ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ರಾಜಕೀಯ ಕೋಗಿಲೆ' ಎಂದು 'ಬಣ್ಣಿಸಿದ' ಬಿಜೆಪಿ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಯಾವಾಗಲೂ ಬೇರೆಯವರ ಹೆಗಲನ್ನೇ ಆಶ್ರಯಿಸುತ್ತಿದ್ದಾರೆ. ಅವರಿಗೆ ಸ್ವಂತ ಪರಿಶ್ರಮದಿಂದ ಪಕ್ಷ ಕಟ್ಟುವುದೇ ಗೊತ್ತಿಲ್ಲ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ರಾಜಕೀಯ ಕೋಗಿಲೆ' ಎಂದು 'ಬಣ್ಣಿಸಿದ' ಬಿಜೆಪಿ!
Linkup
ಹೊಸದಿಲ್ಲಿ: ನಾಯಕ ಅವರನ್ನು 'ರಾಜಕಾರಣದ ಕೋಗಿಲೆ' ಎಂದು ಕರೆದಿದೆ. ಅಂದಹಾಗೆ, ಇದು ಹೊಗಳಿಕೆಯಲ್ಲ. ತಮ್ಮ ಲಾಭಕ್ಕಾಗಿ ಬೇರೆಯವರನ್ನು ರಾಹುಲ್ ಗಾಂಧಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಟೀಕೆ. ಅವರು ತಳಮಟ್ಟದಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಆದರೆ ತಮ್ಮ ಸ್ವಂತ ರಾಜಕೀಯ ಅಜೆಂಡಾಗಳಿಗಾಗಿ ಬೇರೆಯವರ ಹೆಗಲನ್ನು ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ವಕ್ತಾರ ಟೀಕಾಪ್ರಹಾರ ನಡೆಸಿದ್ದಾರೆ. ಉತ್ತರ ಪ್ರದೇಶದ ಮುಜಪ್ಫರ್‌ನಗರ ಜಿಲ್ಲೆಯಲ್ಲಿ ಭಾನುವಾರ ನಡೆದ ಮಹಾಪಂಚಾಯತ್ ಸಭೆಯನ್ನು ಉಲ್ಲೇಖಿಸುವಾಗ ರೈತರ ಪ್ರತಿಭಟನೆಯ ಹಳೆಯ ಚಿತ್ರವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಅದು ಅವರ 'ಗೊಂದಲ ಮತ್ತು ಸುಳ್ಳುಗಳನ್ನು ಹರಡುವ' ರಾಜಕೀಯದ ಭಾಗ ಎಂದು ಆರೋಪಿಸಿದ್ದಾರೆ. 'ಕಾಂಗ್ರೆಸ್ ಪರಿಪೂರ್ಣ ಅಧ್ಯಕ್ಷರನ್ನು ಹೊಂದಿಲ್ಲ. ಅದು ತಳಮಟ್ಟದಲ್ಲಿ ಸಮಸ್ಯೆಗಳನ್ನು ಎತ್ತಲು ಅಸಮರ್ಥವಾಗಿದೆ. ಇದಕ್ಕಾಗಿಯೇ ಸೋನಿಯಾ ಗಾಂಧಿ ಅವರು ಇತರೆ ಪಕ್ಷಗಳ ನಾಯಕರ ಜತೆ ವರ್ಚುವಲ್ ಸಭೆಗಳನ್ನು ನಡೆಸುತ್ತಿದ್ದರೆ, ರಾಹುಲ್ ಗಾಂಧಿ ಅವರು ರಾಜಕೀಯಕ್ಕಾಗಿ ಗೊಂದಲಗಳನ್ನು ಹರಡುವ ಪ್ರಯತ್ನವಾಗಿ ಹಳೆಯ ಚಿತ್ರಗಳನ್ನು ಪೋಸ್ಟ್ ಮಾಡುವುದನ್ನು ಅವಲಂಬಿಸಿಕೊಂಡಿದ್ದಾರೆ' ಎಂದು ಪಾತ್ರಾ ವ್ಯಂಗ್ಯವಾಡಿದ್ದಾರೆ. 'ರಾಹುಲ್ ಗಾಂಧಿ, ತನ್ನ ಗೂಡನ್ನು ತಾನೇ ಕಟ್ಟಿಕೊಳ್ಳದ ಕೋಗಿಲೆಯಂತೆ. ಬೇರೆ ಹಕ್ಕಿಗಳು ಕಟ್ಟಿರುವ ಗೂಡುಗಳಲ್ಲಿಯೇ ಆರಾಮವಾಗಿರುತ್ತವೆ. ಅವರು ತಮ್ಮ ಪಕ್ಷದ ಸಂಘಟನೆಯನ್ನು ಕಟ್ಟುವ ಕೆಲಸದಲ್ಲಿ ಅವರಿಗೆ ಆಸಕ್ತಿಯಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ತಮ್ಮ ರಾಜಕೀಯಕ್ಕಾಗಿ ಬೇರೆಯವರ ಹೆಗಲನ್ನು ಬಳಸಿಕೊಳ್ಳುವುದು ಅವರಿಗೆ ಹವ್ಯಾಸವಾಗಿಬಿಟ್ಟಿದೆ' ಎಂದು ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿ ಸರ್ಕಾರವು ರೈತರು ಮತ್ತು ಅವರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದ ಪಾತ್ರಾ, ರೈತರ ಖಾತೆಗಳಿಗೆ 1.5 ಲಕ್ಷ ಕೋಟಿ ರೂ. ನೇರ ವರ್ಗಾವಣೆ, ದಾಖಲೆಯ ಖರೀದಿ ಹಾಗೂ ಅವರ ಉತ್ಪನ್ನಗಳಿಗೆ ಬೆಂಬಲ ಬೆಲೆಯಂತಹ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಆರಂಭದ ತೊಡಕುಗಳ ಬಳಿಕ ಕಳೆದ ಕೆಲವು ದಿನಗಳಲ್ಲಿ ಒಂದೇ ದಿನ ಕೋಟಿಗಟ್ಟಲೆ ಲಸಿಕೆಗಳನ್ನು ನೀಡಲಾಗುತ್ತಿದೆ. ಈಗ ಲಸಿಕೆಗಳ ಬಗ್ಗೆ ರಾಹುಲ್ ಗಾಂಧಿ ಒಂದೂ ಟ್ವೀಟ್ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿಯೇ ಅಧ್ಯಕ್ಷ- ಯುವ ಕಾಂಗ್ರೆಸ್ ನಿರ್ಣಯಎಐಸಿಸಿ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿ ಅವರನ್ನು ಮರು ನೇಮಕ ಮಾಡಬೇಕೆಂದು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ. ಸೋಮವಾರ ಅಂತ್ಯಗೊಂಡ, ಎರಡು ದಿನಗಳ ಐವೈಸಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಿಯಮಗಳಿಗೆ ಅನುಗುಣವಾಗಿ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ, ಐವೈಸಿ ಜಂಟಿಯಾಗಿ ನಿರ್ಣಯ ತೆಗೆದುಕೊಂಡಿದೆ. ಈ ಮಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ನಮ್ಮನ್ನು ಮುನ್ನಡೆಸಬೇಕೆನ್ನುವುದು ಪಕ್ಷದ ಲಕ್ಷಾಂತರ ಕಾರ್ಯಕರ್ತರ ಬಯಕೆಯಾಗಿದೆ' ಎಂದು ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ ತಿಳಿಸಿದ್ದಾರೆ.