ಮೆಹುಲ್ ಚೋಕ್ಸಿ ಅಪಹರಣದ ಆರೋಪ ನಿರಾಕರಿಸಿದ 'ಪ್ರೇಯಸಿ' ಬಾರ್ಬರಾ

ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಕ್ಕೆ ಕರೆತರಲಾಗಿತ್ತು. ಇದಕ್ಕೆ ಆತನ ಪ್ರೇಯಸಿ ಸಹಕಾರ ನೀಡಿದ್ದಳು ಎಂಬ ಆರೋಪಗಳನ್ನು ಬಾರ್ಬರಾ ತಳ್ಳಿಹಾಕಿದ್ದಾರೆ.

ಮೆಹುಲ್ ಚೋಕ್ಸಿ ಅಪಹರಣದ ಆರೋಪ ನಿರಾಕರಿಸಿದ 'ಪ್ರೇಯಸಿ' ಬಾರ್ಬರಾ
Linkup
ಹೊಸದಿಲ್ಲಿ: ಭಾರತಕ್ಕೆ ಬೇಕಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಮತ್ತು ಬರ್ಮುಡಾ ದ್ವೀಪ ರಾಷ್ಟ್ರದಿಂದ ಅಪಹರಿಸಿ ಡೊಮಿನಿಕಾಕ್ಕೆ ಕರೆದೊಯ್ಯಲಾಗಿದೆ ಎಂಬ ಆರೋಪವನ್ನು ಅವರ ಪ್ರೇಯಸಿ ಎನ್ನಲಾಗಿರುವ ಬಾರ್ಬರಾ ಜರೇಬಿಕಾ ತಳ್ಳಿಹಾಕಿದ್ದಾರೆ. ತನಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ವಜ್ರದ ಬ್ರೇಸ್‌ಲೆಟ್ ಮತ್ತು ಉಂಗುರಗಳನ್ನು ನೀಡಿ ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೆ ಅವೆಲ್ಲವೂ ನಕಲಿಯಾಗಿದ್ದವು. ಮೂಲ ಉದ್ದೇಶ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ ವಿಫಲವಾಗಿದ್ದ ಬಳಿಕ ಆಕೆಗೆ ಆನ್‌ಲೈನ್ ವಜ್ರದ ವ್ಯಾಪಾರ ಆರಂಭಿಸಲು ಸಹಾಯ ಮಾಡುವ ಭರವಸೆ ನೀಡಿದ್ದ. ಮೇ 23ರಂದು ಆಂಟಿಗುವಾದಿಂದ ಚೋಕ್ಸಿಯನ್ನು ಹೊರಗೆ ಕರೆದೊಯ್ಯಲು ಪ್ರಯತ್ನ ಮಾಡಿದ ಭಾರತದ ಏಜೆಂಟ್‌ಗಳು ಅಥವಾ ಬೇಹುಗಾರರ ತಂಡದಲ್ಲಿ ತಾನೂ ಭಾಗಿಯಾಗಿದ್ದಾಗಿ ಚೋಕ್ಸಿಯ ಪತ್ನಿ ಪ್ರೀತಿ ಮಾಡಿರುವ ಆರೋಪಗಳನ್ನು ಬಾರ್ಬರಾ ನಿರಾಕರಿಸಿದ್ದಾರೆ. 'ದ್ವೀಪದಲ್ಲಿ ಚೋಕ್ಸಿ ಜತೆಗೆ ಒಂಟಿಯಾಗಿ ಡ್ರೈವ್ ಮಾಡಿಕೊಂಡು ಹೋಗುವ ಹಾಗೂ ನಡೆದು ಸಾಗುವ ನೂರಾರು ಅವಕಾಶಗಳನ್ನು ಪಡೆದಿದ್ದೆ. ಆತನನ್ನು ಅಪಹರಿಸುವುದಾದರೆ, ಎಲ್ಲರೂ ಬೀದಿಯಲ್ಲಿ ಇರುವ ಹಗಲಿನ ವೇಳೆ ನನ್ನ ಮನೆಯಲ್ಲಿ ಏಕೆ ಪ್ರಯತ್ನ ಮಾಡಬೇಕಿತ್ತು?' ಎಂದು ಆಕೆ ಪ್ರಶ್ನಿಸಿದ್ದಾರೆ. ಕದ್ದುಮುಚ್ಚಿ ಹೋಗಿಲ್ಲಇನ್ನೊಂದೆಡೆ ಅಪಹರಣ ಆರೋಪದಲ್ಲಿ ಚೋಕ್ಸಿಗೆ ಮತ್ತೊಂದು ಹಿನ್ನಡೆಯಾಗಿದೆ. ಮೇ 23ರ ಬೆಳಿಗ್ಗೆ 10 ಗಂಟೆಗೆ ಆಂಟಿಗುವಾದಿಂದ ಕಸ್ಟಮ್ಸ್ ಪರಿಶೀಲನೆಗಳನ್ನು ನಡೆಸಿದ ಬಳಿಕ ದೋಣಿಯಲ್ಲಿ ಚೋಕ್ಸಿಯನ್ನು ತಾನೇ ಕರೆದುಕೊಂಡು ಬಂದಿದ್ದು, ರಹಸ್ಯವಾಗಿ ಕರೆದೊಯ್ದಿಲ್ಲ ಎಂದು 'ಕಾಲಿಯೊಪ್ ಆಫ್ ಆರ್ನೆ' ಕ್ಯಾಪ್ಟನ್ ಹೇಳಿಕೆ ನೀಡಿದ್ದಾನೆ. ಜಾಮೀನು ಅರ್ಜಿ ಮುಂದೂಡಿಕೆಈ ನಡುವೆ ಮೆಹುಲ್ ಚೋಕ್ಸಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 11ಕ್ಕೆ ಮುಂದೂಡಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ, ಚೋಕ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.