ಕೆ-ರೇರಾ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್‌ ಅಧಿಕಾರಿ ಎಚ್‌.ಸಿ. ಕಿಶೋರ ಚಂದ್ರ ನೇಮಕ

ಕರ್ನಾಟಕ ರಿಯಲ್‌ ಎಸ್ಟೇಟ್‌ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಮಾಜಿ ಡಿಜಿಪಿ ನೀಲಮಣಿ ಎನ್‌. ರಾಜು ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸರಕಾರ ಗುರುವಾರ ಅಧಿಕೃತ ಆದೇಶಗಳನ್ನು ಹೊರಡಿಸಿದೆ.

ಕೆ-ರೇರಾ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್‌ ಅಧಿಕಾರಿ ಎಚ್‌.ಸಿ. ಕಿಶೋರ ಚಂದ್ರ ನೇಮಕ
Linkup
ಬೆಂಗಳೂರು: ಕರ್ನಾಟಕ ರಿಯಲ್‌ ಎಸ್ಟೇಟ್‌ ಮತ್ತು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ನಿವೃತ್ತ ಪೊಲೀಸ್‌ ಅಧಿಕಾರಿ ಎಚ್‌ .ಸಿ. ಕಿಶೋರ ಚಂದ್ರ ಅವರನ್ನು ಸರಕಾರ ನೇಮಕ ಮಾಡಿದೆ. ಅಲ್ಲದೆ, ಪ್ರಾಧಿಕಾರದ ಸದಸ್ಯರನ್ನಾಗಿ ಮತ್ತೊರ್ವ ನಿವೃತ್ತ ಪೊಲೀಸ್‌ ಅಧಿಕಾರಿ ನೀಲಮಣಿ ಎನ್‌. ರಾಜು ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸರಕಾರ ಗುರುವಾರ ಪ್ರತ್ಯೇಕವಾಗಿ ಅಧಿಕೃತ ಆದೇಶಗಳನ್ನು ಹೊರಡಿಸಿದೆ. ಈ ತಿಂಗಳಾಂತ್ಯಕ್ಕೆ ರೇರಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಂ.ಆರ್‌. ಕಾಂಬ್ಳೆ ಮತ್ತು ಸದಸ್ಯರಾದ ಸೈಯದ್‌ ಅದೋನಿ ಅವರು ನಿವೃತ್ತರಾಗಲಿದ್ದರು. ಆ ಸ್ಥಾನಗಳಿಗೆ ಇದೀಗ ಸರಕಾರ ನೇಮಕ ಮಾಡಿ ಆದೇಶಗಳನ್ನು ಹೊರಡಿಸಿದೆ. ಫೋರಂ ಫಾರ್‌ ಪೀಪಲ್ಸ್‌ ಕಲೆಕ್ಟೀವ್‌ ಎಫರ್ಟ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಶಂಕರ್‌ ಈ ಕುರಿತು ಪ್ರತಿಕ್ರಿಯಿಸಿ, ''ಸರಕಾರ ದಕ್ಷ ಅಧಿಕಾರಿಯನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸ್ವಾಗತಾರ್ಹ. ನೂತನ ಅಧ್ಯಕ್ಷರು ಕಾಯಿದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವುದರ ಜತೆಗೆ, ಗೃಹ ಖರೀದಿದಾರರಿಗೆ ಬಿಲ್ಡರ್‌ಗಳಿಂದ ಆಗುತ್ತಿರುವ ಅನ್ಯಾಯ ತಡೆದು ನ್ಯಾಯ ದೊರಕಿಸಿಕೊಡುವರೆಂಬ ಭರವಸೆ ಇದೆ," ಎಂದು ಹೇಳಿದ್ದಾರೆ.