ಪತ್ನಿಗಾಗಿ ತಾಜ್‌ಮಹಲ್‌ ಕಟ್ಟಿದ ಪತಿರಾಯ : ಮಧ್ಯಪ್ರದೇಶದಲ್ಲೊಂದು ವಿಭಿನ್ನ ಲವ್‌ಸ್ಟೋರಿ

ತಾಜ್‌ಮಹಲ್‌ ವಿನ್ಯಾಸವನ್ನೇ ಹೋಲುವ ಸುಂದರ ಸೌಧ ನಿರ್ಮಿಸಿ ಪತ್ನಿಗೆ ಪ್ರೇಮದ ಕಾಣಿಕೆ ನೀಡಿ ಮಧ್ಯಪ್ರದೇಶದ ಶಿಕ್ಷಣ ತಜ್ಞನೊಬ್ಬ ಗಮನ ಸೆಳೆದಿದ್ದಾರೆ. ಬುರ್ಹಾನ್‌ಪುರ ನಿವಾಸಿ ಆನಂದ್‌ ಚೌಕ್ಷೆ ಆ ಪ್ರೇಮ ಸೌಧ ನಿರ್ಮಿಸಿದ ಪತಿರಾಯ. ಈ ತಾಜ್‌ಮಹಲ್ ನಿರ್ಮಾಣಕ್ಕೆ ಕಾರಣವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಪತ್ನಿಗಾಗಿ ತಾಜ್‌ಮಹಲ್‌ ಕಟ್ಟಿದ ಪತಿರಾಯ : ಮಧ್ಯಪ್ರದೇಶದಲ್ಲೊಂದು ವಿಭಿನ್ನ ಲವ್‌ಸ್ಟೋರಿ
Linkup
ಭೋಪಾಲ್‌: ಮಧ್ಯಪ್ರದೇಶದ ಶಿಕ್ಷಣ ತಜ್ಞನೊಬ್ಬ ಆಗ್ರಾದ ವಿನ್ಯಾಸವನ್ನೇ ಹೋಲುವ ಸುಂದರ ಸೌಧ ನಿರ್ಮಿಸಿ ಪತ್ನಿಗೆ ಪ್ರೇಮದ ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ. ಬುರ್ಹಾನ್‌ಪುರ ನಿವಾಸಿ ಆನಂದ್‌ ಚೌಕ್ಷೆ ಆ ಪ್ರೇಮ ಸೌಧ ನಿರ್ಮಿಸಿದ ಪತಿರಾಯ. ಹಿಂದೊಮ್ಮೆ ಪತ್ನಿ ಮಂಜುಶಾ ಚೌಕ್ಷೆ ಜತೆಗೂಡಿ ಆಗ್ರಾಕ್ಕೆ ಹೋಗಿ ಪ್ರೇಮ ಸೌಧ ನೋಡಿದ್ದ ಆನಂದ್‌ ಅದರ ವಿನ್ಯಾಸಕ್ಕೆ ಮಾರು ಹೋಗಿದ್ದರು. ಪತ್ನಿ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಅವರು, ಸುಂದರವಾದ ಒಂದು ಮನೆ ನಿರ್ಮಿಸಿ ಅರ್ಪಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಮೊದಲು 80 ಅಡಿ ಎತ್ತರದ ಭವ್ಯ ಬಂಗಲೆ ನಿರ್ಮಿಸಬೇಕು ಎಂಬ ಯೋಚನೆಯಲ್ಲಿದ್ದರು. ಆದರೆ, ಅದಕ್ಕೆ ನಗರ ಪಾಲಿಕೆ ಅನುಮತಿ ನಿರಾಕರಿಸಿದ್ದರಿಂದ ಚಿಂತಿತರಾಗಿದ್ದರು. ಅದೇ ಸಂದರ್ಭ ಆಗ್ರಾಕ್ಕೆ ಭೇಟಿ ನೀಡಿದಾಗ ತಾಜ್‌ಮಹಲ್‌ ಕಂಡು, ಅಂತಹದ್ದೇ ಪ್ರತಿರೂಪದ ಪ್ರೇಮ ಸೌಧ ಕಟ್ಟಿ ಹೆಂಡತಿಗೆ ಅರ್ಪಿಸಬೇಕೆಂದು ನಿರ್ಧರಿಸಿ ಎಂಜಿನಿಯರ್‌ಗಳನ್ನು ಸಂಪರ್ಕಿಸಿದ್ದರು. ಮೂರೇ ವರ್ಷಗಳಲ್ಲಿ ತಾಜ್‌ ಮಹಲ್‌ 3ಡಿ ಇಮೇಜ್‌ ಆಧರಿತ ಪ್ರತಿರೂಪ ನಿರ್ಮಿಸಿದರು. 90 ಚ.ಮೀಟರ್‌ ವಿಸ್ತಾರ ಹಾಗೂ 60 ಚ.ಮೀ ಎತ್ತರ ಉಳ್ಳ ಪ್ರೇಮ ಸೌಧ ಈಗ ಜನರ ಗಮನ ಸೆಳೆಯುತ್ತಿದೆ. ಈ ತಾಜ್‌ಮಹಲ್‌ ಪ್ರತಿರೂಪ ಕಟ್ಟಡ ಎರಡು ಮಹಡಿ ಹೊಂದಿದ್ದು ತಲಾ ಎರಡು ಬೆಡ್‌ರೂಮ್‌ಗಳನ್ನು ಹೊಂದಿದೆ. ಅಡುಗೆ ಮನೆ, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಗಳನ್ನು ಒಳಗೊಂಡಿದೆ. ''ಬುರ್ಹಾನ್‌ಪುರಕ್ಕೆ ಬರುವ ಪ್ರವಾಸಿಗರು ನನ್ನ ಈ ಪ್ರೇಮ ಸೌಧಕ್ಕೆ ಭೇಟಿ ನೀಡದೇ ಹೋಗಲಾರರು,'' ಎಂದು ಆನಂದ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೆಂಡತಿ ಬರ್ತ್‌ ಡೇ ತಪ್ಪಿಸಿದರೆ ಇಲ್ಲಿ ಜೈಲೇ ಗತಿ! ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವುದು ರೂಢಿಯಲ್ಲಿಸರಿಯಾದ ಸಲಹೆ ಇರಬಹುದು. ಆದರೆ, ಹೆಂಡತಿ ಜಗಳಗಂಟಿಯಾಗಿದ್ದರೂ ಅದನ್ನು ಲೆಕ್ಕಿಸದೆ ಆಕೆಯ ಹುಟ್ಟುಹಬ್ಬವನ್ನು ಸಂಭ್ರಮಿಸಬೇಕು ಎಂದು ಗಂಡನಿಗೆ ಕಟ್ಟಾಜ್ಞೆ ವಿಧಿಸುವುದು ಎಷ್ಟು ಸರಿ? ಅದು ಸರಿಯೋ ತಪ್ಪೊ, ಆದರೆ ಪೆಸಿಫಿಕ್‌ ಮಹಾಸಾಗರದ ಪಾಲಿನೇಷನ್‌ ಪ್ರದೇಶದ ಸಮೋವಾ ದ್ವೀಪದಲ್ಲಿ ಮಾತ್ರ ಅಂತಹದ್ದೊಂದು ಕಡ್ಡಾಯ ನಿಯಮ ಇದೆ. ಪ್ರತಿ ವರ್ಷ ಹೆಂಡತಿಯ ಹುಟ್ಟುಹಬ್ಬವನ್ನು ಗಂಡನಾದವನು ಆಚರಿಸಲೇಬೇಕು