ಚೆನ್ನೈನ ಅಮೆರಿಕ ದೂತಾವಾಸ ಕಚೇರಿಯಲ್ಲಿ 'ರೇನ್ ಬೋ ಪ್ರೈಡ್' ಧ್ವಜಾರೋಹಣ

ಪ್ರಪಂಚದಾದ್ಯಂತ ಎಲ್‌ಜಿಬಿಟಿಗಳ ಹಕ್ಕುಗಳನ್ನು ಬೆಂಬಲಿಸಲು ಮತ್ತು ತಾನೇ ಅಭಿಯಾನ ಮುನ್ನಡೆಸಲು ಅಮೆರಿಕ ಹೆಮ್ಮೆಪಡುತ್ತದೆ' ಎಂದು ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್ ತಿಳಿಸಿದ್ದಾರೆ.

ಚೆನ್ನೈನ ಅಮೆರಿಕ ದೂತಾವಾಸ ಕಚೇರಿಯಲ್ಲಿ 'ರೇನ್ ಬೋ ಪ್ರೈಡ್' ಧ್ವಜಾರೋಹಣ
Linkup
: ಚೆನ್ನೈನ ಕಚೇರಿ ಕಟ್ಟಡದ ಮೇಲೆ 'ರೇನ್ ಬೋ ಪ್ರೈಡ್' ಹಾರಾಡುತ್ತಿದೆ. ಸಲಿಂಗಿ, ಗೇ, ದ್ವಿಲಿಂಗಿ, ಮಂಗಳಮುಖಿ, ಲಿಂಗಾಂತರಿ, ಕ್ವೀರ್ ಮತ್ತು ಇಂಟರ್‌ ಸೆಕ್ಸ್ (ಎಲ್ ಜಿ ಬಿಟಿಕ್ಯೂ ಐ+) ಪ್ರೈಡ್ ತಿಂಗಳ ಸ್ಮರಣಾರ್ಥ, ಜೂನ್ 2 ರಂದು ಧ್ವಜಾರೋಹಣ ಮಾಡಲಾಯ್ತು. ಈ ಧ್ವಜ ಜೂನ್ 30ರವರೆಗೆ ಕಟ್ಟಡದ ಮೇಲೆ ಹಾರಾಡಲಿದೆ. ಎಲ್‌ಜಿಬಿಟಿ ವ್ಯಕ್ತಿಗಳು ಮತ್ತು ಸಮುದಾಯಗಳ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಬದ್ಧತೆಯನ್ನು ಗಮನಿಸಿ, ಚೆನ್ನೈನ ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. 'ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್, ಯು.ಎಸ್. ಮಿಷನ್ ಟು ಇಂಡಿಯಾ ಮತ್ತು ಅಮೆರಿಕ ನಾಗರಿಕರು ಸಮಗ್ರ ಕಾನೂನಿನಡಿಯಲ್ಲಿ ಸಮಾನ ರಕ್ಷಣೆ, ಹಿಂಸಾಚಾರ ಮುಕ್ತ ವಾತಾವರಣ ಮತ್ತು ಮೂಲಭೂತ ಮಾನವ ಹಕ್ಕುಗಳ ಮಾನ್ಯತೆಗಾಗಿ ಕೆಲಸ ಮಾಡುತ್ತಿದ್ದು, ಜಗತ್ತಿನಾದ್ಯಂತದ ಎಲ್ಜಿಬಿಟಿ ಸಮುದಾಯದೊಂದಿಗೆ ನಿಲ್ಲುತ್ತಾರೆ. ಪ್ರಪಂಚದಾದ್ಯಂತ ಎಲ್‌ಜಿಬಿಟಿಗಳ ಹಕ್ಕುಗಳನ್ನು ಬೆಂಬಲಿಸಲು ಮತ್ತು ತಾನೇ ಅಭಿಯಾನ ಮುನ್ನಡೆಸಲು ಅಮೆರಿಕ ಹೆಮ್ಮೆಪಡುತ್ತದೆ' ಎಂದ ಜ್ಯುಡಿತ್ ರೇವಿನ್, 'ನೀವೂ ನಮ್ಮೊಂದಿಗೆ ಈ ಪ್ರೈಡ್ ಆಚರಣೆಯಲ್ಲಿ ಒಗ್ಗೂಡಿ' ಎಂದು ಮನವಿ ಮಾಡಿದರು. ಪ್ರೈಡ್ ತಿಂಗಳ ನೆನಪಿಗಾಗಿ, ಚೆನ್ನೈನ ಅಮೆರಿಕ ದೂತಾವಾಸ ಕಚೇರಿ, ಅಮೆರಿಕನ್ ಫಿಲ್ಮ್ ಶೋಕೇಸ್‌ನ ಬೆಂಬಲದೊಂದಿಗೆ, ವಿದ್ಯಾರ್ಥಿಗಳು, ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು, ಕಾರ್ಯಕರ್ತರು ಮತ್ತು ಎಲ್ ಜಿ ಬಿಟಿಕ್ಯೂಐ + ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಇತರರಿಗಾಗಿ 'ಶೇರ್' ಎಂಬ ಸಾಕ್ಷ್ಯಚಿತ್ರವನ್ನು ವರ್ಚುವಲ್ ಆಗಿ ಪ್ರದರ್ಶಿಸುತ್ತಿದೆ. ಈ ಕಿರುಚಿತ್ರವು ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ತನ್ನ ಸಲಿಂಗಕಾಮಿ ಗುರುತನ್ನು ಬಹಿರಂಗಪಡಿಸಲು ಹೆಣಗಾಡುತ್ತಿರುವ ಯುವ ಏಷ್ಯನ್- ಅಮೆರಿಕನ್ ಇನ್‌ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್ ಕಥಾನಕವಾಗಿದೆ. ಜೂನ್ 30 ರ ವರ್ಚುವಲ್ ಸ್ಕ್ರೀನಿಂಗ್ ನಂತರ 'ಶೇರ್' ಚಲನಚಿತ್ರ ನಿರ್ಮಾಪಕರಾದ ಬಾರ್ನಾ ಸ್ಜಾಸ್ ಮತ್ತು ಎಲ್ಲೀ ವೆನ್ ಮತ್ತು ನಟ ಟಿಮ್ ಚೌ ಅವರೊಂದಿಗೆ ಸಂವಾದ ನಡೆಯಲಿದೆ. ಜೂನ್‌ನಲ್ಲಿ, ಅಮೆರಿಕನ್ ಸೆಂಟರ್ ಪ್ರೈಡ್-ಸಂಬಂಧಿತ ವಿಷಯಗಳ ಕುರಿತು ಸಂಗ್ರಹಿಸಿ ಸೂಚಿಸಲಾದ ಮಾಹಿತಿ/ಓದಿನ ಪಟ್ಟಿಯನ್ನು ಮತ್ತು 'ಅಮೇರಿಕನ್ ಸಾಹಿತ್ಯದಲ್ಲಿ ಪ್ರೈಡ್ ಅನ್ನು ಗುರುತಿಸುವ' ಕುರಿತು ವರ್ಚುವಲ್ ಪ್ಯಾನಲ್ ಅನ್ನು ಆಯೋಜಿಸುತ್ತದೆ. ಎರಡೂ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವವರು ChennaiAmCenter@state.gov.ಗೆ ಇಮೇಲ್ ಕಳುಹಿಸಬಹುದು. ಮೇ 25 ರಂದು, ಯು.ಎಸ್. ಅಮೆರಿಕ ದೂತಾವಾಸ , ಕೇರಳದ ಕೋಳಿಕ್ಕೋಡ್ ನಲ್ಲಿರುವ ದಿ ಜೆಂಡರ್ ಪಾರ್ಕ್ ಸಹಯೋಗದೊಂದಿಗೆ 70 ಕ್ಕೂ ಹೆಚ್ಚು ಮಹಿಳೆಯರು ಮತ್ತು ಲಿಂಗಾಂತರಿ ಉದ್ಯಮಿಗಳಿಗಾಗಿ 10 ವಾರಗಳ ವರ್ಚುವಲ್ ಬ್ಯುಸಿನೆಸ್ ಇಂಗ್ಲಿಷ್ ಕೋರ್ಸ್ ಅನ್ನು ಪ್ರಾರಂಭಿಸಿತು. ಲಿಂಗ ಸಮಾನತೆಯ ದಕ್ಷಿಣ ಏಷ್ಯಾದ ಕೇಂದ್ರವಾದ ಜೆಂಡರ್ ಪಾರ್ಕ್ ಯುಎನ್ ಮಹಿಳೆಯರ ಸಹಭಾಗಿತ್ವದಲ್ಲಿ ಪಾರಂಭವಾದ ಕೇರಳ ಸರ್ಕಾರದ ಒಂದು ಉಪಕ್ರಮವಾಗಿದೆ. ನ್ಯೂಯಾರ್ಕ್ ನಗರದಲ್ಲಿ ಜೂನ್ 1969 ರಲ್ಲಿ ಸಂಭವಿಸಿದ ಸ್ಟೋನ್ವಾಲ್ ದಂಗೆಯ ಸ್ಮರಣಾರ್ಥ ಅಮೆರಿಕದಲ್ಲಿ ಜೂನ್‌ ಅನ್ನು ಪ್ರೈಡ್ ತಿಂಗಳಾಗಿ ಆಚರಿಸಲಾಗುತ್ತದೆ. ಈ ಘಟನೆಯು ಅಮೆರಿಕದಲ್ಲಿನ ಆಧುನಿಕ ಗೇ ಲಿಬರೇಶನ್ ಆಂದೋಲನದ ಭವಿಷ್ಯದ ಕ್ರಿಯಾಶೀಲತೆಗೆ ಮತ್ತು ಶಾಸನ ಬದಲಾವಣೆಗೆ ದಾರಿ ಮಾಡಿಕೊಟ್ಟಿತು. ಪ್ರಪಂಚದಾದ್ಯಂತ ಪ್ರೈಡ್ ತಿಂಗಳು ನಾಗರಿಕ ಹಕ್ಕುಗಳ ಹೋರಾಟ ಮತ್ತು ಎಲ್ಜಿಬಿಟಿಕ್ಯುಐ + ಸಮುದಾಯಕ್ಕೆ ಕಾನೂನಿನಡಿಯಲ್ಲಿ ಸಮಾನ ನ್ಯಾಯದ ಸಾಧ್ಯತೆಯ ಮುಂದುವರಿದ ಅನ್ವೇಷಣೆಯನ್ನು ನೆನಪಿಸುತ್ತದೆ, ಇದರ ಜೊತೆಗೆ ಎಲ್ ಜಿಬಿಟಿಕ್ಯುಐ + ವ್ಯಕ್ತಿಗಳ ಸಾಧನೆಗಳನ್ನೂ ಸ್ಮರಿಸುತ್ತದೆ.