ಅಡುಗೆ ಎಣ್ಣೆ, ಗ್ಯಾಸ್‌ ದರ ಏರಿಕೆ ಬಿಸಿ; ಜನವರಿಯಿಂದ ಹೋಟೆಲ್‌ ಊಟ, ತಿಂಡಿಯ ಬೆಲೆ ಏರಿಕೆಗೆ ನಿರ್ಧಾರ!

Bengaluru Hotels Price Hike: ಅಡುಗೆ ಎಣ್ಣೆ, ಗ್ಯಾಸ್‌ ದರ ಸೇರಿದಂತೆ ನಾನಾ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದರ ಆಧಾರದ ಮೇಲೆ ತಿಂಡಿ, ಊಟದ ದರವನ್ನು ಏರಿಕೆ ಮಾಡಿದರೆ ಗ್ರಾಹಕರು ಕಡಿಮೆಯಾಗುತ್ತಾರೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಮಹಾಮಾರಿಯಿಂದಾಗಿ ಹೋಟೆಲ್‌ಗಳು ವ್ಯಾಪಾರ ವಹಿವಾಟು ಇಲ್ಲದೆ ತೀವ್ರ ತೊಂದರೆಗೆ ಸಿಲುಕಿವೆ. ನೂರಾರು ಹೋಟೆಲ್‌ಗಳು ಶಾಶ್ವತವಾಗಿ ಉದ್ಯಮವನ್ನೇ ನಿಲ್ಲಿಸಿವೆ.

ಅಡುಗೆ ಎಣ್ಣೆ, ಗ್ಯಾಸ್‌ ದರ ಏರಿಕೆ ಬಿಸಿ; ಜನವರಿಯಿಂದ ಹೋಟೆಲ್‌ ಊಟ, ತಿಂಡಿಯ ಬೆಲೆ ಏರಿಕೆಗೆ ನಿರ್ಧಾರ!
Linkup
ಬೆಂಗಳೂರು: ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ತೈಲ ಬೆಲೆ, ಗ್ಯಾಸ್‌ ದರ ಏರಿಕೆ ಕಾಣುತ್ತಲೇ ಬರುತ್ತಿದ್ದು ಜನಸಾಮಾನ್ಯರಿಗೆ ಒಂದರ ಮೇಲೆ ಒಂದು ಬಿಸಿ ತಾಗುತ್ತಲೇ ಇತ್ತು. ಇದೀಗ ಹೋಟೆಲ್‌ಗಳ ಊಟ, ತಿಂಡಿಗಳ ಬೆಲೆ ಏರಿಕೆಗೂ ನಿರ್ಧಾರ ಮಾಡಲಾಗಿದ್ದು, ಗಾಯದ ಮೇಲೆ ಬರೆ ಎಳೆಯುವಂತಾಗಿದೆ. ರಾಜ್ಯದಲ್ಲಿ ಹೋಟೆಲ್‌ಗಳಲ್ಲಿ ತಿಂಡಿ, ಊಟದ ದರದಲ್ಲಿ ಮುಂದಿನ ಮೂರು ತಿಂಗಳು ಇದೇ ಬೆಲೆ ಇರಲಿದ್ದು, ಜನವರಿ ನಂತರ ಊಟ ತಿಂಡಿಯ ದರದ ಏರಿಕೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್‌ ತಿಳಿಸಿದ್ದಾರೆ. ಆ ಮೂಲಕ ಹೋಟೆಲ್‌ಗಳಲ್ಲಿ ಈ ವರ್ಷ ಅಂದರೆ ಮುಂದಿನ ಮೂರು ತಿಂಗಳ ಕಾಲ ಊಟ, ತಿಂಡಿಗಳ ದರದಲ್ಲಿ ಏರಿಕೆಯಿಲ್ಲ ಎಂದು ಅವರು ಹೇಳಿದ್ದಾರೆ. ಅಡುಗೆ ಎಣ್ಣೆ, ಗ್ಯಾಸ್‌ ದರ ಸೇರಿದಂತೆ ನಾನಾ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದರ ಆಧಾರದ ಮೇಲೆ ತಿಂಡಿ, ಊಟದ ದರವನ್ನು ಏರಿಕೆ ಮಾಡಿದರೆ ಗ್ರಾಹಕರು ಕಡಿಮೆಯಾಗುತ್ತಾರೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಮಹಾಮಾರಿಯಿಂದಾಗಿ ಹೋಟೆಲ್‌ಗಳು ವ್ಯಾಪಾರ ವಹಿವಾಟು ಇಲ್ಲದೆ ತೀವ್ರ ತೊಂದರೆಗೆ ಸಿಲುಕಿವೆ. ನೂರಾರು ಹೋಟೆಲ್‌ಗಳು ಶಾಶ್ವತವಾಗಿ ಉದ್ಯಮವನ್ನೇ ನಿಲ್ಲಿಸಿವೆ. ಹೀಗಿರುವಾಗ ಈಗಷ್ಟೇ ಸ್ವಲ್ಪ ಸುಧಾರಿಸಿ ಕೊಳ್ಳುತ್ತಿರುವ ಹೋಟೆಲ್‌ಗಳಲ್ಲಿ ದರ ಏರಿಸಿದರೆ ಮತ್ತಷ್ಟು ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂಬ ಲೆಕ್ಕಾಚಾರದಿಂದ ಹೋಟೆಲ್‌ಗಳಲ್ಲಿ ದರ ಏರಿಕೆ ಮಾಡುತ್ತಿಲ್ಲ. ಕಳೆದ ಮಾರ್ಚ್‌ನಲ್ಲೇ ದರ ಏರಿಸಬೇಕಾಗಿತ್ತು. ಆದರೆ, ಹೋಟೆಲ್‌ ಉದ್ಯಮ ಮೊದಲು ಸುಧಾರಣೆ ಕಾಣಬೇಕು ಎಂಬ ಕಾರಣದಿಂದ ಏರಿಕೆ ಮಾಡಲಿಲ್ಲ. ಇದೀಗ ಎಲ್ಲ ದರವೂ ಏರಿಕೆಯಾಗಿದೆ. ಆದರೂ ಹೆಚ್ಚಿನ ಗ್ರಾಹಕರು ಬರುವಂತಾಗಿ, ಸ್ವಲ್ಪ ಚೇತರಿಕೆ ಕಾಣಲಿ. ಜನವರಿ ನಂತರ ಪರಿಸ್ಥಿತಿ ನೋಡಿಕೊಂಡು ಏರಿಕೆ ಮಾಡುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ನಂತರ ಹಂತ- ಹಂತವಾಗಿ ಏರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಆ ಮೂಲಕ ಹೋಟೆಲ್‌ಗಳಲ್ಲಿ ಈ ವರ್ಷ ಅಂದರೆ ಮುಂದಿನ ಮೂರು ತಿಂಗಳ ಕಾಲ ಊಟ, ತಿಂಡಿಗಳ ದರದಲ್ಲಿ ಏರಿಕೆಯಿಲ್ಲ ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್‌ ತಿಳಿಸಿದರು.