ವಿಶ್ವದ ಅತಿ ದೊಡ್ಡ 'ಕಾಳೇಶ್ವರಂ ಏತ ನೀರಾವರಿ ಯೋಜನೆ' ಕುರಿತು ಡಿಸ್ಕವರಿಯಲ್ಲಿ ಸಾಕ್ಷ್ಯಚಿತ್ರ

ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿರುವ ತೆಲಂಗಾಣದ ರಾಜ್ಯದ ಕಾಳೇಶ್ವರಂ ಏತ ನೀರಾವರಿ ಯೋಜನೆ ಹಿಂದಿನ ಸತ್ಯಗಳು ಮತ್ತು ಯಶಸ್ಸಿನ ಬಗ್ಗೆ ವಿಶ್ವ ವಿಖ್ಯಾತ ಡಿಸ್ಕವರಿ ಚಾನೆಲ್ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುತ್ತಿದೆ.

ವಿಶ್ವದ ಅತಿ ದೊಡ್ಡ 'ಕಾಳೇಶ್ವರಂ ಏತ ನೀರಾವರಿ ಯೋಜನೆ' ಕುರಿತು ಡಿಸ್ಕವರಿಯಲ್ಲಿ ಸಾಕ್ಷ್ಯಚಿತ್ರ
Linkup
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿರುವ ತೆಲಂಗಾಣದ ರಾಜ್ಯದ ಕಾಳೇಶ್ವರಂ ಏತ ಹಿಂದಿನ ಸತ್ಯಗಳು ಮತ್ತು ಯಶಸ್ಸಿನ ಬಗ್ಗೆ ವಿಶ್ವ ವಿಖ್ಯಾತ ಡಿಸ್ಕವರಿ ಚಾನೆಲ್ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುತ್ತಿದೆ. ಭೂತಳದಲ್ಲಿ ನಿರ್ಮಿಸಿರುವ ಪಂಪ್‌ಹೌಸ್, ವಿಶ್ವದ ಅತಿ ದೊಡ್ಡ ಮೋಟಾರ್‌ಗಳ ಅಳವಡಿಕೆ, ತ್ವರಿತ ಕಾಮಗಾರಿ ಸೇರಿದಂತೆ ಹಲವು ದಾಖಲೆಗಳ ಮೂಲಕ ಗಮನ ಸೆಳೆದಿರುವ ಕಾಳೇಶ್ವರಂ ಯೋಜನೆಗೆ "ನದಿಯನ್ನು ಎತ್ತುವ" (ಲಿಫ್ಟಿಂಗ್ ಎ ರಿವರ್) ಎಂಬ ಹೆಸರಿನಲ್ಲಿ ಸಾಕ್ಷ್ಯ ಚಿತ್ರ ನಿರ್ಮಿಸಿದ್ದು, 25ರ ರಾತ್ರಿ 8 ಗಂಟೆಗೆ ಪ್ರಸಾರ ಮಾಡಲಿದೆ. ಭಾರತದ ಪ್ರತಿಷ್ಠಾತ್ಮಕ ಯೋಜನೆ ಎನಿಸಿಕೊಂಡಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಬಗ್ಗೆ ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಡಿಸ್ಕವರಿ ಚಾನೆಲ್, ಯೋಜನೆಯ ಆಳ- ಅಗಲವನ್ನು ಈ ಸಾಕ್ಷ್ಯ ಚಿತ್ರದಲ್ಲಿ ಸಾಕ್ಷೀಕರಿಸಿದೆ. ಈ ಯೋಜನೆಯನ್ನು ವಿಜ್ಞಾನ ಮತ್ತು ಇಂಜಿನಿಯರಿಂಗ್ ತಂತ್ರಜ್ಞಾನದ ಅದ್ಭುತ ಎಂದು ಬಣ್ಣಿಸಿರುವ ನಿರ್ಮಾಪಕ ಪಲ್ಸ್ ಮೀಡಿಯಾದ ಕೊಂಡಪಲ್ಲಿ ರಾಜೇಂದ್ರ ಶ್ರೀವತ್ಸ, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕನಸನ್ನು