಹೋದರ, ನಟ ಧಿರೇನ್ ರಾಮ್‌ಕುಮಾರ್ ಸೇರಿ‌ದಂತೆ ಚಿತ್ರರಂಗದ ಅನೇಕರು ಈ ಪ್ರಿಮಿಯರ್ ಶೋನಲ್ಲಿ ಉಪಸ್ಥಿತರಿರಲಿದ್ದಾರೆ. ಇನ್ನು, ಸಿನಿಮಾದ ಬಗ್ಗೆ ಮಾತನಾಡಿರುವ ಧನ್ಯಾ, 'ನಮ್ಮ ಕುಟುಂಬದಲ್ಲಿ ನಟಿಯಾಗುತ್ತಿರುವ ಮೊದಲ ಹುಡುಗಿ ನಾನು. ಈ ಹಿಂದೆ ಪಿಆರ್‌ ಆಗಿ ಕೆಲಸ ಮಾಡಿದೆ. ಆಗ ಇದು ನನ್ನ ಫೀಲ್ಡ್‌ ಅಲ್ಲಎನ್ನಿಸಿತು. ನಾನು ನಟಿಯಾಗ್ತೀನಿ ಅಂದಾಗ ನನ್ನ ಅಪ್ಪ, ಅಮ್ಮ ಇದರ ಬಗ್ಗೆ ಆಸಕ್ತಿ ತೋರಲಿಲ್ಲ. ಈಗ ಅವರಿಗೂ ಇಷ್ಟವಾಗಿದೆ. ನನಗೆ ನನ್ನ ಆಯ್ಕೆ ತಡವಾಯ್ತು ಎನ್ನಿಸುತ್ತಿಲ್ಲ. ಈ ಚಿತ್ರದ ಕಥೆ, ಪಾತ್ರ ನನಗೆ ಇಷ್ಟವಾದ ಕಾರಣ ಒಪ್ಪಿದೆ. ನಾನು ನಟಿಯಾಗ್ತೀನಿ ಅಂದಾಗಿನಿಂದ ಹಿಡಿದು ಈಗ ಈ ಸಿನಿಮಾದ ಹಾಡು, ಟ್ರೇಲರ್‌ ನೋಡಿ ನಮ್ಮ ಕುಟುಂಬದವರಿಗೆಲ್ಲಆಶ್ಚರ್ಯ ಮತ್ತು ಶಾಕ್‌ ಆಗ್ತಿದೆ. ನಾನು ನಟನೆಯನ್ನು ಇಷ್ಟು ಸೀರಿಯಸ್‌ ಆಗಿ ತಗೊಳ್ತೀನಿ ಅಂತ ಅವರಿಗಾರಿಗೂ ಅನ್ನಿಸಿರಲಿಲ್ಲ. ಈಗ ಅವರು ತುಂಬಾ ಖುಷಿಯಾಗಿದ್ದಾರೆ. ಬಹಳ ಸಪೋರ್ಟ್‌ ಮಾಡ್ತಿದ್ದಾರೆ' ಎಂದಿದ್ದಾರೆ. ಧನ್ಯಾ.