15 ವರ್ಷಗಳ ವೈಯಕ್ತಿಕ ಗುಟ್ಟನ್ನು ಈಗ ರಟ್ಟು ಮಾಡಿದ ನಟಿ ಸಂಜನಾ ಗಲ್ರಾನಿ!

ನಟಿ ಸಂಜನಾ ಗಲ್ರಾನಿ ಅವರ ವೈಯಕ್ತಿಕ ಬದುಕಿನ ರಹಸ್ಯವೊಂದನ್ನು ಈಗ ಎಲ್ಲರೆದುರು ಹೇಳಿಕೊಂಡಿದ್ದಾರೆ. ನಟಿಯಾದಮೇಲೆ ಏನೇನೆಲ್ಲ ಗಾಸಿಪ್‌ ಮಾಡಲಾಗುವುದು ಎಂದು ಕೂಡ ಸಂಜನಾ ಹೇಳಿದ್ದಾರೆ.

15 ವರ್ಷಗಳ ವೈಯಕ್ತಿಕ ಗುಟ್ಟನ್ನು ಈಗ ರಟ್ಟು ಮಾಡಿದ ನಟಿ ಸಂಜನಾ ಗಲ್ರಾನಿ!
Linkup
ನಟಿ ಡ್ರಗ್ಸ್ ಪ್ರಕರಣದಲ್ಲಿ ಕೆಲ ತಿಂಗಳುಗಳ ಕಾಲ ಜೈಲಿನಲ್ಲಿ ಇದ್ದು ಹೊರಗಡೆ ಬಂದಮೇಲೆ ಹೆಚ್ಚು ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ, ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ, ಅವರ ವೈಯಕ್ತಿಕ ಜೀವನದ ಗುಟ್ಟನ್ನು ರಟ್ಟು ಮಾಡುತ್ತಿದ್ದಾರೆ. 15 ವರ್ಷಗಳ ಹಿಂದೆ ಹಾಕಿಸಿಕೊಂಡ ಟ್ಯಾಟೂ ಬಗ್ಗೆ ಸಂಜನಾ ಈಗ ಮೌನ ಮುರಿದಿದ್ದಾರೆ. ಸಂಜನಾ ಹೇಳಿದ್ದೇನು? "ವೈಯಕ್ತಿಕವೂ, ನನ್ನ ಹೃದಯಕ್ಕೆ ಹತ್ತಿರ ಆಗಿರುವ, ನಾನು ತುಂಬ ಪ್ರೀತಿಸುವ ಟ್ಯಾಟೂ ಬಗ್ಗೆ ನಾನು ಈಗ ಹೇಳಲಿದ್ದೇನೆ. ಅನಗತ್ಯ ಗಾಸಿಪ್, ಅತಿಯಾಗಿ ವೈಯಕ್ತಿಕವಾಗಿ ವೈಭವಿಕರಿಸೋದು ಬೇಡ ಅಂತ ನಾನು ಇಷ್ಟು ವರ್ಷಗಳ ಟ್ಯಾಟೂ ವಿಷಯ ಮುಚ್ಚಿಟ್ಟಿದ್ದೆ. ನಾನೀಗ ಅಧಿಕೃತವಾಗಿ ಮದುವೆಯಾಗಿದ್ದೇನೆ. ಈಗ ನಾನು ಇದನ್ನು ಶಕ್ತಿ ಎಂದು ಪರಿಗಣಿಸುವೆ. ವೃತ್ತಿಯಲ್ಲಿ ನಟಿಯಾಗಿ ಅನಗತ್ಯವಾಗಿ ಬೇರೆ ವ್ಯಕ್ತಿಯ ಜೊತೆ ಹೊರಗಡೆ ಕಾಣಿಸಿಕೊಂಡರೆ ಲಿಂಕಪ್‌ ಕಥೆಗಳು ಸೃಷ್ಟಿಯಾಗುತ್ತವೆ. ನನ್ನ ತಮ್ಮನನ್ನು ಬಾಯ್‌ಫ್ರೆಂಡ್ ಎಂದು ಹೇಳಿದ್ದಿದೆ, ಅದಕ್ಕೆ ನಾನೇ ಸಾಕ್ಷಿ. ಸಹೋದರನ ಜೊತೆ ನಟಿ ಸಾರ್ವಜನಿಕವಾಗಿ ಓಡಾಡಿದರೆ ಬಾಯ್‌ಫ್ರೆಂಡ್ ಆಗುತ್ತಾನಾ? ಇದರಿಂದ ನನಗೆ ಬೇಸರ ಆಗಲ್ವಾ? ಮಾನಸಿಕವಾಗಿ ಹಿಂಸೆ ಆಗಲ್ವಾ? ನಮ್ಮ ಮುಂದಿರುವ ವ್ಯಕ್ತಿ ಸ್ನೇಹಿತ ಆಗಿರಬಹುದು, ಹಿತೈಷಿ ಆಗಿರಬಹುದು, ರಾಜಕಾರಣಿ, ನಟ, ಕ್ರಿಕೆಟರ್ ಆಗಿರಬಹುದು. ಎಲ್ಲ ಚೌಕಟ್ಟುಗಳನ್ನು ಮೀರಿದ ಸ್ನೇಹವನ್ನು ಯಾವುದೇ ಸಾಕ್ಷಿ, ಪುರಾವೆಗಳಿಲ್ಲದೆ ವಿವಿಧ ದೃಷ್ಟಿಯಲ್ಲಿ 1000 ಕಥೆ ಹೆಣೆಯಲಾಗುವುದು. ಇದನ್ನು ನೋಡಿದರೆ ಅಸಹ್ಯವಾಗುವುದು. 2021ರಲ್ಲಿ ಇದ್ದರೂ ಕೂಡ ಈ ರೀತಿ ಮನಸ್ಥಿತಿ ಇರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಕೆಟ್ಟ ರೀತಿಯಲ್ಲಿ ಸಂಬಂಧಗಳನ್ನು ನಿರ್ಣಯಿಸಲಾಗುವುದು. ನಾನು ಪ್ರೀತಿಸುವ ವ್ಯಕ್ತಿ ಅಜೀಜ್ ಅವರನ್ನು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಕಳೆದ 15 ವರ್ಷಗಳಿಂದ ಸ್ನೇಹಿತ, ಪ್ರಿಯಕರ, ತಂದೆ ರೀತಿ ಮಾರ್ಗದರ್ಶನ ನೀಡಿರುವ ಅಜೀಜ್ ಜೊತೆ ಪ್ರತಿ ವರ್ಷ ಕಳೆದಿರುವುದಕ್ಕೆ ದೇವರಿಗೆ ಧನ್ಯವಾದ ತಿಳಿಸುವೆ. ಗುಟ್ಟಾಗಿ ಸಂಜನಾ ಮದುವೆ ಆಗಿದ್ದರು ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಸಂಜನಾ ಜೈಲಿಗೆ ಹೋದಾಗ ಅವರು ಮದುವೆಯಾಗಿರುವ ವಿಚಾರ ಹೊರ ಬಿದ್ದಿತ್ತು. ತಾನು ಮದುವೆ ಆಗಿರೋದು ಸತ್ಯ, ಲಾಕ್‌ಡೌನ್‌ ಟೈಮ್‌ನಲ್ಲಿ ಮದುವೆಯಾದೆ, ಆಮೇಲೆ ಮದುವೆ ವಿಚಾರ ಹೇಳೋಣ ಎಂದುಕೊಂಡಿದ್ದೆವು ಎಂದು ಸಂಜನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.