ದ್ವಿಲಿಂಗಿಯಾಗಿ ಹಾಲಿವುಡ್‌ ಪ್ರವೇಶ ಮಾಡಲು ನಟಿ ಸಮಂತಾ ರೆಡಿ!

ನಟಿ ಸಮಂತಾ ಇತ್ತೀಚೆಗೆ ವಿಭಿನ್ನವಾದ ಪಾತ್ರ ಮಾಡುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ವೆಬ್ ಸಿರೀಸ್‌ನಲ್ಲಿ ಸಮಂತಾ ಡಿಗ್ಲಾಮ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅವರು ದ್ವಿಲಿಂಗಿ ಪಾತ್ರ ಮಾಡಲಿದ್ದಾರಂತೆ.

ದ್ವಿಲಿಂಗಿಯಾಗಿ ಹಾಲಿವುಡ್‌ ಪ್ರವೇಶ ಮಾಡಲು ನಟಿ ಸಮಂತಾ ರೆಡಿ!
Linkup
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಇದೀಗ ಬ್ರಿಟನ್‌ನ ಖ್ಯಾತ ನಿರ್ದೇಶಕ ಫಿಲಿಪ್‌ ಜಾನ್‌ ಅವರ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ‘ಅರೇಂಜ್‌ಮೆಂಟ್ಸ್‌ ಆಫ್‌ ಲವ್‌’ ಎಂಬ ಹೆಸರಿನ ಈ ಸಿನಿಮಾ ಭಾರತೀಯ ಲೇಖಕ ತಿಮೇರಿ ಎನ್‌. ಮುರಾರಿ ಬರೆದಿರುವ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ್ದಾಗಿದೆ. ಏನು ಕಥೆ? ವೇಲ್ಸ್‌ನಲ್ಲಿ ನೆಲೆಸಿರುವ ಭಾರತೀಯನೊಬ್ಬ ತನ್ನಿಂದ ದೂರವಾಗಿರುವ ತಂದೆಯನ್ನು ಹುಡುಕುತ್ತ ತನ್ನೂರು ಭಾರತಕ್ಕೆ ಬರುತ್ತಾನೆ. ಈ ಪಯಣದಲ್ಲಿ ಆತನಿಗೆ ಪತ್ತೆದಾರಿ ಸಂಸ್ಥೆಯೊಂದನ್ನು ನಡೆಸುತ್ತಿರುವ ತಮಿಳಿನ ದ್ವಿಲಿಂಗಿ ಮಹಿಳೆಯ ಪರಿಚಯವಾಗುತ್ತದೆ. ಈ ಮಹಿಳೆಯ ಪಾತ್ರವನ್ನು ಸಮಂತಾ ( ) ನಿರ್ವಹಿಸಿದ್ದಾರೆ. ದ್ವಿಲಿಂಗಿ ಪಾತ್ರದ ಬಗ್ಗೆ ಸಮಂತಾ ಹೇಳಿದ್ದೇನು? (Samantha) ಈ ಬಗ್ಗೆ ಹೇಳಿರುವ ಸಮಂತಾ, ‘ನಾನು ಫಿಲಿಪ್‌ ಜಾನ್‌ ನಿರ್ದೇಶಿಸಿರುವ ‘ಡೌನ್‌ಟೌನ್‌ ಅಬ್ಬಿ’ ಸೀರಿಸ್‌ನ ದೊಡ್ಡ ಫ್ಯಾನ್‌. ಈಗ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಎಕ್ಸೈಟ್‌ ಆಗಿದ್ದೇನೆ. ಉತ್ತಮ ಕಥೆಯಿರುವ ಈ ಸಿನಿಮಾದಲ್ಲಿ ನನ್ನ ಪಾತ್ರ ಅತ್ಯಂತ ಸಂಕೀರ್ಣ ಮತ್ತು ಚಾಲೆಂಜಿಂಗ್‌ ಆಗಿದೆ. ಇದರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ. ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಸಮಂತಾ ಪಡೆದಿದ್ದೆಷ್ಟು? ಇನ್ನು ಸಮಂತಾ ಅವರು ( ), ರಶ್ಮಿಕಾ ಮಂದಣ್ಣ ( Rashmika Mandanna) ನಟನೆಯ 'ಪುಷ್ಫ' () ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರಂತೆ. ಸಮಂತಾ ವೃತ್ತಿ ಜೀವನದಲ್ಲಿ ಇದು ಮೊದಲನೆಯ ಐಟಂ ಡ್ಯಾನ್ಸ್ ಆಗಲಿದೆ ಎಂದು ಆಯೋಜಕರು ಹೇಳಿದ್ದಾರೆ. ಈ ಸ್ಪೆಷಲ್ ಡ್ಯಾನ್ಸ್ ನಂಬರ್‌ನಲ್ಲಿ ಸೊಂಟ ಬಳುಕಿಸಲು ನಟಿ ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಶೇಷ ಸೆಟ್ ಹಾಕಲಾಗಿದೆ! '' ಸಿನಿಮಾದ ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ನಿರ್ಮಾಣವಾಗುತ್ತಿದೆ. ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಈ ವಿಶೇಷ ಸೆಟ್ ನಿರ್ಮಿಸಲಾಗಿದ್ದು, ನವೆಂಬರ್ ಕೊನೆಯ ವಾರದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ 'ಪುಷ್ಪ' ಚಿತ್ರದ ಹಾಡುಗಳು, ಡ್ಯಾನ್ಸ್ ಸ್ಟೆಪ್‌ಗಳನ್ನು ವೀಕ್ಷಕರು ಇಷ್ಟಪಟ್ಟಿದ್ದು, ಅನೇಕರು ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿ ವಿಡಿಯೋ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ ನಟನೆಯ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಡಿಸೆಂಬರ್ 25ರಂದು 'ಪುಷ್ಪ' ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಸದ್ಯ ಸಮಂತಾ ಒಂದಾದ ಮೇಲೆ ಒಂದರಂತೆ ಸಿನಿಮಾ ಮಾಡುವತ್ತ ಗಮನ ನೀಡುತ್ತಿದ್ದಾರೆ.