ಮೆಘಾ ಇಂಜಿನಿರಿಂಗ್ ಇನ್‌ಫ್ರಾಸ್ಟ್ರಕ್ಚರ್ ನನಸಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಯೋಜನೆ ಮೂಲಕ ಗುರುತ್ವಾಕರ್ಷಣದ ದಿಕ್ಕಿಗೆ ಹರಿಯುತ್ತಿರುವ ಗೋದಾವರಿ ನದಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ತಿರುಗಿಸಿರುವುದು ಮತ್ತು ಬೃಹತ್ ಪಂಪ್‌ಹೌಸ್ ಮತ್ತು ಮೋಟಾರ್‌ಗಳ ಮೂಲಕ ನದಿ ನೀರನ್ನು ಸಮುದ್ರ ಮಟ್ಟದಿಂದ 600 ಮೀಟರ್‌ಗಳಷ್ಟು ಎತ್ತರಕ್ಕೆ ತಂದು ಹರಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ಪಂಪಿಂಗ್‌ ಕೇಂದ್ರ ಭೂತಲದಲ್ಲಿ ಬಹುಮಹಡಿ ಕಟ್ಟಡವನ್ನು ನಾಚಿಸುವಂತೆ ನಿರ್ಮಿಸಿರುವ ಬೃಹತ್ತಾದ ಪಂಪ್‌ಹೌಸ್ ಮೂಲಕ ಎತ್ತುವಳಿ ಮಾಡಲಾಗುವ ನೀರನ್ನು ಅಣೆಕಟ್ಟೆಗಳಲ್ಲಿ ಸಂಗ್ರಹಿಸಿ, ಕಾಲುವೆ ಮತ್ತು ಪೈಪ್‌ಗಳ ಮೂಲಕ ಕೆರೆಗಳಿಗೆ ಹರಿಸಿ ಅಲ್ಲಿಂದ ವಿವಿಧ ಬಳಕೆಗಳಿಗೆ ನೀರನ್ನು ಉಪಯೋಗಿಸಲಾಗುತ್ತಿದೆ. ಕಾಳೇಶ್ವರಂ ಏತ ನೀರಾವರಿ ಯೋಜನೆ ಯಶಸ್ವಿ ಜಾರಿಗೆ ಅನುವಾಗುವಂತೆ ಎಂ.ಇ.ಐ.ಎಲ್ 15 ಬೃಹದಾಕಾರದ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದು, 5,159 ಮೆಘಾ ವಾಟ್ ಪಂಪಿಂಗ್ ಸಾಮರ್ಥ್ಯದ 104 ಪಂಪ್‌ಗಳನ್ನು ಅಳವಡಿಸಿದೆ. ಈ ಪ್ರಮಾಣದ ನೀರು ಎತ್ತುವಳಿ ಸಾಧನಗಳ ಅಳವಡಿಕೆಯಲ್ಲಿ ವಿಶ್ವದಲ್ಲೇ ಇದು ಪ್ರಥಮ. ಪ್ರತಿನಿತ್ಯ 2 ಟಿಎಂಸಿ ನೀರೆತ್ತುವ ಯೋಜನೆ ಪ್ರತಿನಿತ್ಯ 2 ಟಿಎಂಸಿ ನದಿ ನೀರನ್ನು ಎತ್ತುವಳಿ ಮಾಡುವ ಸಲುವಾಗಿ ಯೋಜನೆಯ ಪ್ಯಾಕೇಜ್-8ರಡಿಯಲ್ಲಿ ಗಾಯಿತ್ರಿ ಭೂತಳ ಪಂಪ್‌ಹೌಸ್ ನಿರ್ಮಿಸಿದ್ದು, ಉದ್ದೇಶಿತ ಎಂಟು ಘಟಕಗಳ ಪೈಕಿ ಏಳು ಘಟಕ ಈಗಾಗಲೇ ಕಾರ್ಯಾರಂಭಿಸಿವೆ. ಇದೇ ರೀತಿ ಮೇಡಿಘಡ್ಡ ಲಕ್ಷಿö್ಮ ಪಂಪ್ ಹೌಸ್ (17 ಮೋಟಾರ್), ಅನ್ನಾರಾಂ ಸರಸ್ವತಿ (12 ಮೋಟಾರ್), ಸುಂಡಿಲ ಪಾರ್ವತಿ (14), ಅನ್ನಪೂರ್ಣ (4), ರಂಗನಾಯಕ ಸಾಗರ (4), 52 ಟಿಎಂಸಿ ನೀರು ಸಂಗ್ರಹಿಸುವ ಸಾಮಥ್ಯೃ ಹೊಂದಿರುವ ಕೊಂಡಪೋಚಮ್ಮ ಪ್ಯಾಕೇಜ್‌ನಡಿ ಅಕ್ಕರಾಮ್ ಮತ್ತು ಮರುಕೋಕ್ಲು ಎಂಬಲ್ಲಿ ತಲಾ ಎರಡು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಡಿಸ್ಕವರಿ ಚಾನೆಲ್‌ನಲ್ಲಿ ಮೆಗಾ ಕಾರ್ಯಕ್ರಮ ತನ್ನ ಕಾರ್ಯ ಶ್ರೇಷ್ಠತೆಗೆ ಹೆಸರುವಾಸಿಯಾಗಿರುವ ಡಿಸ್ಕವರಿ ಚಾನೆಲ್ ತನ್ನ ಕಾರ್ಯಕ್ರಮಗಳನ್ನು 45 ನಿಮಿಷಗಳಿಗೆ ಸೀಮಿತಗೊಳಿಸುತ್ತದೆ. ಆದರೆ, ಕಾಳೇಶ್ವರಂ ಯೋಜನೆ ಆಳ- ಅಗಲದ ಬಗ್ಗೆ ಅಚ್ಚರಿಗೊಂಡಿದೆ. ಹೀಗಾಗಿ "ಲಿಫ್ಟಿಂಗ್ ಎ ರಿವರ್" ಕಾರ್ಯಕ್ರಮವನ್ನು 90 ನಿಮಿಷಗಳವರೆಗೆ ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದು, ಎಂಟು ಬ್ರೇಕ್‌ಗಳೊಂದಿಗೆ ಈ ಕಾರ್ಯಕ್ರಮ 25ರ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರ ಮಾಡುತ್ತಿದೆ. ಪ್ರಸ್ತುತ ಕನ್ನಡವೂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಡಿಸ್ಕವರಿ ಚಾನೆಲ್, ಜಗತ್ತಿನ ಅದ್ಭುತಗಳನ್ನು ಪರಿಚಯಿಸುವ ಸಾಕ್ಷಿ ಚಿತ್ರಗಳ ಪ್ರಸಾರಕ್ಕೆ ಹೆಸರುವಾಸಿಯಾಗಿದೆ. ಕಾಳೇಶ್ವರಂ ಕುರಿತಾದ ಸಾಕ್ಷಿ ಚಿತ್ರವು ಡಿಸ್ಕವರಿ ಚಾನೆಲ್ 27ರ ಭಾನುವಾರ ಮಧ್ಯಾಹ್ನ 2.30ಕ್ಕೆ ಮರು ಪ್ರಸಾರ ಮಾಡಲಿದೆ. ಯೋಜನೆಯ ಪ್ರಮುಖಾಂಶಗಳು
  • ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ
  • ಮೂರು ವರ್ಷಗಳ ಸತತ ಚಿತ್ರೀಕರಣ
  • ಭೂಮಿ ಆಳದಲ್ಲಿ ಪಂಪ್‌ಹೌಸ್‌ಗಳ ನಿರ್ಮಾಣ
  • ತೆಲಂಗಾಣದ ದಾಹ ಇಂಗಿಸಲಿರುವ ಮಹತ್ವಾಕಾಂಕ್ಷಿ ಯೋಜನೆ
  • ಭಾರತದ ಹೆಮ್ಮೆ ಎನಿಸಿಕೊಂಡಿರುವ ವಿಶ್ವದ ಅತಿ ದೊಡ್ಡ ಏತ ನೀರಾರಿ ಯೋಜನೆ
  • ಹಲವು ದಾಖಲೆಗಳಿಗೆ ನಾಂದಿಯಾದ ಕಾಳೇಶ್ವರಂ
  • ಪ್ರತಿ ನಿತ್ಯ 2 ಟಿಎಂಸಿ ನೀರನ್ನು ಸಮುದ್ರ ಮಟ್ಟದಿಂದ 600 ಮೀಟರ್ ಮೇಲೆತ್ತುವ ಯೋಜನೆ
  • ಅಂತರ್ಜಲ, ಮೀನುಗಾರಿಕೆ, ಪ್ರವಾಸೋದ್ಯಮ, ಕೈಗಾರಿಕೆ ಹೀಗೆ ಹಲವು ಕ್ಷೇತ್ರಗಳಿಗೆ ಯೋಜನೆ ಲಾಭ