ಇಂದು ನೀವು ಗೋಲ್ಡ್‌ ಖರೀದಿಸುವ ಮುನ್ನ ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

Gold Price in Bangalore: ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

ಇಂದು ನೀವು ಗೋಲ್ಡ್‌ ಖರೀದಿಸುವ ಮುನ್ನ ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?
Linkup
ಬೆಂಗಳೂರು: ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ , ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಈ ವಾರ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ₹4,753 ದಾಖಲಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಮಂಗಳವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,510 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,560 ರೂಪಾಯಿ ದಾಖಲಾಗಿದೆ. ಬೆಳ್ಳಿ ದರ:ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹65,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹65,400 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹69,800 ರೂ ನಿಗದಿಯಾಗಿದೆ. ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:ಬೆಂಗಳೂರು: ₹44,510 (22 ಕ್ಯಾರಟ್‌) ₹48,560 (24 ಕ್ಯಾರಟ್‌) ಚೆನ್ನೈ: ₹44,780 (22 ಕ್ಯಾರಟ್‌) ₹48,850 (24 ಕ್ಯಾರಟ್‌) ದಿಲ್ಲಿ: ₹46,660 (22 ಕ್ಯಾರಟ್‌), ₹50,910 (24 ಕ್ಯಾರಟ್‌) ಹೈದರಾಬಾದ್‌: ₹44,510 (22 ಕ್ಯಾರಟ್‌) ₹48,560 (24 ಕ್ಯಾರಟ್‌) ಕೋಲ್ಕತಾ: ₹46,950 (22 ಕ್ಯಾರಟ್‌), ₹49,650 (24 ಕ್ಯಾರಟ್‌) ಮಂಗಳೂರು: ₹44,510 (22 ಕ್ಯಾರಟ್‌) ₹48,560 (24 ಕ್ಯಾರಟ್‌) ಮುಂಬಯಿ: ₹46,530(22 ಕ್ಯಾರಟ್‌), ₹47,530 (24 ಕ್ಯಾರಟ್‌ ಮೈಸೂರು: ₹44,510 (22 ಕ್ಯಾರಟ್‌) ₹48,560 (24 ಕ್ಯಾರಟ್‌) ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಳಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲಿ ಹಲವೆಡೆ ತುಸು ಏರಿಕೆ ಕಂಡು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.