ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ನೋಂದಣಿ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಕೊರೊನಾ ವಿರುದ್ಧದ ಲಸಿಕೆ ಪಡೆಯಲು ಇನ್ಮುಂದೆ ಆನ್‍ಲೈನ್ ರಿಜಿಸ್ಟ್ರೇಶನ್ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಪೂರ್ವ ನೋಂದಣಿ ಅಥವಾ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ.

ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ನೋಂದಣಿ ಕಡ್ಡಾಯವಲ್ಲ: ಕೇಂದ್ರ ಸರ್ಕಾರ
Linkup
ಹೊಸದಿಲ್ಲಿ: ಕೊರೊನಾ ವಿರುದ್ಧದ ಲಸಿಕೆ ಪಡೆಯಲು ಇನ್ಮುಂದೆ ಆನ್‍ಲೈನ್ ರಿಜಿಸ್ಟ್ರೇಶನ್ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಪೂರ್ವ ನೋಂದಣಿ ಅಥವಾ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ. ಗ್ರಾಮೀಣ ಭಾಗದ ಜನರಿಗೆ ಆನ್‍ಲೈನ್ ನೋಂದಣಿ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ಅಥವಾ ಅಪಾಯಿಂಟ್ಮೆಂಟ್ ಪಡೆದುಕೊಳ್ಳುವ ಅಗತ್ಯವಿಲ್ಲ. ಆನ್‍ಲೈನ್ ನೋಂದಣಿ ಸಮಸ್ಯೆ ಹಿನ್ನೆಲೆ ಗ್ರಾಮೀಣ ಭಾಗದ ಜನರಿಗೆ ವ್ಯಾಕ್ಸಿನೇಷನ್ ಆಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಹೊಸ ಆದೇಶದನ್ವಯ 18 ವರ್ಷ ಮೇಲ್ಪಟ್ಟವರು ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ವ್ಯಾಕ್ಸಿನ್ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಲಸಿಕಾ ಕೇಂದ್ರದಲ್ಲಿಯೇ ನೋಂದಣಿ ವ್ಯವಸ್ಥೆ ಇರಲಿದೆ. ಜನರು ನೇರವಾಗಿ ನೋಂದಣಿ ಮಾಡಿಕೊಂಡು ಅದೇ ದಿನ ಲಸಿಕೆ ಪಡೆಯಬಹುದಾಗಿದೆ. ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ಅಥವಾ ಅಪಾಯಿಂಟ್ಮೆಂಟ್ ಪಡೆದುಕೊಳ್ಳಲು ಗ್ರಾಮೀಣ ಭಾಗದ ಹಲವು ಮಂದಿ ಕಷ್ಟ ಅನುಭವಿಸ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬುಕಿಂಗ್ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಇದಲ್ಲದೇ ಕೋವಿನ್ ಪೋರ್ಟಲ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಮೂಲಕವೂ ಲಸಿಕೆ ಪಡೆದುಕೊಳ್ಳುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆನ್‍ಲೈನ್ ರಿಜಿಸ್ಟ್ರೇಶನ್ ಇಲ್ಲದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳುವ ಪ್ರಕ್ರಿಯೆ ಯನ್ನು ವಾಕ್ ಇನ್ ಅಂತಾ ಕರೆಯುತ್ತಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕೋ-ವಿನ್‍ನಲ್ಲಿ ರಾಜ್ಯಗಳು ಗ್ರಾಮೀಣ ಅಥವಾ ನಗರ ಎಂದು ವರ್ಗೀಕರಿಸಿದ್ದು, ಒಟ್ಟು 69,995 ವ್ಯಾಕ್ಸಿನೇಷನ್ ಕೇಂದ್ರಗಳು ಇವೆ. 49,883 ವ್ಯಾಕ್ಸಿನೇಷನ್ ಕೇಂದ್ರಗಳು, ಅಂದರೆ 71% ಗ್ರಾಮೀಣ ಪ್ರದೇಶಗಳಲ್ಲಿವೆ. ಅತಿ ಹೆಚ್ಚು ವ್ಯಾಕ್ಸಿನೇಷನ್ ಸೆಂಟರ್ ಗ್ರಾಮೀಣ ಭಾಗದ ಕಡೆ ಇರುವುದರಿಂದ ಆನ್ ರಿಜಿಸ್ಟ್ರೇಶನ್ ದೊಡ್ಡ ಸಮಸ್ಯೆ ಆಗ್ತಿದೆ ಎಂಬುದು ವರದಿಯಾಗಿದೆ. ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗುತ್ತೆ ಅಂತಾ ಆನ್‍ಲೈನ್ ನೋಂದಣಿ ರದ್ದುಗೊಳಿಸಿ ನೇರವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೂನ್ 13ರ ಮಾಹಿತಿ ಪ್ರಕಾರ, ಕೊವಿನ್ ಪೋರ್ಟಲ್ನಲ್ಲಿ ಲಸಿಕೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ 28.36 ಕೋಟಿ ಜನರ ಪೈಕಿ, 16.45 ಕೋಟಿ ಮಂದಿ (ಶೇಕಡಾ 58ರಷ್ಟು) ನೇರವಾಗಿ ವಾಕ್ಇನ್ ಮೂಲಕ ಲಸಿಕೆ ಪಡೆದುಕೊಂಡವರಾಗಿದ್ದಾರೆ. ಜೊತೆಗೆ, ಜೂನ್ 13ರಂತೆ ಲಸಿಕೆ ಪಡೆದಿರುವ ಒಟ್ಟು 24.84 ಕೋಟಿ ಲಸಿಕೆ ಡೋಸ್ಗಳಲ್ಲಿ 19.84 ಕೋಟಿ ಕೋಟಿ ಲಸಿಕೆ ಡೋಸ್ (ಸುಮಾರು ಶೇಕಡಾ 80ರಷ್ಟು) ಲಸಿಕೆ ನೀಡಿಕೆ ವಾಕ್ಇನ್ ಮೂಲಕ ಆಗಿದೆ.