ಬಸ್‌ನಲ್ಲಿ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಬಿಎಂಟಿಸಿ ಚಾಲಕ, ಮೆಕ್ಯಾನಿಕ್ ಸೇರಿ ಮೂವರ ಬಂಧನ

ಆರೋಪಿಗಳ ಪೈಕಿ ವಿಠಲ್‌ ಭಜಂತ್ರಿ ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿದ್ದು, ಶರಣಬಸಪ್ಪ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಆರೋಪಿಗಳು ವಿಜಯಪುರದಿಂದ ಬಸ್‌ನಲ್ಲಿ ಗಾಂಜಾ ತರಿಸಿಕೊಂಡು ಕೆಂಗೇರಿ ಬಿಎಂಟಿಸಿ ಬಸ್‌ ನಿಲ್ದಾಣ ಸಮೀಪದಲ್ಲಿ ಕರ್ತವ್ಯದ ವೇಳೆ ಅಕ್ರಮವಾಗಿ ಗಾಂಜಾ ಪೂರೈಕೆ ಮಾಡುತ್ತಿದ್ದರು.

ಬಸ್‌ನಲ್ಲಿ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಬಿಎಂಟಿಸಿ ಚಾಲಕ, ಮೆಕ್ಯಾನಿಕ್ ಸೇರಿ ಮೂವರ ಬಂಧನ
Linkup
ಬೆಂಗಳೂರು: ಗಾಂಜಾ ಮಾರಾಟದ ಪ್ರತ್ಯೇಕ ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಮತ್ತು ಮೆಕ್ಯಾನಿಕ್‌ ಸೇರಿ ಮೂವರು ಆರೋಪಿಗಳು ಕೆಂಗೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳು ವಿಠಲ್‌ ಭಜಂತ್ರಿ (35) ಶರಣಬಸಪ್ಪ(32) ಮುಜೀಬ್‌ (32) ಎಂಬುವವರಾಗಿದ್ದು, ಆರೋಪಿಗಳಿಂದ 10 ಕೆಜಿ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳ ಪೈಕಿ ವಿಠಲ್‌ ಭಜಂತ್ರಿ ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿದ್ದು, ಶರಣಬಸಪ್ಪ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಆರೋಪಿಗಳು ವಿಜಯಪುರದಿಂದ ಬಸ್‌ನಲ್ಲಿ ಗಾಂಜಾ ತರಿಸಿಕೊಂಡು ಕೆಂಗೇರಿ ಬಿಎಂಟಿಸಿ ಬಸ್‌ ನಿಲ್ದಾಣ ಸಮೀಪದಲ್ಲಿ ಕರ್ತವ್ಯದ ವೇಳೆ ಅಕ್ರಮವಾಗಿ ಗಾಂಜಾ ಪೂರೈಕೆ ಮಾಡುತ್ತಿದ್ದರು. ಇತ್ತೀಚೆಗೆ ಗಾಂಜಾ ವ್ಯಸನಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಗ್ರಾಹಕರ ಸೋಗಿನಲ್ಲಿ ಗಾಂಜಾ ಖರೀದಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸ್ಥಳವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9 ಕೆ.ಜಿ. 90 ಗ್ರಾಂ ಗಾಂಜಾ ಮತ್ತು ಐದು ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣ ಮತ್ತೊಂದು ಪ್ರಕರಣದಲ್ಲಿ ವಾಲ್ಮೀಕಿ ನಗರದ ಮುಜೀಬ್‌ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಈ ಹಿಂದೆಯೂ ಡ್ರಗ್ಸ್‌ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಬಿಡುಗಡೆ ಬಳಿಕ ಮತ್ತೆ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈತನಿಂದ ಒಂದು ಕೆ.ಜಿ. 300 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.