'ಸೂಪರ್‌ ಆಪ್‌'ಗೆ ಮೈಕ್ರೋಸಾಫ್ಟ್‌ನ್ನು ಕರೆತರಲು ಮಾತುಕತೆ ಆರಂಭಿಸಿದ ಟಾಟಾ ಸನ್ಸ್‌

ತನ್ನ ನೂತನ ಡಿಜಿಟಲ್‌ ಉದ್ಯಮ 'ಸೂಪರ್‌ ಆಪ್‌'ಗೆ ಆಂಕರ್‌ ಇನ್ವೆಸ್ಟರ್‌ ರೂಪದಲ್ಲಿ ಅಮೆರಿಕಾದ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ನ್ನು ಕರೆತರಲು ಟಾಟಾ ಸನ್ಸ್‌ ಮಾತುಕತೆ ಆರಂಭಿಸಿದೆ ಎಂದು ಈ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳು ತಿಳಿಸಿದ್ದಾರೆ.

'ಸೂಪರ್‌ ಆಪ್‌'ಗೆ ಮೈಕ್ರೋಸಾಫ್ಟ್‌ನ್ನು ಕರೆತರಲು ಮಾತುಕತೆ ಆರಂಭಿಸಿದ ಟಾಟಾ ಸನ್ಸ್‌
Linkup
ತನ್ನ ನೂತನ ಡಿಜಿಟಲ್‌ ಉದ್ಯಮಕ್ಕೆ ಆಂಕರ್‌ ಇನ್ವೆಸ್ಟರ್‌ ರೂಪದಲ್ಲಿ ಅಮೆರಿಕಾದ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ನ್ನು ಕರೆತರಲು ಟಾಟಾ ಗ್ರೂಪ್‌ ಮಾತುಕತೆ ಆರಂಭಿಸಿದೆ ಎಂದು ಈ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳು ತಿಳಿಸಿದ್ದಾರೆ. ಕಾಫಿಯಿಂದ ಕಾರ್‌ವರೆಗಿನ ಬೃಹತ್‌ ಸಮೂಹವನ್ನು ಮುನ್ನಡೆಸುತ್ತಿರುವ ಟಾಟಾ ಗ್ರೂಪ್‌ ಒಬ್ಬರು ಅಥವಾ ಇಬ್ಬರು ಬೃಹತ್‌ ಹೂಡಿಕೆದಾರರನ್ನು ಒಳಗೊಳ್ಳಲು ಉತ್ಸುಕವಾಗಿದ್ದು, ಪೂರ್ಣ ಪ್ರಮಾಣದ ಹೂಡಿಕೆ ಸಂಗ್ರಹಕ್ಕೆ ಚಾಲನೆ ನೀಡಿದೆ ಎಂದು ಅವರು ಹೇಳಿದ್ದಾರೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಹೊಸ ಸಂಸ್ಥೆಯ ಅಡಿಯಲ್ಲಿ ವಿವಿಧ ವ್ಯವಹಾರಗಳಲ್ಲಿ ಇರುವ ಡಿಜಿಟಲ್ ಸ್ವತ್ತುಗಳನ್ನು ಸಂಯೋಜಿಸುವ ಮೂಲಕ ಸಮೂಹದ ವೈವಿಧ್ಯಮಯ ಗ್ರಾಹಕ ವ್ಯವಹಾರಗಳನ್ನು ಆಧುನೀಕರಿಸಲು ಮುಂದಾಗಿದ್ದಾರೆ. ಈ ಮೂಲಕ ಅಮೆಜಾನ್ ಮತ್ತು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಬೃಹತ್‌ ಕಂಪನಿಗಳ ಜತೆಗೆ ಪೈಪೋಟಿಗೆ ಸಿದ್ಧತೆ ಆರಂಭಿಸಿದ್ದಾರೆ. ರಿಲಯನ್ಸ್ ಜಿಯೋ ಹೂಡಿಕೆ ಯೋಜನೆಯನ್ನು ಪುನರಾವರ್ತಿಸಲು ಚಂದ್ರಶೇಖರನ್ ಉತ್ಸುಕರಾಗಿದ್ದಾರೆ ಎಂದು ಗುಂಪಿನ ಒಳಗಿನವರು ಹೇಳಿದ್ದಾರೆ. ಕಳೆದ ವರ್ಷ ಹೂಡಿಕೆದಾರರಿಂದ ರೂ .1.45 ಲಕ್ಷ ಕೋಟಿ (20 ಬಿಲಿಯನ್ ಡಾಲರ್‌) ಹಣವನ್ನು ರಿಲಯನ್ಸ್‌ ಜಿಯೋ ಸಂಗ್ರಹಿಸಿತ್ತು. ಇದರಲ್ಲಿ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಮತ್ತು ಟೆಕ್ ಸಂಸ್ಥೆ ಗೂಗಲ್ ಈಕ್ವಿಟಿ ಪಾಲುದಾರರಾಗಿದ್ದರು. 