'ಇದೆಲ್ಲ ಊಹಾಪೋಹ': ನಾಯಕತ್ವ ರಚನೆ ಬದಲಾವಣೆ ವರದಿಗೆ ಟಾಟಾ ಸನ್ಸ್ ಪ್ರತಿಕ್ರಿಯೆ

ಟಾಟಾ ಸಮೂಹ ನಾಯಕತ್ವದ ಒಟ್ಟಾರೆ ರಚನೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬ ವರದಿಗಳನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ತಳ್ಳಿಹಾಕಿದ್ದಾರೆ. ಇಂತಹ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಇದೆಲ್ಲ ಊಹಾಪೋಹ': ನಾಯಕತ್ವ ರಚನೆ ಬದಲಾವಣೆ ವರದಿಗೆ ಟಾಟಾ ಸನ್ಸ್ ಪ್ರತಿಕ್ರಿಯೆ
Linkup
ಹೊಸದಿಲ್ಲಿ: ಮುಂಬರುವ ದಿನಗಳಲ್ಲಿ ಯಾವುದೇ ಆಡಳಿತಾತ್ಮಕ, ನಾಯಕತ್ವ ಬದಲಾವಣೆ ಇಲ್ಲ ಎಂದು ಲಿಮಿಟೆಡ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಸ್ಪಷ್ಟಪಡಿಸಿದ್ದಾರೆ. ಟಾಟಾ ಸಮೂಹದಲ್ಲಿ ಮಹತ್ವದ ಹುದ್ದೆಯೊಂದು ಸೃಷ್ಟಿಯಾಗಲಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ. ಅಂತಹ ಯಾವುದೇ ಅಗತ್ಯ ನಿರ್ಧಾರಗಳಿದ್ದರೆ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. 'ಕೆಲವು ಮಾಧ್ಯಮ ವರದಿಗಳಲ್ಲಿ ಊಹಿಸಿರುವಂತೆ ಸಂಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ ನಾಯಕತ್ವ ಸಂರಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ. ಟಾಟಾ ಸನ್ಸ್ ಮೂಲಗಳನ್ನು ಉಲ್ಲೇಖಿಸಿದ್ದ ಬ್ಲೂಮ್‌ಬರ್ಗ್, ಸಂಸ್ಥೆಯ ಕಾರ್ಪೋರೇಟ್ ಆಡಳಿತವನ್ನು ಸುಧಾರಿಸಲು ಅದರ ನಾಯಕತ್ವದಲ್ಲಿ ಐತಿಹಾಸಿಕ ಬದಲಾವಣೆಯಾಗಲಿದೆ. ಸಂಸ್ಥೆಯ 153 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ. ಹುದ್ದೆ ಸೃಷ್ಟಿಯ ಬಗ್ಗೆ ಟಾಟಾ ಸನ್ಸ್ ಗಂಭೀರ ಚಿಂತನೆ ನಡೆಸಿದೆ ಎಂದು ಬುಧವಾರ ವರದಿ ಮಾಡಿತ್ತು. ಈ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಟಾಟಾ ಟ್ರಸ್ಟ್‌ ಅಧ್ಯಕ್ಷ , 'ಸಮೂಹದ ಸಾಂಸ್ಥಿಕ ಚೌಕಟ್ಟಿನಲ್ಲಿ ಭಾರಿ ಬದಲಾವಣೆಯಾಗಲಿದೆ ಎಂಬ ಊಹಾತ್ಮಕ ವರದಿಗಳಿಂದ ತೀವ್ರ ಬೇಸರವಾಗಿದೆ' ಎಂದು ಹೇಳಿದ್ದಾರೆ. 'ಇಂತಹ ಊಹಾಪೋಹಗಳು ಮಾರುಕಟ್ಟೆ ಮೌಲ್ಯದಲ್ಲಿ ಗಮನಾರ್ಹ ಪ್ರಗತಿಯೊಂದಿಗೆ ಸುಗಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ತಂಡವೊಂದರ ನಡುವೆ ಗೊಂದಲಗಳನ್ನು ಮೂಡಿಸಲಷ್ಟೇ ಕಾರಣವಾಗುತ್ತವೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ವರದಿಯ ಪ್ರಕಾರ, ಟಾಟಾ ಸಮೂಹದ ವ್ಯವಹಾರವನ್ನು ನಿರ್ವಹಿಸಲು ಸಿಇಒ ಹುದ್ದೆ ಸೃಷ್ಟಿಸಲಾಗುತ್ತಿದ್ದು, ಅಧ್ಯಕ್ಷರು ಷೇರುದಾರರ ಪರವಾಗಿ ಸಿಇಒ ಮೇಲ್ವಿಚಾರಣೆ ನಡೆಸಲಿದ್ದಾರೆ. ಟಾಟಾ ಸನ್ಸ್ ಅಧ್ಯಕ್ಷ ಎನ್. ನಟರಾಜನ್ ಅವರ ಅವಧಿ ಫೆಬ್ರವರಿಯಲ್ಲಿ ಅಂತ್ಯಗೊಳ್ಳಲಿದ್ದು, ಅವರನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರನ್ನು ಸಿಇಒ ಹುದ್ದೆಗೆ ಪರಿಗಣಿಸಲಾಗುತ್ತಿದೆ ಎನ್ನಲಾಗಿತ್ತು.