ಎನ್ನುವು ಕಾನೂನು ಇದೆ. ಒಂದು ವೇಳೆ ಉದಾಸೀನ ತೋರಿದರೆ ಜೈಲು ಶಿಕ್ಷೆ ಗ್ಯಾರಂಟಿ! ಈ ರಾಷ್ಟ್ರದಲ್ಲಿ ಗಂಡನ ಬರ್ತ್‌ ಡೇ ಇದ್ದರೆ ಹೆಂಡತಿಯಾದವಳು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕೈಯಲ್ಲಿ ಕಾಸಿದ್ದರೆ ಬಡಪಾಯಿ ಗಂಡನ ಹುಟ್ಟುಹಬ್ಬಕ್ಕೆ ಒಬ್ಬಟ್ಟು ತಟ್ಟಿ ಸಂಭ್ರ-ಮಿಸಬಹುದು. ಇಲ್ಲ ಅಂದರೆ, ಒಣರೊಟ್ಟಿ ತಿಂದು ಮಲಗಬಹುದು. ಆದರೆ ಹೆಂಡತಿಯ ಬರ್ತ್‌ ಡೇ ಇದ್ದರೆ ಮಾತ್ರ ಪತಿರಾಯ ಮೈಮರೆಯುವಂತಿಲ್ಲ. ಸಂಭ್ರಮಾಚರಣೆ ಕಡ್ಡಾಯ. ಕೈಯಲ್ಲಿ ಕಾಸಿಲ್ಲ, ಆಚರಣೆಗೆ ಸಮಯ ಇಲ್ಲ ಎಂದು ಸಬೂಬು ಹೇಳುವಂತಿಲ್ಲ. ಹೆಂಡತಿ ಹೇಳಿದ ರೀತಿ ಸಂಭ್ರಮದಿಂದ ಆಕೆಯ ಹುಟ್ಟುಹಬ್ಬ ಆಚರಿಸಲೇ ಬೇಕು. ''ಅಯ್ಯೋ ಮರೆತೆ ಮಾರಾಯ್ತಿ,'' ಎಂದು ನೆಪ ಹೇಳುವಂತಿಲ್ಲ. ''ದುಡ್ಡಿಲ್ಲ ಸುಮ್ಕಿರು,'' ಎಂದು ಗದರಿಸಿ ಸುಮ್ಮನಿರಿಸುವಂತೆಯೂ ಇಲ್ಲ. ಹಾಗೇನಾದರೂ ಉದಾಸೀನ ಮಾಡಿ ಹೆಂಡತಿಯ ಕೆಂಗಣ್ಣಿಗೆ ಗುರಿಯಾದರೆ ಪತಿರಾಯನಿಗೆ ಜೈಲೇ ಗತಿ. ಆದರೂ ಸಮೋವೊ ಕಾನೂನಿನಲ್ಲಿ ಸಣ್ಣದೊಂದು ರಿಯಾಯಿತಿಯೂ ಇದೆ. ಮೊದಲ ಬಾರಿ ಅಂತದ್ದೊಂದು ತಪ್ಪೆಸಗುವ ಪತಿಗೆ ಪೊಲೀಸರು ಬುದ್ಧಿ ಹೇಳಿ ಕಳಿಸಲು ಅವಕಾಶವಿದೆ. ''ಇನ್ನೊಮ್ಮೆ ಆ ರೀತಿ ಮಾಡಬೇಡ ಮಾರಾಯ,'' ಎಂದು ಪೊಲೀ-ಸರು ಹೇಳಿ ಕಳಿಸಿದರೆಂದರೆ ಆತನ 'ಲೈಫ್‌ ಲೈನ್‌' ಮುಗಿಯಿತು ಎಂದು ಅರ್ಥ. ಮಾರನೇ ವರ್ಷ ಅದೇ ತಪ್ಪು ಮಾಡಿದರೆ ಪೊಲೀಸರಿಂದಲೂ ಆತನನ್ನು ರಕ್ಷಿಸಲು ಸಾಧ್ಯವಿಲ್ಲ. ಜೈಲು ಕಾಯಂ. ಜಗತ್ತಿನ ವಿವಿಧ ದೇಶಗಳಲ್ಲಿಇಂತಹ ತರಹೇವಾರಿ ವಿಚಿತ್ರ ಕಾನೂನುಗಳು ಇವೆ.