2022ರ ಆರಂಭದಲ್ಲಿ ಆಂಕರ್ ಹೂಡಿಕೆದಾರರನ್ನು ಅಂತಿಮಗೊಳಿಸಲು ಟಾಟಾ ಪ್ಲ್ಯಾನ್‌ 103 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಬೃಹತ್‌ ಕಂಪನಿ ಮುಂದಿನ ವರ್ಷದ ಆರಂಭದಲ್ಲಿ ಆಂಕರ್ ಹೂಡಿಕೆದಾರರನ್ನು ಅಂತಿಮಗೊಳಿಸುವ ಭರವಸೆಯಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದೇ ವೇಳೆ, ಮೈಕ್ರೋಸಾಫ್ಟ್ ಜೊತೆಗಿನ ಚರ್ಚೆಗಳು ವಹಿವಾಟಿಗೆ ಕಾರಣವಾಗದೆಯೂ ಇರಬಹುದು ಎಂದು ಅವರು ತಿಳಿಸಿದ್ದಾರೆ.

“ಹೊಸ ಹೂಡಿಕೆದಾರರಿಗೆ ಪರಿಕಲ್ಪನೆಯ ಪುರಾವೆಯೇ ಸವಾಲಾಗಿದೆ. ಜಿಯೋ ಒಂದು ಉತ್ಪನ್ನವನ್ನು ಹೊಂದಿದ್ದು ಅದು ಚಾಲನೆಯಲ್ಲಿದೆ. ಆದರೆ ಟಾಟಾದ ಪ್ರಕರಣದಲ್ಲಿ ಹಾಗಲ್ಲ. ಎಲ್ಲಾ ವಿಭಿನ್ನ ತುಣುಕುಗಳು ಇನ್ನೂ ಅಂತಿಮ ಹಂತಕ್ಕೆ ಜೋಡಣೆಯಾಗಬೇಕಾಗಿದೆ. ‘ಸೂಪರ್ ಆಪ್‌’ ಎಲ್ಲಿದೆ?” ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ 'ಎಕನಾಮಿಕ್‌ ಟೈಮ್ಸ್‌' ಕಂಪನಿಗಳನ್ನು ಸಂಪರ್ಕಿಸಿದಾಗ ಟಾಟಾ ಸನ್ಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮೈಕ್ರೋಸಾಫ್ಟ್ ಹೂಡಿಕೆಗಾಗಿ ಕಂಪನಿಗಳನ್ನು ಹುಡುಕಾಡುತ್ತಿದ್ದು, ಬೃಹತ್‌ ಮೊತ್ತದಲ್ಲಿ ಹಣ ಹೂಡುತ್ತಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರು ಖರೀದಿಗಳನ್ನು ಒಳಗೊಂಡಂತೆ ಏಳು ಡೀಲ್‌ಗಳನ್ನು ಮೈಕ್ರೋಸಾಫ್ಟ್‌ ಅಂತಿಮ ಮಾಡಿದೆ. ಇದರಲ್ಲಿ ಒರಾವೆಲ್ ಸ್ಟೇಸ್‌ (ಓಯೊ)ನಲ್ಲಿ 5 ಮಿಲಿಯನ್ ಡಾಲರ್‌ ಹೂಡಿಕೆಯೂ ಸೇರಿದೆ. ಜೂನ್ 22 ರಂದು ಮೊದಲ ಬಾರಿಗೆ ಟಾಟಾಗಳು ತಮ್ಮ ಡಿಜಿಟಲ್ ವ್ಯವಹಾರಕ್ಕಾಗಿ 2-2.5 ಶತಕೋಟಿ ಡಾಲರ್‌ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಇದೇ ‘ಇಟಿ’ ವರದಿ ಮಾಡಿತ್ತು. ಟಾಟಾದ ನ್ಯೂ (Neu) ಹೆಸರಿನ ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಇ-ಕಾಮರ್ಸ್‌ ಗೇಟ್‌ವೇ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ದಿನಸಿ ಮತ್ತು ಔಷಧದಿಂದ ಆರಂಭಿಸಿ ರೆಸಾರ್ಟ್‌ನಿಂದ ಜ್ಯುವೆಲ್ಲರಿವರೆಗಿನ ಉತ್ಪನ್ನಗಳು ಇರಲಿವೆ. ಇದು ಅಮೆಜಾನ್‌.ಕಾಂ ಹಾಗೂ ವಾಲ್‌ಮಾರ್ಟ್‌ನ ಸ್ಥಳೀಯ ಇ-ಕಾಮರ್ಸ್‌ತಾಣ ಫ್ಲಿಪ್‌ಕಾರ್ಟ್‌ ಹಾಗೂ ಈಗಷ್ಟೇ ಮೊಳಕೆಯೊಡೆಯುತ್ತಿರುವ ಜಿಯೋಮಾರ್ಟ್‌ಗೆ ಸ್ಪರ್ಧೆ ನೀಡುವ ಉದ್ದೇಶ ಹೊಂದಿದೆ. ಚಂದ್ರಶೇಖರ್‌ ವೈಯಕ್ತಿಕ ಆಸಕ್ತಿ ಚಂದ್ರಶೇಖರನ್ ವೈಯಕ್ತಿಕವಾಗಿ ಹೆಚ್ಚಿನ ಆರಂಭಿಕ ಚರ್ಚೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಅವರು ಅಮೆರಿಕದಲ್ಲಿ ಮೈಕ್ರೋಸಾಫ್ಟ್‌ ಕಾರ್ಯನಿರ್ವಾಹಕರನ್ನು ಭೇಟಿಯಾದ ನಂತರ ಮೈಕ್ರೋಸಾಫ್ಟ್ ಇಂಡಿಯಾ ಮುಖ್ಯಸ್ಥ ಅನಂತ್ ಮಹೇಶ್ವರಿ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. “ಹೂಡಿಕೆದಾರರು ಯಾವಾಗಲೂ ಟಾಟಾ ಗ್ರೂಪ್‌ನಲ್ಲಿ ಹೂಡಿಕೆ ಮಾಡಲು ಮುಕ್ತವಾಗಿರುತ್ತಾರೆ, ಕಾರಣ ಇಲ್ಲೊಂದು ನಂಬಿಕೆ ಇದೆ. ಟಾಟಾ ಡಿಜಿಟಲ್‌ನೊಂದಿಗೆ ಹೂಡಿಕೆಯ ಮಾತುಕತೆಗಳು ದೀರ್ಘಾವಧಿಯ ಯೋಜನೆಗಳ ಬಗ್ಗೆ ಇದ್ದು, ಹೂಡಿಕೆದಾರರು ಔಪಚಾರಿಕವಾಗಿ ಬಿಡುಗಡೆಯಾಗುವ ಆಪ್‌ಗೆ ಗ್ರಾಹಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೋಡಲು ಕಾಯುತ್ತಿದ್ದಾರೆ, ”ಎಂದು ಟಾಟಾ ಗ್ರೂಪ್ ಒಳಗಿನವರು ಮಾಹಿತಿ ನೀಡಿದ್ದಾರೆ. ಚಂದ್ರಶೇಖರನ್ ಅವರು ಈಗಾಗಲೇ ಯಶಸ್ವೀ ಮಾತುಕತೆ ನಡೆಸಿರುವ ಕೆಲವು ಹೂಡಿಕೆ ನಿಧಿಗಳು ಜಿಯೋದೊಂದಿಗೂ ಹೂಡಿಕೆ ಹೊಂದಿವೆ. ಇಂಥಹ ಸಂದರ್ಭದಲ್ಲಿ ಭವಿಷ್ಯದ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು, ಅದೇ ಸಂಸ್ಥೆಗಳ ಬೇರೆ ನಿಧಿಗಳಿಂದ ಹೂಡಿಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಜಿಯೋ ಮತ್ತು ಮೈಕ್ರೋಸಾಫ್ಟ್ 2020ರಲ್ಲಿ ಎಂಟರ್‌ಪ್ರೈಸ್ ಪರಿಹಾರಗಳಿಗಾಗಿ ಪಾಲುದಾರಿಕೆಯನ್ನು ಘೋಷಿಸಿದ್ದವು. ಪ್ರಸಕ್ತ ವರ್ಷ ತನ್ನ ಅಂಗ ಸಂಸ್ಥೆ ಟಾಟಾ ಡಿಜಿಟಲ್‌ನಲ್ಲಿ ಟಾಟಾ ಸನ್ಸ್‌ 5,025 ಕೋಟಿ ರೂ. ಹೂಡಿಕೆ ಮಾಡಿದ್ದು, ಟಾಟಾ ಡಿಜಿಟಲ್ ಈಗಾಗಲೇ ಬಿಗ್‌ಬಾಸ್ಕೆಟ್‌, 1ಎಂಜಿಯನ್ನು ಖರೀದಿ ಮಾಡಿದೆ. ಜತೆಗೆ ಕಲ್ಟ್‌ಫಿಟ್‌ನಲ್ಲಿಯೂ ಹೂಡಿಕೆ ಮಾಡಿದೆ. ಎರಡೂ ಕಂಪನಿಗಳಿಗೆ ಇದುವರೆಗೆ ಟಾಟಾ ಗ್ರೂಪ್‌ 5,100 ಕೋಟಿ ರೂ. ಹೂಡಿಕೆ ಮಾಡಿದೆ. ಬೃಹತ್‌ ಟೆಕ್‌ ಸಂಸ್ಥೆಗಳಿಗೆ ಸುಗ್ಗಿ ಕೊರೊನಾ ಸಮಯದಲ್ಲಿ ಹೆಚ್ಚಿನ ಸಂಸ್ಥೆಗಳು ಡಿಜಿಟಲ್‌ಗೆ ಬದಲಾಗಿದ್ದರಿಂದ ಬೃಹತ್‌ ಟೆಕ್‌ ಸಂಸ್ಥೆಗಳಾದ ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾಬೆಟ್‌ ಐಎನ್‌ಸಿ ಹಾಗೂ ಮೈಕ್ರೋಸಾಫ್ಟ್‌ ದಾಖಲೆಯ ಆದಾಯ ಗಳಿಸಿವೆ. ಈ ವರ್ಷ ಮೈಕ್ರೋಸಾಫ್ಟ್‌ ಷೇರುಗಳು ಶೇ. 54.5 ರಷ್ಟು ಗಳಿಕೆ ದಾಖಲಿಸಿವೆ. ಜತೆಗೆ ಅಕ್ಟೋಬರ್‌ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಗಳಿಕೆ ಶೇ. 22ರಷ್ಟು ಏರಿಕೆ ಕಂಡಿದೆ. ಇದು 2014ರ ಬಳಿಕದ ಬೃಹತ್‌ ಏರಿಕೆಯಾಗಿದೆ. ಪರಿಣಾಮ ಹಲವು ಕಂಪನಿಗಳನ್ನು ಮೈಕ್ರೋಸಾಫ್ಟ್‌ ಖರೀದಿಸುತ್ತಿದೆ. “ಲಿಂಕ್‌ಡ್‌ಇನ್‌ನಿಂದ ನ್ಯೂಯಾನ್ಸ್‌ವರೆಗೆ ಮೈಕ್ರೋಸಾಫ್ಟ್‌ ದೊಡ್ಡ ಹೂಡಿಕೆಗಳಿಗೆ ಹೆಸರುವಾಸಿ" ಎಂದು ಟೆಕ್ನಾಲಜಿ ಕೇಂದ್ರಿತ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಹೇಳಿದ್ದಾರೆ. ಬಿಗ್‌ ಟೆಕ್‌ ಕಂಪನಿಗಳ ಮೇಲೆ ನಿಯಂತ್ರಕರ ಕಣ್ಣು ಬಿದ್ದಿರುವ ಸಂದರ್ಭದಲ್ಲಿ ಕಂಪನಿಗಳ ಪಾಲಿಗೆ ದೊಡ್ಡ ದೊಡ್ಡ ಹೂಡಿಕೆಗೆ ಇದು ಸುಸಂದರ್ಭ ಎಂದೂ ಅವರು ವಿಶ್ಲೇಷಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯೂಯಾನ್ಸ್‌ ಕಮ್ಯೂನಿಕೇಷನ್ಸ್‌ನ್ನು 19.7 ಬಿಲಿಯನ್‌ ಡಾಲರ್‌ಗೆ ಮೈಕ್ರೋಸಾಫ್ಟ್‌ ಖರೀದಿಸಿತ್ತು. 2016ರಲ್ಲಿ 26 ಬಿಲಿಯನ್‌ ಡಾಲರ್‌ಗೆ ಲಿಂಕ್‌ಡ್‌ಇನ್‌ ಖರೀದಿಸಿದ ನಂತರದ ಬೃಹತ್‌ ಡೀಲ್‌ ಇದಾಗಿದೆ. ಇಂಥ ಹಲವು ಬೃಹತ್‌ ಡೀಲ್‌ಗಳನ್ನು ಮೈಕ್ರೋಸಾಫ್ಟ್‌ ಈ ವರ್ಷ ನಡೆಸಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.