ಕೋವಿಡ್ ಕಾಲದಲ್ಲಿ ಮಕ್ಕಳೇ ಸ್ಟ್ರಾಂಗು ಗುರೂ..! 3ನೇ ಅಲೆ ಭಯ ಬೇಡವೇ ಬೇಡ..!

​​ರಾಜ್ಯದಲ್ಲಿ 18 ವರ್ಷದೊಳಗಿನ 2.3 ಕೋಟಿ ಮಕ್ಕಳಿದ್ದು, ಇದರಲ್ಲಿ 3.4 ಲಕ್ಷ ಜನರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಸಮಿತಿ ಅಂದಾಜಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಂಡರೆ ಮಕ್ಕಳಲ್ಲಿ ಸೋಂಕಿನ ಸಂಖ್ಯೆ ಕಡಿಮೆ ಆಗಲಿದೆ.

ಕೋವಿಡ್ ಕಾಲದಲ್ಲಿ ಮಕ್ಕಳೇ ಸ್ಟ್ರಾಂಗು ಗುರೂ..! 3ನೇ ಅಲೆ ಭಯ ಬೇಡವೇ ಬೇಡ..!
Linkup
ಮಹಾಬಲೇಶ್ವರ ಕಲ್ಕಣಿ : ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರಿಲ್ಲ. ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಹೆಚ್ಚು ಸೋಂಕಿಗೆ ತುತ್ತಾಗಿದ್ದಾರೆ. ಆದರೆ ಮೃತರ ಸಂಖ್ಯೆ ಬಹಳ ಕಡಿಮೆ. 2020ರ ಮಾರ್ಚ್ 8 ರಿಂದ 2021ರ ಜೂನ್‌ 23ರ ನಡುವೆ ಒಟ್ಟು 2,07,929 ಮಕ್ಕಳು ಸೋಂಕಿಗೆ ತುತ್ತಾಗಿದ್ದು, 150 ಮಕ್ಕಳು ಮೃತರಾಗಿದ್ದಾರೆ. ಕೋವಿಡ್‌ ಬಗ್ಗೆ ಕೂಡ ಮಕ್ಕಳ ಬಗ್ಗೆ ಅನಗತ್ಯ ಭಯ ಬೇಡ. ಶೇ. 80 ರಿಂದ 85ರಷ್ಟು ಮಕ್ಕಳಲ್ಲಿ ಸಣ್ಣ ಪ್ರಮಾಣದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಶೇ. 2ರಷ್ಟು ಮಕ್ಕಳು ಮಾತ್ರ ಗಂಭೀರ ಸ್ವರೂಪದ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಡಾ. ದೇವಿಶೆಟ್ಟಿ ನೇತೃತ್ವದ 13 ಮಂದಿ ತಜ್ಞರ ತಾಂತ್ರಿಕ ಸಮಿತಿ ತಿಳಿಸಿದೆ. ರಾಜ್ಯದಲ್ಲಿ 18 ವರ್ಷದೊಳಗಿನ 2.3 ಕೋಟಿ ಮಕ್ಕಳಿದ್ದು, ಇದರಲ್ಲಿ 3.4 ಲಕ್ಷ ಜನರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಸಮಿತಿ ಅಂದಾಜಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಂಡರೆ ಮಕ್ಕಳಲ್ಲಿ ಸೋಂಕಿನ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಶೇ. 100 ರಷ್ಟು ಗುಣಮುಖ: 'ಮೊದಲ ಅಲೆಯಲ್ಲಿ ಬೌರಿಂಗ್‌ ಆಸ್ಪತ್ರೆಯಲ್ಲಿ 60, 2ನೇ ಅಲೆಯಲ್ಲಿ 35 ಮಕ್ಕಳು ದಾಖಲಾಗಿದ್ದರೂ ಏನೂ ತೊಂದರೆಯಾಗಿಲ್ಲ. 2-3 ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ. ಎಲ್ಲಾ ಮಕ್ಕಳಲ್ಲೂ ಶೀತ, ಜ್ವರ, ಕಫದ ಲಕ್ಷಣಗಳು ಬಿಟ್ಟರೆ ಬೇರೆ ಯಾವ ಲಕ್ಷಣಗಳಿಲ್ಲ. ಆಕ್ಸಿಜನ್‌ ಕೂಡಾ ನೀಡಿಲ್ಲ ಎನ್ನುತ್ತಾರೆ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಮೆಡಿಕಲ್‌ ಕಾಲೇಜಿನ ಪೀಡಿಯಾಟ್ರಿಕ್ಸ್‌ ಪ್ರಾಧ್ಯಾಪಕ ಡಾ. ಚಿಕ್ಕನರಸರೆಡ್ಡಿ.