ಕನ್ನಡ ಮತ್ತು ತೆಲುಗಿನಲ್ಲಿ ಬರಲಿದೆ ರಿಷಿಯ 'ನೋಡಿ ಸ್ವಾಮಿ ಇವನು ಇರೋದೆ ಹೀಗೆ'!

ವಿಭಿನ್ನ ಪಾತ್ರ, ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ರಿಷಿ ಈ ಹಿಂದೆ 'ಕವಲುದಾರಿ' ಮತ್ತು 'ಆಪರೇಷನ್ ಅಲಮೇಲಮ್ಮ' ಮುಂತಾದ ಸಿನಿಮಾಗಳಿಂದ ಗುರುತಿಸಿಕೊಂಡಿದ್ದಾರೆ. ಈಗ ಅವರು 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರದ ಮೂಲಕ ತೆಲುಗಿಗೂ ಕಾಲಿಡಲಿದ್ದಾರೆ.

ಕನ್ನಡ ಮತ್ತು ತೆಲುಗಿನಲ್ಲಿ ಬರಲಿದೆ ರಿಷಿಯ 'ನೋಡಿ ಸ್ವಾಮಿ ಇವನು ಇರೋದೆ ಹೀಗೆ'!
Linkup
'ಕವಲುದಾರಿ' ಮತ್ತು 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ನಟ ಅವರ ನಟನೆಯ ‘' ಸಿನಿಮಾದ ಟೀಸರ್‌ ಬಿಡುಗಡೆಯಾಗಿ ವೈರಲ್‌ ಆಗಿದೆ. ವಿಶೇಷವೆಂದರೆ, ಈ ಸಿನಿಮಾದ ಟೀಸರ್ ಕನ್ನಡ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿದೆ. ಈ ಸಿನಿಮಾವು ತೆಲುಗಿನಲ್ಲಿ 'ವದ್ದುರಾ ಸೋದರ' ಹೆಸರಿನಲ್ಲಿ ರಿಲೀಸ್ ಆಗಲಿದೆ. ಆ ಮೂಲಕ ರಿಷಿ ಟಾಲಿವುಡ್ ಅಂಗಳದಲ್ಲೂ ಸದ್ದು ಮಾಡಲಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ರಿಷಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ತುಂಬ ತಮಾಷೆಯಾಗಿ ಈ ಸಿನಿಮಾ ಮೂಡಿಬಂದಿದೆ ಎಂಬುದು ಈಗಾಗಲೇ ಟೀಸರ್ ನೋಡಿದವರಿಗೆ ಗೊತ್ತಾಗಿದೆ. ಇಸ್ಲಾವುದ್ದೀನ್‌ ಎಂಬವರು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಿಷಿಗೆ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ವಿಭಿನ್ನ ಶೈಲಿಯ ಕಥೆ ಇರುವ ಈ ಸಿನಿಮಾದ ಟೀಸರ್‌ ನೋಡಿದ ಹಲವು ಮಂದಿ ಮೆಚ್ಚಿಕೊಂಡು ರಿಷಿಗೆ ಕರೆ ಮಾಡಿ ಮಾತನಾಡಿದ್ದಾರೆ. 'ಸಿನಿಮಾದ ಕಂಟೆಂಟ್‌ ವಿಭಿನ್ನವಾಗಿರುವ ಕಾರಣ ಟೀಸರ್‌ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಾಮಾನ್ಯ ಜನರು ಪ್ರತಿ ಬಾರಿಯೂ ಟೀಸರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಈ ಬಾರಿ ಸ್ಯಾಂಡಲ್‌ವುಡ್‌ನ ಹಲವು ನಟ ನಟಿಯರು ನನಗೆ ಪರ್ಸನಲ್‌ ಆಗಿ ಕರೆ ಮಾಡಿ ಟೀಸರ್‌ ಮತ್ತು ಕಂಟೆಂಟ್‌ ಬಗ್ಗೆ ಮಾತನಾಡಿದ್ದಾರೆ. ಟೀಸರ್‌ ನೋಡಿದ ತಕ್ಷಣ ಸಿನಿಮಾ ನೋಡಬೇಕು ಎನಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಚಾರ ನನಗೆ ಹೆಚ್ಚಿನ ಖುಷಿ ತಂದಿದೆ. ನನ್ನ ಪ್ರಕಾರ ಸಿನಿಮಾ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ' ಎಂದು ಹೇಳಿದ್ದಾರೆ ರಿಷಿ. 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರ ಡಿಪ್ರೆಷನ್‌ ಹಾಗೂ ಆತ್ಮಹತ್ಯೆ ಕುರಿತ ವಿಷಯಗಳನ್ನು ಕಥೆ ಹೊಂದಿದೆ. 'ಎಲ್ಲಾ ಕಡೆ ಪ್ಯಾನಿಕ್‌ ಅಟ್ಯಾಕ್‌, ಡಿಪ್ರೆಷನ್‌ ಜಾಸ್ತಿಯಾಗ್ತಿದೆ. ಇವತ್ತಿನ ದಿನದಲ್ಲಂತೂ ಇದು ಸಾಮಾನ್ಯ ಸಂಗತಿ. ಮೊದಲೆಲ್ಲ ಡಿಪ್ರೆಷನ್‌ ಮತ್ತು ಆಂಗ್ಸೈಟಿ ಬಗ್ಗೆ ಹೇಳಿಕೊಳ್ಳೋಕೆ ಜನರಿಗೆ ಗೊತ್ತಾಗುತ್ತಿರಲಿಲ್ಲ. ಸಿನಿಮಾದಲ್ಲಿ ಇದನ್ನು ತುಂಬಾ ಗಂಭೀರವಾಗಿ ಹೇಳುತ್ತಿಲ್ಲ. ಹಾಸ್ಯದ ಲೇಪನ ಇರುತ್ತೆ. 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರವು ಬ್ಲಾಕ್‌ ಕಾಮಿಡಿ ಜಾನರ್‌ನದು ಎನ್ನಬಹುದು. ಸಿನಿಮಾದಲ್ಲಿ ಕಥೆ ಬಹಳ ಸೀರಿಯಸ್‌ ಆಗಿ ಸಾಗುತ್ತಿರುತ್ತದೆ. ಆದರೆ, ನೋಡುವವರಿಗೆ ಅವನ ಕಷ್ಟ ಕಂಡಾಗ ಬಹಳ ನಗು ತರಿಸುತ್ತಿರುತ್ತದೆ. ಟ್ರೀಟ್‌ ಮಾಡಿರೋದೂ ಅದೇ ರೀತಿ' ಎನ್ನುತ್ತಾರೆ ಅವರು. 'ಈ ಸಿನಿಮಾವನ್ನು ಯಾವಾಗ ರಿಲೀಸ್ ಮಾಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಟೀಸರ್‌ನಲ್ಲಿರುವಂತೆ ಬ್ಲಾಕ್‌ ಕಾಮಿಡಿ ಇಡೀ ಸಿನಿಮಾದಲ್ಲಿರುತ್ತದೆ. ಇದರ ಜತೆಗೆ ನನ್ನ ಮತ್ತೊಂದು ಸಿನಿಮಾ 'ರಾಮನ ಅವತಾರ'ದ ಮೂರು ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಸದ್ಯದಲ್ಲೆಅದನ್ನು ಕಂಪ್ಲೀಟ್‌ ಮಾಡಲಿದ್ದೇವೆ' ಎಂದಿದ್ದಾರೆ ರಿಷಿ.