ಕೋವಿಡ್‌ ತ್ವರಿತ ಪತ್ತೆ ತಂತ್ರಜ್ಞಾನಕ್ಕಾಗಿ ಇಸ್ರೇಲ್‌ ತಜ್ಞರ ಭೇಟಿಗೆ ರಿಲಯನ್ಸ್‌ ಮನವಿ

ಕೋವಿಡ್‌-19 ಸೋಂಕನ್ನು ತ್ವರಿತವಾಗಿ ಪತ್ತೆಹಚ್ಚುವ ತಂತ್ರಜ್ಞಾನ ಹೊಂದಿರುವ ಇಸ್ರೇಲ್‌ ಕಂಪನಿಯ ತಜ್ಞರ ತಂಡವನ್ನು ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡುವಂತೆ ಇಸ್ರೇಲ್‌ ಸರಕಾರಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮನವಿ ಮಾಡಿದೆ.

ಕೋವಿಡ್‌ ತ್ವರಿತ ಪತ್ತೆ ತಂತ್ರಜ್ಞಾನಕ್ಕಾಗಿ ಇಸ್ರೇಲ್‌ ತಜ್ಞರ ಭೇಟಿಗೆ ರಿಲಯನ್ಸ್‌ ಮನವಿ
Linkup
ಹೊಸದಿಲ್ಲಿ: ಸೋಂಕನ್ನು ತ್ವರಿತವಾಗಿ ಪತ್ತೆಹಚ್ಚುವ ತಂತ್ರಜ್ಞಾನ ಹೊಂದಿರುವ ಇಸ್ರೇಲ್‌ ಕಂಪನಿಯ ತಜ್ಞರ ತಂಡವನ್ನು ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡುವಂತೆ ಇಸ್ರೇಲ್‌ ಸರಕಾರಕ್ಕೆ ಇಂಡಸ್ಟ್ರೀಸ್‌ ಮನವಿ ಮಾಡಿದೆ. ಭಾರತ ಸೇರಿ 7 ದೇಶಗಳಿಗೆ ಪ್ರಯಾಣಿಸದಂತೆ ಇಸ್ರೇಲ್‌ ತನ್ನ ನಾಗರಿಕರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಈ ಮನವಿ ಮಾಡಿದೆ. ಇಸ್ರೇಲ್‌ನ ಬ್ರೆತ್‌ ಆಫ್‌ ಹೆಲ್ತ್‌ (ಬಿಒಎಚ್‌) ಕಂಪನಿಯಿಂದ ರಿಲಯನ್ಸ್‌ ಇಂಡಸ್ಟ್ರೀಸ್‌ ಕೋವಿಡ್‌-19 ಅನ್ನು ತ್ವರಿತವಾಗಿ ಪತ್ತೆಹಚ್ಚುವ ತಂತ್ರಜ್ಞಾನವನ್ನು ಖರೀದಿಸಿದ್ದು, ಇಸ್ರೇಲಿ ತಂತ್ರಜ್ಞರು ಭಾರತಕ್ಕೆ ಬಂದು ತಂತ್ರಜ್ಞಾನದ ಅನುಷ್ಠಾನ ಮತ್ತು ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ವರದಿಯಾಗಿದೆ. ಇಸ್ರೇಲ್‌ ತಂತ್ರಜ್ಞಾನದಲ್ಲಿ ಕೋವಿಡ್‌-19 ಪರೀಕ್ಷಾ ಫಲಿತಾಂಶವನ್ನು ಕೆಲ ಸೆಕೆಂಡ್‌ಗಳಲ್ಲಿಯೇ ಪಡೆಯಬಹುದು. ರಿಲಯನ್ಸ್‌ ಇಂಡಸ್ಟ್ರೀಸ್‌ ಕಳೆದ ಜನವರಿಯಲ್ಲಿ 15 ದಶಲಕ್ಷ ಡಾಲರ್‌ಗೆ (ಅಂದಾಜು 103 ಕೋಟಿ ರೂ.) ಈ ತಂತ್ರಜ್ಞಾನವನ್ನು ಖರೀದಿಸಿತ್ತು.