ರಾಷ್ಟ್ರೀಯ ಪಕ್ಷಗಳ ಉಸ್ತುವಾರಿಗಳು ಸಂಪತ್ತನ್ನು ಲೂಟಿ ಮಾಡಲು ಬರ್ತಾರೆ!: ಎಚ್‌ಡಿಕೆ ಗಂಭೀರ ಆರೋಪ

ರಾಷ್ಟ್ರೀಯ ಪಕ್ಷಗಳ ಉಸ್ತುವಾರಿಗಳು ದೆಹಲಿಯಲ್ಲಿ ಕರ್ನಾಟಕಕ್ಕೆ ಬರುವುದು ಇಲ್ಲಿನ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಉಸ್ತುವಾರಿಗಳು ಸಂಪತ್ತನ್ನು ಲೂಟಿ ಮಾಡಲು ಬರ್ತಾರೆ!: ಎಚ್‌ಡಿಕೆ ಗಂಭೀರ ಆರೋಪ
Linkup
ಬೆಂಗಳೂರು: 'ಈ ರಾಷ್ಟ್ರೀಯ ಪಕ್ಷ ನಡೆಸಬೇಕಾದರೆ ದೆಹಲಿಯಿಂದ ಇಲ್ಲಿಗೆ ಉಸ್ತುವಾರಿ ಕಳಿಸ್ತಾರೆ. ಬಿಜೆಪಿ, ಕಾಂಗ್ರೆಸ್‌‌ನಿಂದ ಉಸ್ತುವಾರಿ ಬರ್ತಾರೆ. ಇದರ ಉದ್ದೇಶ ಏನು? ರಾಜ್ಯ ಸಂಪತ್ಭರಿತ ರಾಜ್ಯ. ಇಲ್ಲಿರುವ ಸಂಪತ್ತನ್ನು ಲೂಟಿ ಮಾಡಲು ಬರ್ತಾರೆ. ಪಾಳೇಗಾರಿಕೆ ನಡೆಸೋ ಕಥೆ ಇದು' ಎಂದು ಮಾಜಿ ಸಿಎಂ ಆರೋಪಿಸಿದರು. ಕಚೇರಿಯಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಮುಂದಿನ ಒಂದು ವಾರದ ಕಾಲ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು ಸಭೆ ಕರೆಯಲಾಗಿದೆ. ಹರಡುವಿಕೆ ಸಂಪೂರ್ಣ ಮುಗಿದಿಲ್ಲ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜಿಲ್ಲೆಗಳಿಗೆ ಹೋಗೋದು ಸೂಕ್ತವಲ್ಲ. ಮುಂದಿನ ಬುಧವಾರದವರೆಗೂ ಸಭೆ ಕರೆದು ಸಂಘಟನೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.‌ ಕೋವಿಡ್ ಅನಾಹುತ ನಿಂತ ಬಳಿಕ ಜಿಲ್ಲಾ ಪ್ರವಾಸ ಮಾಡುತ್ತೇನೆ. ಆಷಾಡ ಮಾಸದ ನಂತರ ಜಿಲ್ಲಾ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದು ಹೇಳಿದರು. ತಾಲ್ಲೂಕು, ಜಿಲ್ಲಾ ಪಂಚಾಯತ್, ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಪದಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಬಗ್ಗೆ ತಿಳಿಸಲಾಗುವುದು ಎಂದರು. ಕೋವಿಡ್, ಶಿಕ್ಷಣ, ಕೃಷಿ, ಯುವಕರಿಗೆ ಉದ್ಯೋಗ ಸೃಷ್ಟಿ ವಿಚಾರ ಬಗ್ಗೆ ಚರ್ಚೆ ಮಾಡುತ್ತೇವೆ. ನಾನು ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಮಾಡುವಲ್ಲಿಯೂ ತೊಡಗಿದ್ದೇನೆ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದರು. ಸಭೆಗಳಿಗೆ ಈಶ್ವರಪ್ಪ ಹೋಗುವುದಿಲ್ಲಜಲ ಮಿಷನ್ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ಇಲ್ಲಿಗೆ ಬಂದಿದ್ದರು. ಇಲ್ಲಿ ನಡೆಯೋ ಸಭೆಗೆ ಈಶ್ವರಪ್ಪ ಅವರು ಹೋಗೋದೇ ಇಲ್ಲ. 99 ಲಕ್ಷ ಕುಟುಂಬಕ್ಕೆ ನೀರು ಪೂರೈಸುವ ಗುರಿ ಬಗ್ಗೆ ಹೇಳಿದ್ದರು. ಅವರು ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ಬಂದಿಲ್ಲ. ಮಹದಾಯಿ, ಮೇಕೆದಾಟು ವಿಚಾರ ಸಮಗ್ರವಾಗಿ ಚರ್ಚೆ ನಡೆಸಿಲ್ಲ. ಬದಲಾಗಿ ಅವರು ಟೋಪಿ ಹಾಕಿದ್ದಾರೆ ಎಂದು ಆರೋಪಿಸಿದರು. ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದೇ ಗುರಿಜನತೆ ಮುಂದೆ ಹಲವಾರು ರೀತಿಯ ಕಾರ್ಯಕ್ರಮ ರೂಪುರೇಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಯಾವ ಸಂದರ್ಭದಲ್ಲಿ ಜನರ ಹತ್ತಿರ ಹೋಗಲು ಏನು ಮಾಡಬೇಕೋ ಮಾಡುತ್ತೇವೆ. ನಮ್ಮ ಪಕ್ಷ ಜನರಿಗಾಗಿಯೇ ಇರೋ ಪಕ್ಷ. ಜನವರಿ 15ರ ಒಳಗೆ ಕನಿಷ್ಠ 150 ಜನ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರೋದೇ ನನ್ನ ಗುರಿ ಎಂದರು. ಈಗ ನಡೆಯುತ್ತಿರುವದೆಲ್ಲ ನನ್ನದೇ ಯೋಜನೆಗಳುಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿರೋದು. 2018 ರಲ್ಲಿ ಸಿಎಂ ಆಗಿದ್ದಾಗ ಯಾವ ಯೋಜನೆಗೆ ಚಾಲನೆ ನೀಡಿದ್ದೆನೋ, ಅದನ್ನೇ ಈಗ ಮುಂದುವರೆಸುತ್ತಿದ್ದಾರೆ. ಭೂ ಸ್ವಾಧೀನ ಕ್ಲಿಯರೆನ್ಸ್ ಮಾಡಲು ಅನುಮತಿ ನೀಡಲಾಗಿತ್ತು. ಈವರೆಗೂ ಔಟರ್ ರಿಂಗ್ ರೋಡ್ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು. ಎಲ್ಲರಿಗೂ ಅಧಿಕಾರ ದಾಹ, ನನಗಿಲ್ಲಎಲ್ಲಾ ಪಕ್ಷಗಳು ಅಧಿಕಾರಕ್ಕೆ ಬರೋದಾಗಿ ಹೇಳ್ತಿದ್ದಾರೆ. ಯಡಿಯೂರಪ್ಪ ಅವರು ಹೇಳಿದ್ದರು. ಸಿದ್ದರಾಮಯ್ಯ ಕೊನೆ ಬಾರಿ ಚುನಾವಣೆ ಅಂದಿದ್ದರು. ಈಗ ಅವರು ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದುಡಿಮೆಗಿಂತ, ನಾನೇ ಸಿಎಂ ಅಂತ ಹೇಳಿಕೊಂಡು ಒಬ್ಬೊಬ್ಬರ ಹೆಸರು ಸೇರಿಸುತ್ತಾ ಬಂದಿದ್ದಾರೆ. ದೇಶಕ್ಕೆ ಮಾದರಿಯಾಗೋ ಕೆಲಸ ಮಾಡಬೇಕು. ನನಗೆ ಅಧಿಕಾರದ ಆಸೆ ಇಲ್ಲ. ಎಲ್ಲವನ್ನು ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದು ಹೇಳಿದರು.