ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದ ನಟ ಧನುಷ್‌ ಮೇಲೆ ಮದ್ರಾಸ್‌ ಹೈಕೋರ್ಟ್ ಗರಂ!

ಕೆಲ ದಿನಗಳ ಹಿಂದೆಯಷ್ಟೇ 'ದಳಪತಿ' ವಿಜಯ್‌ ಅವರ ಐಷಾರಾಮಿ ಕಾರಿನ ತೆರಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಮದ್ರಾಸ್ ಹೈ ಕೋರ್ಟ್ ದಂಡ ವಿಧಿಸಿತ್ತು. ಇದೀಗ ನಟ ಧನುಷ್ ಅವರ ಮೇಲೂ ಅದೇ ವಿಚಾರಕ್ಕೆ ಕೋರ್ಟ್ ಗರಂ ಆಗಿದೆ!

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದ ನಟ ಧನುಷ್‌ ಮೇಲೆ ಮದ್ರಾಸ್‌ ಹೈಕೋರ್ಟ್ ಗರಂ!
Linkup
ನಟ () ಬರೀ ಈಗ ತಮಿಳುನಾಡು ಮಾತ್ರವಲ್ಲ, ವಿದೇಶದಲ್ಲೂ ಫೇಮಸ್‌. ತಮಿಳು, ಹಿಂದಿ, ಇಂಗ್ಲಿಷ್ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅಷ್ಟೇ ಏಕೆ, ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದರೆ, ಇಷ್ಟೆಲ್ಲ ಖ್ಯಾತಿ-ವಿಖ್ಯಾತಿ ಪಡೆದುಕೊಂಡಿರುವ ಧನುಷ್ ಮೇಲೆ ಮದ್ರಾಸ್‌ ಹೈಕೋರ್ಟ್ ಗರಂ ಆಗಿದೆ. ಅದಕ್ಕೆ ಕಾರಣ, ಧನುಷ್‌, ತಮ್ಮ ದುಬಾರಿ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದು! ಏನಿದು ತೆರಿಗೆ ವಿವಾದ?ನಟ ಧನುಷ್ ಅವರು 2015ರಲ್ಲಿ ವಿದೇಶದಿಂದ ದುಬಾರಿ ಬೆಲೆಯ ರೋಲ್ಸ್ ರಾಯ್ ಕಾರನ್ನು ಆಮದು ಮಾಡಿಕೊಂಡಿದ್ದರು. ಆಗ ಅದಕ್ಕೆ ಅವರು 60 ಲಕ್ಷ ರೂ. ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ, ಅವರು ಆಗ ಬರೀ 30 ಲಕ್ಷ ರೂ. ಪಾವತಿಸಿ, ಉಳಿದ ಮೊತ್ತಕ್ಕೆ ವಿನಾಯಿತಿ ಕೋರಿದ್ದರು. ಆ ಸಂಬಂಧ ನ್ಯಾಯಾಲಯಕ್ಕೆ ಅರ್ಜಿಯನ್ನೂ ಹಾಕಿದ್ದರು. ಗುರುವಾರ (ಆ.5) ಅದು ವಿಚಾರಣೆಗೆ ಬಂದಿತ್ತು. ಆದರೆ, ಇದೀಗ ಅದೇಕೋ ವಿನಾಯಿತಿ ಕೋರಿ ದಾಖಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯಲು ಧನುಷ್‌ ಮುಂದಾಗಿದ್ದಾರೆ. ಆದರೆ, ಇದಕ್ಕೆ ಕೋರ್ಟ್ ಅನುಮತಿ ನೀಡಿಲ್ಲ. ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಮ್ ಅವರು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಧನುಷ್ ಪರ ವಾದ ಮಾಡಿರುವ ವಕೀಲರು, 'ನಟ ಧನುಷ್ ಅವರು ಈಗಾಗಲೇ ಶೇ.50ರಷ್ಟು ತೆರಿಗೆ ಹಣವನ್ನು ತುಂಬಿದ್ದಾರೆ. ಉಳಿದ ತೆರಿಗೆಯನ್ನು ಪಾವತಿಸಲು ಅವರು ಸಿದ್ಧರಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯವು ಅವಕಾಶ ನೀಡಬೇಕು' ಎಂದು ಮನವಿ ಮಾಡಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿಲ್ಲ. 'ನಟ ಧನುಷ್‌ಗೆ ನಿಜವಾದ ಕಾಳಜಿ ಇದ್ದಿದ್ದರೆ, ಈ ಹಿಂದೆ ತೆರಿಗೆಯನ್ನು ಕಟ್ಟಬಹುದಿತ್ತು. ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬಂದಮೇಲೆ ಏಕೆ ಅದನ್ನು ವಾಪಸ್ ಪಡೆಯುವುದಕ್ಕೆ ತಿರ್ಮಾನಿಸಿದ್ದೀರಿ' ಎಂದು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಮ್ ಪ್ರಶ್ನಿಸಿದ್ದಾರೆ. ಜೊತೆಗೆ, 'ಹಾಲು ಮಾರುವವರು, ದಿನಗೂಲಿ ಕಾರ್ಮಿಕರು ಕೂಡ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈ ದೇಶದ ನಾಗರೀಕರು ತಾನು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಅವರು ಯಾರು ಕೂಡ ತೆರಿಗೆ ವಿನಾಯಿತಿ ಕೇಳಿಲ್ಲ. ಆದರೆ, ತೆರಿಗೆದಾರರ ಹಣದಲ್ಲಿ ನಿರ್ಮಿಸಿರುವ ರಸ್ತೆಗಳಲ್ಲಿ ನೀವು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದೀರಿ..' ಎಂದು ಛೀಮಾರಿ ಹಾಕಿದೆ. ಅಲ್ಲದೆ, ಶೀಘ್ರದಲ್ಲೇ ಉಳಿದ ತೆರಿಗೆ ಮೊತ್ತವನ್ನು ಪಾವತಿ ಮಾಡುವಂತೆ ಸೂಚನೆ ನೀಡಿದೆ. ಕೆಲ ದಿನಗಳ ಹಿಂದಷ್ಟೇ ನಟ ಅವರು ಕೂಡ ತಮ್ಮ ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ್ದರು. ಆದರೆ, ತೆರಿಗೆ ಕಟ್ಟದ ಕಾರಣಕ್ಕಾಗಿ ಅವರಿಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು.