ಧನ್ಯಾ ರಾಮ್‌ಕುಮಾರ್ ಹೀರೋಯಿನ್‌ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ 'ಸೂಪರ್ ಸ್ಟಾರ್' ರಜನಿಕಾಂತ್‌

ನಟ ಸೂರಜ್‌ ನಿರ್ದೇಶನದ 'ನಿನ್ನ ಸನಿಹಕೆ' ಚಿತ್ರದ ಮೂಲಕ ನಟಿಯಾಗುತ್ತಿರುವ ಧನ್ಯಾ ರಾಮ್‌ಕುಮಾರ್‌ ಅವರು, 'ಸಿನಿಮಾ ರಿಲೀಸ್‌ ದಿನ ಹತ್ತಿರವಾಗುತ್ತಿರುವುದು ಎಕ್ಸೈಟ್‌ಮೆಂಟ್‌ ಹೆಚ್ಚಿಸಿದೆ' ಎಂದಿದ್ದಾರೆ.

ಧನ್ಯಾ ರಾಮ್‌ಕುಮಾರ್ ಹೀರೋಯಿನ್‌ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ 'ಸೂಪರ್ ಸ್ಟಾರ್' ರಜನಿಕಾಂತ್‌
Linkup
ಪದ್ಮಾ ಶಿವಮೊಗ್ಗ ಸೂರಜ್‌ ಗೌಡ ಮತ್ತು ಧನ್ಯಾ ರಾಮ್‌ಕುಮಾರ್‌ ನಟನೆಯ '' ಚಿತ್ರ ಪ್ರೇಕ್ಷಕರ ಸನಿಹಕ್ಕೆ ಬರಲು ಸಜ್ಜಾಗಿದೆ. ಧನ್ಯಾ ಅವರು ಡಾ. ರಾಜ್‌ಕುಮಾರ್‌ ಮೊಮ್ಮಗಳು ಮತ್ತು ನಟ ರಾಮ್‌ಕುಮಾರ್‌ ಮಗಳು ಎಂಬ ಕಾರಣಕ್ಕೆ ಅವರ ಕುಟುಂಬದಲ್ಲಿ ಎಲ್ಲರಿಗೂ ಎಕ್ಸೈಟ್‌ ಉಂಟು ಮಾಡಿದೆ. ಅದರಲ್ಲೂ 'ಸೂಪರ್‌ ಸ್ಟಾರ್‌' ರಜನಿಕಾಂತ್‌ ಅವರು ಧನ್ಯಾ ಅತ್ಯುತ್ತಮ ನಟಿಯಾಗಬಲ್ಲರು ಎಂದು ಭರವಸೆ ವ್ಯಕ್ತಪಡಿಸಿದ ಬಳಿಕ ಈ ಸಿನಿಮಾ ಬಗ್ಗೆ ಧನ್ಯಾ ಕಾತರ ಇಮ್ಮಡಿಯಾಗಿದೆ. ರಜನಿಕಾಂತ್‌ ಅವರು ಮೊದಲಿನಿಂದಲೂ ರಾಜ್‌ ಕುಟುಂಬಕ್ಕೆ ಹತ್ತಿರವಿದ್ದವರು. ಧನ್ಯಾರನ್ನು ಬಾಲ್ಯದಲ್ಲಿ ನೋಡಿದಾಗಲೇ ಅವರು ಅವರಲ್ಲಿನ ನಟನಾ ಪ್ರತಿಭೆಯನ್ನು ಗುರುತಿಸಿದ್ದು ವಿಶೇಷ. ಈಗ ಸ್ವತಃ ಅವರೇ ಈ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಧನ್ಯಾಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ. 'ನನ್ನ ಮೊದಲ ಸಿನಿಮಾ ರಿಲೀಸ್‌ ಆಗುತ್ತಿರುವುದರಿಂದ ಬಹಳ ಎಕ್ಸೈಟ್‌ ಆಗಿದ್ದೇನೆ. ಅದರಲ್ಲೂ, ರಜನಿ ಅಂಕಲ್‌ ಇದರ ಪೋಸ್ಟರ್‌ ನೋಡಿ ಭರವಸೆ ವ್ಯಕ್ತಪಡಿಸಿದ್ದು, ಥ್ರಿಲ್‌ ನೀಡಿದೆ. ಅವರು, ಈ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. ಧನ್ಯಾ ಚಿಕ್ಕವಳಿದ್ದಾಗಲೇ ನಾನು ಅಣ್ಣಾವ್ರಿಗೆ ಇವಳು ತುಂಟಿ, ಚುರುಕಾಗಿದ್ದಾಳೆ, ಒಳ್ಳೆಯ ನಟಿಯಾಗ್ತಾಳೆ, ಈ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾಳೆ ಎಂದು ನನ್ನಮ್ಮನ ಹತ್ತಿರ ಹೇಳಿದ್ದಾರೆ. ಇದು ನನಗೆ ಶಕ್ತಿ ನೀಡಿದೆ' ಎಂದಿದ್ದಾರೆ ಅವರು. ತಮಗೆ ಮೊದಲಿನಿಂದಲೂ ನಟನೆ ಬಗ್ಗೆ ಆಸಕ್ತಿ ಇತ್ತು ಎಂದಿರುವ ಧನ್ಯಾ, 'ನಮ್ಮ ಕುಟುಂಬದಲ್ಲಿ ನಟಿಯಾಗುತ್ತಿರುವ ಮೊದಲ ಹುಡುಗಿ ನಾನು. ಈ ಹಿಂದೆ ಪಿಆರ್‌ ಆಗಿ ಕೆಲಸ ಮಾಡಿದೆ. ಆಗ ಇದು ನನ್ನ ಫೀಲ್ಡ್‌ ಅಲ್ಲಎನ್ನಿಸಿತು. ನಾನು ನಟಿಯಾಗ್ತೀನಿ ಅಂದಾಗ ನನ್ನ ಅಪ್ಪ, ಅಮ್ಮ ಇದರ ಬಗ್ಗೆ ಆಸಕ್ತಿ ತೋರಲಿಲ್ಲ. ಈಗ ಅವರಿಗೂ ಇಷ್ಟವಾಗಿದೆ. ನನಗೆ ನನ್ನ ಆಯ್ಕೆ ತಡವಾಯ್ತು ಎನ್ನಿಸುತ್ತಿಲ್ಲ. ಈ ಚಿತ್ರದ ಕಥೆ, ಪಾತ್ರ ನನಗೆ ಇಷ್ಟವಾದ ಕಾರಣ ಒಪ್ಪಿದೆ' ಎಂದಿದ್ದಾರೆ. ಧನ್ಯಾ. 'ನಾನು ನಟಿಯಾಗ್ತೀನಿ ಅಂದಾಗಿನಿಂದ ಹಿಡಿದು ಈಗ ಈ ಸಿನಿಮಾದ ಹಾಡು, ಟ್ರೇಲರ್‌ ನೋಡಿ ನಮ್ಮ ಕುಟುಂಬದವರಿಗೆಲ್ಲಆಶ್ಚರ್ಯ ಮತ್ತು ಶಾಕ್‌ ಆಗ್ತಿದೆ. ನಾನು ನಟನೆಯನ್ನು ಇಷ್ಟು ಸೀರಿಯಸ್‌ ಆಗಿ ತಗೊಳ್ತೀನಿ ಅಂತ ಅವರಿಗಾರಿಗೂ ಅನ್ನಿಸಿರಲಿಲ್ಲ. ಈಗ ಅವರು ತುಂಬಾ ಖುಷಿಯಾಗಿದ್ದಾರೆ. ಬಹಳ ಸಪೋರ್ಟ್‌ ಮಾಡ್ತಿದ್ದಾರೆ' ಎಂದು ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಲಿವಿಂಗ್‌ ಟುಗೆದರ್‌ನ ಕಥೆ ಇದೆ. ಸ್ವಲ್ಪ ಕೋಪ ಜಾಸ್ತಿ ಇರುವ ಹುಡುಗಿಯ ಪಾತ್ರ ನನ್ನದು ಎಂದು ಧನ್ಯಾ ವಿವರಿಸಿದ್ದಾರೆ. 'ನಿನ್ನ ಸನಿಹಕೆ' ಸಿನಿಮಾ ಅಕ್ಟೋಬರ್‌ 8ರಂದು ಬಿಡುಗಡೆಯಾಗಲಿದೆ. ಕೋಟ್‌ ಈ ಚಿತ್ರತಂಡದೊಂದಿಗೆ ನಾನು ಬಹಳ ಕಂಫರ್ಟಬಲ್‌ ಆಗಿದ್ದೆ. ಸೂರಜ್‌ ಮತ್ತು ನಾನು ಮೊದಲಿನಿಂದಲೂ ಸ್ನೇಹಿತರು. ಇದರಲ್ಲಿ ಅವರು ಯಂಗ್‌ ಜನರೇಷನ್‌ ಪ್ರತಿನಿಧಿಸುತ್ತಿರುವುದು ಈ ಸಿನಿಮಾ ಚೆನ್ನಾಗಿ ಮೂಡಿಬರಲು ಕಾರಣ. -ಧನ್ಯಾ ರಾಮ್‌ಕುಮಾರ್‌, ನಟಿ