11,940 ಕೋಟಿ ನಿವ್ವಳ ಲಾಭ ಕಂಡ ಬಿಪಿಸಿಎಲ್: 12,581 ಕೋಟಿ ರೂ ದಾಖಲೆಯ ಡಿವಿಡೆಂಡ್ ಪಾವತಿಗೆ ಅನುಮೋದನೆ

ಕಳೆದ ವರ್ಷ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 1,361 ಕೋಟಿ ನಿವ್ವಳ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತವು, ಈ ಸಾಲಿನಲ್ಲಿ 11,940 ಕೋಟಿ ರೂ ನಿವ್ವಳ ಲಾಭ ಪ್ರಕಟಿಸಿದೆ.

11,940 ಕೋಟಿ ನಿವ್ವಳ ಲಾಭ ಕಂಡ ಬಿಪಿಸಿಎಲ್: 12,581 ಕೋಟಿ ರೂ ದಾಖಲೆಯ ಡಿವಿಡೆಂಡ್ ಪಾವತಿಗೆ ಅನುಮೋದನೆ
Linkup
ಮುಂಬಯಿ: ನಿಗಮ ನಿಯಮಿತ () ಮಾರ್ಚ್ ತಿಂಗಳಲ್ಲಿ ಅಂತ್ಯಗೊಂಡ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 11,940 ಕೋಟಿ ರೂ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು 1,361 ಕೋಟಿ ರೂ ನಿವ್ವಳ ನಷ್ಟ ಅನುಭವಿಸಿತ್ತು. ಈ ಸಾಲಿನಲ್ಲಿ ಕಂಪೆನಿಯು 1,856 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಲಿದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆಗೂ ಮೀರಿ ಕಂಪೆನಿ ಲಾಭ ಕಂಡಿದೆ. ವರ್ಷದಿಂದ ವರ್ಷದ ಆಧಾರದಲ್ಲಿ ಕಂಪೆನಿಯ ಕಾರ್ಯಾಚರಣೆ ಆದಾಯವು ಶೇ 21.5ರಷ್ಟು ಹೆಚ್ಚಳ ಕಂಡಿದ್ದು, ತ್ರೈಮಾಸಿಕ ಅವಧಿಗೆ 98,755.6 ಕೋಟಿ ತಲುಪಿದೆ. ಇದು ವಿಶ್ಲೇಷಣೆಯ ಅಂದಾಜಿಗಿಂತಲೂ ಅಧಿಕವಾಗಿದೆ. ಇದೇ ಸಂದರ್ಭದಲ್ಲಿ ಕಂಪೆನಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಷೇರಿಗೆ 58 ರೂಪಾಯಿಯ ಅಂತಿಮ ಡಿವಿಡೆಂಡ್‌ಗೆ ಕಂಪೆನಿಯ ಮಂಡಳಿ ಅನುಮೋದನೆ ನೀಡಿದೆ. ಇದು ಪ್ರತಿ ಈಕ್ವಿಟಿ ಷೇರಿಗೆ 35 ರೂಪಾಯಿಯ ಒಂದು ಸಮಯದ ವಿಶೇಷ ಅನ್ನು ಒಳಗೊಂಡಿದೆ. ವಿಶೇಷ ಡಿವಿಡೆಂಟ್, ಬಿಪಿಸಿಎಲ್ ಟ್ರಸ್ಟ್‌ಗೆ ಸೇರಿದ ಷೇರುಗಳ ಮಾರಾಟದಿಂದ ಕಂಪೆನಿಯು ಸಂಗ್ರಹಿಸಿದ ಆದಾಯವಾಗಿದೆ. ಈ ಡಿವಿಡೆಂಡ್ 7592.38 ಕೋಟಿ ರೂ ವಿಶೇಷ ಡಿವಿಡೆಂಡ್ ಒಳಗೊಂಡಂತೆ 12,581.66 ಕೋಟಿ ಡಿವಿಡೆಂಡ್ ಪಾಲು ಹೊಂದಿದೆ. ಕಂಪೆನಿಯ ಖಾಸಗೀಕರಣಕ್ಕೂ ಮುನ್ನ ಇದರಲ್ಲಿ ಬಹುಪಾಲು ಸರ್ಕಾರಕ್ಕೆ ಸಿಗಲಿದೆ. ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್‌ನ ಅಂತಿಮ ಆದಾಯದ ಮೊತ್ತವು 6,992.95 ಕೋಟಿ ರೂ ಏಕ ಕಾಲದ ಸಂಪಾದನೆಯೊಂದಿಗೆ ವೃದ್ಧಿಯಾಗಿದೆ. ಈ ತ್ರೈಮಾಸಿಕದಲ್ಲಿ ಕಂಪೆನಿಯು 9,422 ಕೋಟಿ ರೂಪಾಯಿಯನ್ನು ತನ್ನ ಅಧೀನ ಸಂಸ್ಥೆಯಾದ ನುಮಾಲಿಗಡ ರಿಫೈನರಿಯ ಷೇರುಗಳ ಮಾರಾಟದಿಂದ ಗಳಿಸಿದೆ. ವರ್ಷದ ಹಿಂದಿನ ತ್ರೈಮಾಸಿಕದಲ್ಲಿ ಬಿಪಿಸಿಎಲ್, 2020ರ ಮಾರ್ಚ್ ತಿಂಗಳಲ್ಲಿ ಜಾಗತಿಕ ಕಚ್ಚಾ ತೈಲದ ದರ ಕುಸಿತದಿಂದ 1080.8 ಕೋಟಿ ರೂ ಏಕ ಕಾಲದ ನಷ್ಟ ಅನುಭವಿಸಿತ್ತು.