ಆಕ್ಸಿಜನ್‌ ಸಿಲಿಂಡರ್‌ ಜತೆಗೆ ಕಚೇರಿಗೆ ಬಂದ ಜಾರ್ಖಂಡ್‌ನ ಬ್ಯಾಂಕ್‌ ಆಫ್‌ ಬರೋಡಾದ ಮ್ಯಾನೇಜರ್‌, ಕಾರಣವೇನು?

ಕೊರೊನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಇದೀಗ ಬ್ಯಾಂಕ್‌ ಆಫ್‌ ಬರೋಡಾದ ಮ್ಯಾನೇಜರೊಬ್ಬರು ಆಕ್ಸಿಜನ್‌ ಸಿಲಿಂಡರ್‌ ಜತೆಗೆ ಕಚೇರಿಗೆ ಬಂದಿರುವ ಘಟನೆ ನಡೆದಿದೆ. ಅವರಿಗೆ ಇತ್ತೀಚೆಗೆ ಕೋವಿಡ್‌ ಪಾಸಿಟಿವ್‌ ಆಗಿತ್ತು, ಆದರೆ ಇದೀಗ ರಜೆ ನೀಡಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಪ್ರತಿಭಟಿಸಿದ್ದಾರೆ.

ಆಕ್ಸಿಜನ್‌ ಸಿಲಿಂಡರ್‌ ಜತೆಗೆ ಕಚೇರಿಗೆ ಬಂದ ಜಾರ್ಖಂಡ್‌ನ ಬ್ಯಾಂಕ್‌ ಆಫ್‌ ಬರೋಡಾದ ಮ್ಯಾನೇಜರ್‌, ಕಾರಣವೇನು?
Linkup
ಹೊಸದಿಲ್ಲಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ತಮಗೆ ಸುಧಾರಿಸಿಕೊಳ್ಳಲು ರಜೆ ನೀಡುತ್ತಿಲ್ಲ ಎಂದು ಆರೋಪಿಸಿ ಬ್ಯಾಂಕ್‌ ಆಫ್‌ ಬರೋಡಾದ ಮ್ಯಾನೇಜರ್‌ ಒಬ್ಬರು ಆಮ್ಲಜನಕ ಪೂರೈಕೆ ಸಲಕರಣೆಗಳ ನೆರವಿನೊಂದಿಗೆ ಕಚೇರಿಗೆ ಹಾಜರಾದ ಘಟನೆ ಜಾರ್ಖಂಡ್‌ನ ಬೊಕಾರೊದಲ್ಲಿ ನಡೆದಿದೆ. ಮ್ಯಾನೇಜರ್‌ ಕುಮಾರ್‌ ಅವರ ಪುತ್ರ ಆಕ್ಸಿಜನ್‌ ಸಿಲಿಂಡರ್‌ ತಳ್ಳಿಕೊಂಡು ಬಂದರೆ, ಪತ್ನಿ ಬ್ಯಾಂಕ್‌ ತನಕ ಕೈ ಹಿಡಿದುಕೊಂಡು ಬಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮ್ಯಾನೇಜರ್‌, ''ನನಗೆ ಕೊರೊನಾ ಸೋಂಕು ತಗುಲಿದ್ದು, ಶ್ವಾಸಕೋಶಗಳಿಗೆ ಹಾನಿಯಾಗಿದೆ. ಹೀಗಾಗಿ ವೈದ್ಯರು ಮೂರು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ನನಗೆ ರಜೆ ನಿರಾಕರಿಸಿದ್ದಾರೆ. ಹೀಗಾಗಿ ಆಕ್ಸಿಜನ್‌ ಸಿಲಿಂಡರ್‌ ನೆರವಿನೊಂದಿಗೆ ಕಚೇರಿಗೆ ಬರುವುದು ಅನಿವಾರ್ಯವಾಯಿತು,'' ಎಂದು ತಿಳಿಸಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ಕುಮಾರ್‌ ಆರೋಪವನ್ನು ನಿರಾಕರಿಸಿದ್ದಾರೆ. ''ರಜೆ ಪಡೆಯಲು ಈ ತಂತ್ರ ಬಳಸಿಕೊಂಡಿದ್ದಾರೆ'' ಎಂದು ಹೇಳಿದ್ದಾರೆ.