ವಿಶ್ವಸಂಸ್ಥೆಯ ಡಿಜಿಟಲ್‌ ಸಮೀಕ್ಷೆಯಲ್ಲಿ ಭಾರತದ ಮುನ್ನಡೆ

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗವು ಡಿಜಟಲ್‌ ಮತ್ತು ವ್ಯಾಪಾರ ಅಭಿವೃದ್ಧಿ ವ್ಯವಸ್ಥೆ ಕುರಿತು ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಭಾರತವು ಶೇ.90.32 ಅಂಕಗಳನ್ನು ಗಳಿಸಿದೆ. ದೇಶ 2019ರಲ್ಲಿಶೇ.78.49 ಅಂಕ ಗಳಿಸಿತ್ತು.

ವಿಶ್ವಸಂಸ್ಥೆಯ ಡಿಜಿಟಲ್‌ ಸಮೀಕ್ಷೆಯಲ್ಲಿ ಭಾರತದ ಮುನ್ನಡೆ
Linkup
ಹೊಸದಿಲ್ಲಿ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗವು ಡಿಜಟಲ್‌ ಮತ್ತು ವ್ಯಾಪಾರ ಅಭಿವೃದ್ಧಿ ವ್ಯವಸ್ಥೆ ಕುರಿತು ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಭಾರತವು ಶೇ.90.32 ಅಂಕಗಳನ್ನು ಗಳಿಸಿದೆ. ದೇಶ 2019ರಲ್ಲಿ ಶೇ.78.49 ಅಂಕ ಗಳಿಸಿತ್ತು. ವಿಶ್ವಸಂಸ್ಥೆಯ ಯುಎನ್‌ಇಎಸ್‌ಸಿಎಪಿ ನಡೆಸಿರುವ ಈ ಸಮೀಕ್ಷೆಯಲ್ಲಿ ಒಟ್ಟು 5 ವಿಭಾಗಗಳಿದ್ದು, ಪಾರದರ್ಶಕತೆಯಲ್ಲಿ ಭಾರತ ಶೇ.100 ಅಂಕ ಗಳಿಸಿದೆ. ಒಟ್ಟು 143 ದೇಶಗಳ ಆರ್ಥಿಕತೆಯನ್ನು ಸಮೀಕ್ಷೆ ಒಳಗೊಂಡಿತ್ತು. ಪಾರದರ್ಶಕತೆಯಲ್ಲಿ ಭಾರತ 2021ರಲ್ಲಿ ಶೇ.100 ಅಂಕ ಗಳಿಸಿದೆ. 2019ರಲ್ಲಿ ಶೇ.93.33 ಅಂಕ ಗಳಿಸಿತ್ತು. ಪ್ರಕ್ರಿಯೆಗಳ ವಿಭಾಗದಲ್ಲಿ ಶೇ.95.83, ಸಾಂಸ್ಥಿಕ ವ್ಯವಸ್ಥೆ ಮತ್ತು ಸಹಕಾರ ವಿಭಾಗದಲ್ಲಿ ಶೇ.88.89, ಪೇಪರ್‌ಲೆಸ್‌ ವ್ಯಾಪಾರದಲ್ಲಿ ಶೇ.96.3, ಅಂತಾರಾಷ್ಟ್ರೀಯ ಪೇಪರ್‌ಲೆಸ್‌ ವ್ಯಾಪಾರದಲ್ಲಿ ಶೇ.66.67 ಅಂಕಗಳನ್ನು ಭಾರತ ಗಳಿಸಿದ್ದು, 2019ಕ್ಕೆ ಹೋಲಿಸಿದರೆ ಅಂಕ ಗಳಿಕೆಯಲ್ಲಿ ಗಣನೀಯ ಸುಧಾರಣೆಯಾಗಿದೆ. ದಕ್ಷಿಣ ಮತ್ತು ಏಷ್ಯಾಪೆಸಿಫಿಕ್‌ ವಲಯದಲ್ಲಿ ಭಾರತ ಅತ್ಯುತ್ತಮ ಸಾಧನೆ ದಾಖಲಿಸಿದೆ ಎಂದು ಸಮೀಕ್ಷೆ ತಿಳಿಸಿದೆ. ಫ್ರಾನ್ಸ್‌, ಬ್ರಿಟನ್‌, ಕೆನಡಾ, ನಾರ್ವೆ, ಫಿನ್ಲೆಂಡ್‌ ಮೊದಲಾದ ರಾಷ್ಟ್ರಗಳಿಗಿಂತಲೂ ಉತ್ತಮ ಅಂಕ ವನ್ನು ಭಾರತ ಗಳಿಸಿದೆ.