55 ಸಾವಿರ ಡಾಲರ್‌ ದಾಟಿದ ಬಿಟ್‌ಕಾಯಿನ್ ಬೆಲೆ! ಕಾರ್ಡಾನೋ, ಡೋಜೆಕಾಯಿನ್ ಮೌಲ್ಯ ಇಳಿಕೆ

ಮೇ ತಿಂಗಳಿನಿಂದೀಚೆಗೆ ಬಿಟ್‌ಕಾಯಿನ್‌ ಬೆಲೆಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ವಿಶ್ವದ ಅತಿ ದುಬಾರಿ ಮತ್ತು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್‌ಕಾಯಿನ್‌ ಗುರುವಾರವೂ ಶೇ.7ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದ್ದು, 55,109 ಡಾಲರ್‌ ತಲುಪಿದೆ.

55 ಸಾವಿರ ಡಾಲರ್‌ ದಾಟಿದ ಬಿಟ್‌ಕಾಯಿನ್ ಬೆಲೆ! ಕಾರ್ಡಾನೋ, ಡೋಜೆಕಾಯಿನ್ ಮೌಲ್ಯ ಇಳಿಕೆ
Linkup
ಹೊಸದಿಲ್ಲಿ: ಕಳೆದ ಏಳು ದಿನಗಳಲ್ಲಿ ಬಿಟ್ ಕಾಯಿನ್ ಬೆಲೆ ಶೇ.32ರಷ್ಟು ಹೆಚ್ಚಳ ಕಂಡಿದೆ. ಮೇ ತಿಂಗಳಿನಿಂದೀಚೆಗೆ ಬೆಲೆಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ವಿಶ್ವದ ಅತಿ ದುಬಾರಿ ಮತ್ತು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್‌ಕಾಯಿನ್‌ ಗುರುವಾರವೂ ಶೇ.7ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದ್ದು, 55,109 ಡಾಲರ್‌ ತಲುಪಿದೆ. ಇತರೆ ಪ್ರಮುಖ ಕ್ರಿಪ್ಟೋಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮಿಶ್ರ ಬೆಳವಣಿಗೆ ಕಂಡಿವೆ. ಬಂಡವಾಳ ಹೂಡಿಕೆಯಲ್ಲಿ ಎರಡನೇ ಅತಿದೊಡ್ಡ ಕ್ರಿಪ್ಟೋ ಕರೆನ್ಸಿಯಾದ ಈಥರ್ ಮೌಲ್ಯ 3,551 ಡಾಲರ್‌ನಷ್ಟಿದ್ದು, ಗುರುವಾರ ಶೇ.1.5ರಷ್ಟು ಹೆಚ್ಚಳ ಕಂಡಿದೆ. ಆದರೆ, ಕಾರ್ಡಾನೊ, ಎಕ್ಸ್‌ಆರ್‌ಪಿ, ಡೋಜೆಕಾಯಿನ್ ಬೆಲೆಗಳು ಕುಸಿತ ಕಂಡಿವೆ. ಈ ಮಧ್ಯೆ ಸ್ಟೆಲ್ಲಾರ್‌ ಬೆಲೆಯಲ್ಲಿ ಶೇ. 9ರಷ್ಟು ಹೆಚ್ಚಳ ಕಂಡಿವೆ. ಶಿಬಾ ಇನು ಕರೆನ್ಸಿ ಶೇ.78ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ ಎಂದು ಕಾಯಿನ್ ಜೆಕ್ಕೊ ಹೇಳಿದೆ. ಅಕ್ಟೋಬರ್‌ 6ರಂದು ಬಿಟ್‌ಕಾಯಿನ್ (ಬಿಟಿಸಿ) ಮತ್ತೆ 55,000 ಡಾಲರ್‌ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಬಿಟ್‌ಕಾಯಿನ್ ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿದ್ದು, ವಹಿವಾಟಿನಲ್ಲಿ ಚುರುಕುಗೊಂಡಿದೆ. ಬಿಟ್‌ಕಾಯಿನ್‌ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎನ್ನುತ್ತಾರೆ "ಎಂದು ವಾಜಿರ್‌ಎಕ್ಸ್‌ ಸಿಒಒ ಸಿದ್ಧಾರ್ಥ್ ಮೆನನ್ ತಿಳಿಸಿದ್ದಾರೆ. ಕ್ರಿಪ್ಟೋ ಎಕ್ಸ್ಚೇಂಜ್ 'ಕ್ರಾಕನ್' ಪ್ರಕಾರ, ಅಕ್ಟೋಬರ್ ಆರಂಭದಿಂದಲೂ ಬಿಟ್ ಕಾಯಿನ್ ವಹಿವಾಟು ಈಥರ್ ಗಿಂತಲೂ ಮೂರನೇ ಎರಡರಷ್ಟು ದೊಡ್ಡದಾಗಿದೆ. ಈಥರ್, ಬಿನಾನ್ಸ್ ಕಾಯಿನ್, ಸೊಲಾನೋ ಮತ್ತು ಡೋಜೆಕಾಯಿನ್ ಮೌಲ್ಯದಲ್ಲೂ ಕಳೆದ ಏಳು ದಿನಗಳಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಇದಲ್ಲದೆ, ಬಿಟ್ ಕಾಯಿನ್ ಬೆಳವಣಿಗೆಗೆ ಹೋಲಿಸಿದರೆ ಆಲ್ಟ್ ಕಾಯಿನ್‌ಗಳ ಮೌಲ್ಯ ಸ್ಥಿರವಾಗಿರುವಂತೆ ಕಾಣುತ್ತದೆ ಎಂದು ಮೆನನ್ ಹೇಳಿದ್ದಾರೆ.