ಕನ್ನಡ ಹಾಡಿಗೆ ಆದ್ಯತೆ ನೀಡದ ಬೆಂಗಳೂರಿನ 'ಬದ್ಮಾಶ್‌' ಪಬ್: ಹಾಡು ಕೇಳಿದ ಅಣ್ಣ -ತಂಗಿ ಮೇಲೆ ಹಲ್ಲೆ!

ಕನ್ನಡ ಹಾಡು ಹಾಕಿ ಎಂದು ಕೇಳಿದ ಯುವತಿ ಹಾಗೂ ಆಕೆಯ ಸಹೋದರ, ಸ್ನೇಹಿತರ ಮೇಲೆ ಹಲ್ಲೆಗೆ ಯತ್ನಿಸಿದ ಕೋರಮಂಗಲದ ಪಬ್‌ ಡಿಜೆ ಸಿದ್ದಾರ್ಥ್‌ ಮಲ್ಹೋತ್ರಾ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಘಟನೆಯ ಹಿನ್ನಲೆ ಏನು? ಪೊಲೀಸರು ಈ ಬಗ್ಗೆ ಏನು ಹೇಳುತ್ತಿದ್ದಾರೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡ ಹಾಡಿಗೆ ಆದ್ಯತೆ ನೀಡದ ಬೆಂಗಳೂರಿನ 'ಬದ್ಮಾಶ್‌' ಪಬ್: ಹಾಡು ಕೇಳಿದ ಅಣ್ಣ -ತಂಗಿ ಮೇಲೆ ಹಲ್ಲೆ!
Linkup
: ಕನ್ನಡ ಹಾಡು ಹಾಕಿ ಎಂದು ಕೇಳಿದ ಯುವತಿ ಹಾಗೂ ಆಕೆಯ ಸಹೋದರ, ಸ್ನೇಹಿತರ ಮೇಲೆ ಹಲ್ಲೆಗೆ ಯತ್ನಿಸಿದ ಕೋರಮಂಗಲದ ಪಬ್‌ ಸಿದ್ದಾರ್ಥ್‌ ಮಲ್ಹೋತ್ರಾ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕೋರಮಂಗಲದ 80 ಅಡಿ ರಸ್ತೆಯ 'ಬದ್ಮಾಶ್‌' ಪಬ್‌ನಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ವಿವೇಕನಗರದ ಸುಮಿತಾ ಎಂಬುವವರ ಹುಟ್ಟುಹಬ್ಬದ ಪ್ರಯುಕ್ತ ಸಹೋದರ ನಂದಕಿಶೋರ್‌ ಸೇರಿದಂತೆ ಸುಮಾರು 15 ಮಂದಿ ಸ್ನೇಹಿತರು ಪಾರ್ಟಿ ಮಾಡಲು ತೆರಳಿದ್ದರು. ಈ ವೇಳೆ ಪಬ್‌ನ ಡಿಜೆ ಸಿದ್ದಾರ್ಥ್‌ ನಿರಂತರವಾಗಿ ಹಿಂದಿ, ಇಂಗ್ಲಿಷ್‌, ತೆಲುಗು, ತಮಿಳು ಹಾಡುಗಳನ್ನು ಪ್ಲೇ ಮಾಡುತ್ತಿದ್ದ. ಈ ವೇಳೆ ಸುಮಿತಾ ಮತ್ತು ಅವರ ಸ್ನೇಹಿತರು ಕನ್ನಡ ಹಾಡು ಹಾಕುವಂತೆ ಡಿಜೆಗೆ ಹಲವು ಬಾರಿ ಒಂದೇ ಒಂದು ಕನ್ನಡ ಹಾಡು ಹಾಕುವಂತೆ ಮನವಿ ಮಾಡಿದರೂ ಹಾಕಲಿಲ್ಲ. ಹಲ್ಲೆಗೆ ಯತ್ನ: ಆರಂಭದಲ್ಲಿ ಐದು ನಿಮಿಷದಲ್ಲೇ ಕನ್ನಡ ಹಾಕುವುದಾಗಿ ಹೇಳಿದ್ದ ಡಿಜೆ ಸಿದ್ದಾರ್ಥ್‌, ಬಳಿಕ ತಡರಾತ್ರಿಯಾದರೂ ಸ್ಪಂದಿಸಿಲ್ಲ. ಬಳಿಕ ನಂದಕಿಶೋರ್‌ ಅವರು ಕನ್ನಡ ಹಾಡು ಹಾಕಿ ಎಂದು ಗಟ್ಟಿಯಾಗಿ ಹೇಳಿದಾಗ ಕೋಪಗೊಂಡ ಡಿಜೆ, 'ಕನ್ನಡ ಹಾಡು ಬೇಕೆಂದರೆ ಮತ್ತೊಮ್ಮೆ ನಮ್ಮ ಪಬ್‌ಗೆ ಬರಬೇಡಿ, ಹೊರಗೆ ಹೋಗಿ' ಎಂದು ಟೇಬಲ್‌ ಬಳಿ ಬಂದು ನಂದಕಿಶೋರ್‌ ಅಂಗಿಯ ಕಾಲರ್‌ ಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಡಿಜೆ ಸಿದ್ದಾರ್ಥ್‌ ಹಾಗೂ ಸುಮಿತಾ ಸ್ನೇಹಿತರ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ. ಬಳಿಕ ಪಬ್‌ ಸಿಬ್ಬಂದಿ ಡಿಜೆಯನ್ನು ಸಮಾಧಾನಪಡಿಸಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿದ್ದು. ಡಿ.ಜೆಯನ್ನು ಕೋರಮಂಗಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆಗೆ ಮಣಿದು ಕ್ಷಮೆಯಾಚನೆ ಘಟನೆ ಹಿನ್ನೆಲೆಯಲ್ಲಿ ಭಾನುವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು 'ಬದ್ಮಾಶ್‌' ಪಬ್‌ ಬಳಿ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕನ್ನಡ ಹಾಡು ಹಾಕಲು ನಿರಾಕರಿಸಿದ ಡಿಜೆ ಬಹಿರಂಗ ಕ್ಷಮೆಯಾಚಿಸಬೇಕು' ಎಂದು ಆಗ್ರಹಿಸಿದ್ದಾರೆ. ಈ ವೇಳೆ ಪಬ್‌ನ ಸಿಬ್ಬಂದಿ ಹಾಗೂ ಡಿಜೆ ಸಿದ್ದಾರ್ಥ್‌ ಕ್ಷಮೆ ಕೇಳಿ, 'ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು,' ಎಂದು ತಿಳಿಸಿದ್ದಾರೆ.