ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ತನಿಖಾಧಿಕಾರಿಗಳ ಪ್ರಶ್ನೆಗೆ ಹಂಸಲೇಖ ಉತ್ತರ

ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರವಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿಚಾರಣೆ ನಡೆದಿದೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ತನಿಖಾಧಿಕಾರಿಗಳ ಪ್ರಶ್ನೆಗೆ ಹಂಸಲೇಖ ಉತ್ತರ
Linkup
ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆದಿದೆ. ಇನ್ಸ್‌ಪೆಕ್ಟರ್‌ ರಮೇಶ್ ನೇತೃತ್ವದಲ್ಲಿ ಹಂಸಲೇಖ ವಿಚಾರಣೆ ನಡೆದಿದೆ. ಸುಮಾರು ಅರ್ಧ ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಪೇಜಾವರಶ್ರೀ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣ ಸಲುವಾಗಿ ತನಿಖೆ ನಡೆದಿದೆ. ತನಿಖಾಧಿಕಾರಿ ಮುಂದೆ ಹಂಸಲೇಖ ಕಣ್ಣೀರು ಹಾಕಿದ್ದಾರಂತೆ. "ನಾನು ಯಾಕೆ ಹಾಗೆ ಹೇಳಿದೆನೋ ಗೊತ್ತೇ ಆಗಲಿಲ್ಲ ಸಾರ್, ಯಾವ ಉದ್ದೇಶವೂ ಇರಲಿಲ್ಲ, ಮಾತಿನ ಭರದಲ್ಲಿ ಹೇಳಿದೆ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ರು. ನನ್ನ ಜೀವನದಲ್ಲಿ ಎಂದೂ ಈ ರೀತಿ ಮಾಡಿಕೊಂಡಿರಲಿಲ್ಲ. ತನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವ ಧರ್ಮ, ಜಾತಿ ನಿಂದಿಸುವ ಉದ್ದೇಶ ಇರಲಿಲ್ಲ. ಇದರಿಂದ ನನ್ನ ಕೆಲಸದಲ್ಲಿಯೂ ನನಗೆ ಹಿನ್ನಡೆಯಾಗಿದೆ. ಈ ಘಟನೆಯಿಂದ ತುಂಬಾ ನೋವು ಅನುಭವಿಸಿದ್ದೇನೆ" ಎಂದು ತನಿಖಾಧಿಕಾರಿ ಮುಂದೆ ಹಂಸಲೇಖ ಹೇಳಿದ್ದಾರೆ. ಹಂಸಲೇಖ ಪರ ಶಾಸಕ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್ ಮಾಡಿ "ನಾದಬ್ರಹ್ಮ ಹಂಸಲೇಖ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ. ಕೆಲವು ಮನುವಾದಿಗಳು ವಿರೋಧ ಮಾಡೇ ಮಾಡುತ್ತಾರೆ. ಬೆಂಗಳೂರಿನಲ್ಲಿ ‘ಕೈ’ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಕುಲ ಕಸುಬಿನ ಪ್ರಕಾರ ಆಹಾರ ಪದ್ಧತಿ ಇರುತ್ತೆ. ಇಂತಹದ್ದೇ ಆಹಾರ ಸ್ವೀಕರಿಸಿ ಎಂದು ಹೇಳಲು ಆಗಲ್ಲ. ಬಿಜೆಪಿಯವರು ದಲಿತರ ಮತ್ತು ಹಿಂದುಳಿದವರ ಪರವಾಗಿಲ್ಲ" ಎಂದಿದ್ದಾರೆ. ನಾದಬ್ರಹ್ಮ ಹಂಸಲೇಖ ಹೇಳಿರುವುದರಲ್ಲಿ ತಪ್ಪೇನಿದೆ? ಬಿಜೆಪಿಯವರು ದಲಿತರ ಮನೆಯಲ್ಲಿ ಊಟ ತಿನ್ನುತ್ತಾರಾ? ದಲಿತರ ಮನೆಗೆ ಹೋಗಿ ಹೋಟೆಲ್‌ನಿಂದ ತಿಂಡಿ ತರಿಸ್ತಾರೆ. ಸುಮ್ಮನೆ ಏಕೆ ದಲಿತರ ಮನೆಗೆ ಹೋಗಿ ಹೀಗೆಲ್ಲ ಮಾಡಬೇಕು? ಎಂದು ಬೆಂಗಳೂರಿನಲ್ಲಿ ‘ಕೈ’ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. "ಹಂಸಲೇಖ ಮಾತನಾಡಿರುವುದನ್ನು ಖಂಡಿಸುತ್ತೇನೆ. ಕ್ಷಮೆ ಕೇಳಲೂ ಅರ್ಹರಿಲ್ಲದಂತೆ ಮಾತನಾಡಿದ್ದಾರೆ. ಹಂಸಲೇಖ ಪರ ನಟ ಚೇತನ್ ಬಂದಿದ್ದಾರೆ. ಇಷ್ಟೆಲ್ಲಾ ಮಾಡುವ ಚೇತನ್ ಏನ್ ಮಾಡಿದ್ದಾರೆ? ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ? ದಲಿತರ ಪರ ನಟ ಚೇತನ್ ಕೊಡುಗೆ ಏನು? ಕೆಲವರು ಇಂತಹ ಅವಕಾಶಕ್ಕೆ ಕಾಯುತ್ತಿರುತ್ತಾರೆ" ಎಂದು ವಿಜಯಪುರದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಹಂಸಲೇಖ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಹೀಗಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಹಿನ್ನೆಲೆ ಪೊಲೀಸ್ ಠಾಣೆಗೆ ಹಂಸಲೇಖ ಹಾಜರಾಗಿದ್ದರು. ಹಂಸಲೇಖ ಠಾಣೆಗೆ ಬರುವ ವೇಳೆ ಬಸವನಗುಡಿ ಪೊಲೀಸ್ ಠಾಣೆಯ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಠಾಣೆಯ ಬಳಿ ಹಂಸಲೇಖ ಪರ, ವಿರೋಧ ಘೋಷಣೆ ಕೂಗಲಾಗಿತ್ತು. ಹಂಸಲೇಖ ಪರವಾಗಿ ಕನ್ನಡಪರ ಸಂಘಟನೆಗಳು ಘೋಷಣೆ ಕೂಗಿದರೆ, ಹಂಸಲೇಖ ವಿರುದ್ಧವಾಗಿ ಬಜರಂಗದಳ ಘೋಷಣೆ ಕೂಗಿತ್ತು.