ಕೊರೊನಿಲ್ ಬಗ್ಗೆ ತಪ್ಪು ಮಾಹಿತಿ: ಬಾಬಾ ರಾಮ್‌ದೇವ್‌ಗೆ ಕೋರ್ಟ್‌ನಿಂದ ಸಮನ್ಸ್

ಪತಂಜಲಿಯ ಕೊರೊನಿಲ್ ಉತ್ಪನ್ನದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂಬ ಆರೋಪದ ಕುರಿತಂತೆ ಯೋಗ ಗುರು ಬಾಬಾ ರಾಮ್‌ದೇವ್ ಅವರಿಗೆ ದಿಲ್ಲಿ ಹೈಕೋರ್ಟ್ ಸಮನ್ಸ್ ನೀಡಿದೆ.

ಕೊರೊನಿಲ್ ಬಗ್ಗೆ ತಪ್ಪು ಮಾಹಿತಿ: ಬಾಬಾ ರಾಮ್‌ದೇವ್‌ಗೆ ಕೋರ್ಟ್‌ನಿಂದ ಸಮನ್ಸ್
Linkup
ಹೊಸದಿಲ್ಲಿ: ಪತಂಜಲಿಯ ಔಷಧಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ನೀಡುವುದರಿಂದ ಮೇಲೆ ನಿರ್ಬಂಧ ಹೇರಬೇಕು ಎಂಬ ದಿಲ್ಲಿ ವೈದ್ಯಕೀಯ ಸಂಸ್ಥೆಯ ಅರ್ಜಿಗೆ ಸಂಬಂಧಿಸಿದರೆ, ರಾಮ್‌ದೇವ್ ಅವರಿಗೆ ಸಮನ್ಸ್ ನೀಡಿದೆ. ಜುಲೈ 13ಕ್ಕೆ ಮುಂದಿನ ವಿಚಾರಣೆ ಅವರ ನಿಗದಿಪಡಿಸಿದ್ದು, ಅಲ್ಲಿಯವರೆಗೂ ಯಾವುದೇ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ರಾಮ್‌ದೇವ್ ಅವರ ವಕೀಲರಿಗೆ ಮೌಖಿಕ ಸೂಚನೆಯನ್ನು ಕೋರ್ಟ್ ನೀಡಿದೆ. ಆದರೆ, ಅಲೋಪತಿ ವೈದ್ಯಕೀಯದ ಬಗ್ಗೆ ಹೇಳಿಕೆಗಳನ್ನು ನೀಡುವುದರ ವಿರುದ್ಧ ರಾಮ್‌ದೇವ್ ಅವರನ್ನು ನಿರ್ಬಂಧಿಸಬೇಕೆಂಬ ಬೇಡಿಕೆಯನ್ನು ಕೋರ್ಟ್ ತಿರಸ್ಕರಿಸಿದೆ. ರಾಮ್‌ದೇವ್ ಅವರ ಹೇಳಿಕೆಯು ಕೇವಲ ಒಂದು ಅಭಿಪ್ರಾಯವಷ್ಟೇ. ಇದನ್ನು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಪರೀಕ್ಷಿಸಬೇಕಿದೆ ಎಂದು ಹೇಳಿದೆ. ಇದರಿಂದ ಅಲೋಪಥಿ ವೈದ್ಯಕೀಯದಿಂದಲೇ ಹೆಚ್ಚಿನ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯಿಂದ ವ್ಯಾಪಕ ವಿರೋಧ ಎದುರಿಸುತ್ತಿರುವ ರಾಮ್‌ದೇವ್ ಅವರಿಗೆ ತುಸು ನಿರಾಳವಾಗಿದೆ. ದಿಲ್ಲಿ ವೈದ್ಯಕೀಯ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಹರಿಶಂಕರ್ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಕೊರೊನಿಲ್ ಹಾಗೂ ಅಲೋಪಥಿ ಬಗ್ಗೆ ರಾಮ್‌ದೇವ್ ತಪ್ಪು ಮಾಹಿತಿ ನೀಡುತ್ತಿರುವುದು ಮಹತ್ವ ಪಡೆದುಕೊಳ್ಳುತ್ತಿದೆ ಎಂದು ವಾದಿಸಿತು. 'ನಿಮ್ಮ ಅಲೋಪಥಿ ವೃತ್ತಿ ಅಷ್ಟು ದುರ್ಬಲವಾಗಿದೆ ಎಂದು ನನಗೆ ಅನಿಸುತ್ತಿಲ್ಲ' ಎಂದು ನ್ಯಾಯಮೂರ್ತಿ ಪ್ರತಿಕ್ರಿಯಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ, ಕೋವಿಡ್ 19ಗೆ ಚಿಕಿತ್ಸೆಗೆ ಪೂರಕವಾಗಿದೆ ಎಂದು ಪತಂಜಲಿಯ ಕೊರೊನಿಲ್ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡುವುದರಿಂದ ದೂರ ಇರಿಸುವಂತೆ ಕೋರಿದ್ದ ಮನವಿ ಪುರಸ್ಕರಿಸಿದ ಕೋರ್ಟ್, ರಾಮ್‌ದೇವ್ ಅವರಿಗೆ ಸಮನ್ಸ್ ನೀಡಿತು.