ಅನ್‌ಲಾಕ್‌ ಬೆನ್ನಲ್ಲೇ ಜನರ ಬೇಕಾಬಿಟ್ಟಿ ಓಡಾಟ: ಕಠಿಣ ನಿರ್ಬಂಧಗಳನ್ನು ಹೇರಲು ಕೇಂದ್ರ ಸರಕಾರ ಖಡಕ್‌ ಸೂಚನೆ

ಕೋವಿಡ್‌ 2ನೇ ಅಲೆಯ ಭೀಕರತೆಯ ಅರಿವು ನಮಗೆಲ್ಲರಿಗೂ ಇದೆ. ಮತ್ತೊಂದು ಅಲೆಯ ಅಪಾಯದಿಂದ ಬಚಾವಾಗುವ ಆಯ್ಕೆ ನಮ್ಮ ಕೈಯಲ್ಲೇ ಇದೆ. ಜತೆಗೆ ಲಾಕ್‌ಡೌನ್‌ನಂತಹ ಅನಿವಾರ್ಯ ನಿರ್ಬಂಧಗಳ ಬದಲಿಗೆ ಸ್ವಯಂ ನಿರ್ಬಂಧ, ಲಸಿಕೆಯ ಅಸ್ತ್ರಗಳನ್ನು ಬಳಸುವ ಅವಕಾಶವೂ ನಮ್ಮ ಪಾಲಿಗಿದೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಜನಜೀವನ ಸಹಜವಾಗಿರಲಿ, ಆದರೆ ಸುರಕ್ಷತೆಗೂ ಆದ್ಯತೆ ಇರಲಿ. ನಮ್ಮ ಜವಾಬ್ದಾರಿಯುತ ವರ್ತನೆಯು ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ರಕ್ಷಿಸುವುದು ಮಾತ್ರವಲ್ಲ, ಇತರರಿಗೂ ಶ್ರೀರಕ್ಷೆಯಾಗುತ್ತದೆ ಎಂಬುವುದು ವಿಕ ಆಶಯ.

ಅನ್‌ಲಾಕ್‌ ಬೆನ್ನಲ್ಲೇ ಜನರ ಬೇಕಾಬಿಟ್ಟಿ ಓಡಾಟ: ಕಠಿಣ ನಿರ್ಬಂಧಗಳನ್ನು ಹೇರಲು ಕೇಂದ್ರ ಸರಕಾರ ಖಡಕ್‌ ಸೂಚನೆ
Linkup
ಹೊಸದಿಲ್ಲಿ: ದೇಶಾದ್ಯಂತ ಎಲ್ಲೆಡೆ ಸೋಂಕು ಇಳಿಮುಖ, ಅನ್‌ಲಾಕ್‌ ಬೆನ್ನಲ್ಲೇ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿರುವ ಜನರ ವರ್ತನೆ ಬಗ್ಗೆ ಕೇಂದ್ರ ಸರಕಾರ ತೀವ್ರ ಅಸಮಾಧಾನ ಹಾಗೂ ಕಳವಳ ವ್ಯಕ್ತಪಡಿಸಿದೆ. ಕೂಡಲೇ ಜನಜಂಗುಳಿಯನ್ನು ನಿಯಂತ್ರಿಸುವಂತೆ, ಜನರು ಬಗ್ಗದಿದ್ದರೆ, ಮತ್ತೆ ಕಠಿಣ ನಿರ್ಬಂಧಗಳನ್ನು ಹೇರುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಖಡಕ್‌ ಸೂಚನೆ ನೀಡಿದೆ. ಈ ಕುರಿತು ಎಲ್ಲಾರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾಪತ್ರ ಬರೆದಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಮುಖ್ಯವಾಗಿ ಗಿರಿಧಾಮಗಳು, ಪ್ರವಾಸಿ ಕೇಂದ್ರಗಳು, ಮಾರುಕಟ್ಟೆ ಪ್ರದೇಶಗಳು, ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚಿದ ಜನಜಂಗುಳಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಮಾಸ್ಕ್‌ ಮತ್ತು ದೈಹಿಕ ಸೇರಿದಂತೆ ಎಲ್ಲಾ ಕೋವಿಡ್‌ ನಿಯಮಗಳನ್ನು ಸಾರಾಸಗಟಾಗಿ ಗಾಳಿಗೆ ತೂರಲಾಗುತ್ತಿದೆ. ಎರಡನೇ ಅಲೆ ಇನ್ನೂ ಮುಗಿದಿಲ್ಲ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ಪ್ರತಿಯೊಬ್ಬರೂ ಕೋವಿಡ್‌-19 ಮಾರ್ಗಸೂಚಿಯನ್ನು ಅನುಸರಿಸುವಂತೆ ಸರಕಾರಗಳು ನೋಡಿಕೊಳ್ಳಬೆಕು, ಅಗತ್ಯವಾದರೆ ಮತ್ತೆ ನಿರ್ಬಂಧ ಜಾರಿಗೊಳಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ. ವಿಕ ಆಶಯ: ಜೀವ, ಜೀವನ ಎರಡಕ್ಕೂ ಆದ್ಯತೆ ಕೋವಿಡ್‌ 2ನೇ ಅಲೆಯ ಭೀಕರತೆಯ ಅರಿವು ನಮಗೆಲ್ಲರಿಗೂ ಇದೆ. ಮತ್ತೊಂದು ಅಲೆಯ ಅಪಾಯದಿಂದ ಬಚಾವಾಗುವ ಆಯ್ಕೆ ನಮ್ಮ ಕೈಯಲ್ಲೇ ಇದೆ. ಜತೆಗೆ ಲಾಕ್‌ಡೌನ್‌ನಂತಹ ಅನಿವಾರ್ಯ ನಿರ್ಬಂಧಗಳ ಬದಲಿಗೆ ಸ್ವಯಂ ನಿರ್ಬಂಧ, ಲಸಿಕೆಯ ಅಸ್ತ್ರಗಳನ್ನು ಬಳಸುವ ಅವಕಾಶವೂ ನಮ್ಮ ಪಾಲಿಗಿದೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಜನಜೀವನ ಸಹಜವಾಗಿರಲಿ, ಆದರೆ ಸುರಕ್ಷತೆಗೂ ಆದ್ಯತೆ ಇರಲಿ. ನಮ್ಮ ಜವಾಬ್ದಾರಿಯುತ ವರ್ತನೆಯು ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ರಕ್ಷಿಸುವುದು ಮಾತ್ರವಲ್ಲ, ಇತರರಿಗೂ ಶ್ರೀರಕ್ಷೆಯಾಗುತ್ತದೆ. ಆರ್‌-ಫ್ಯಾಕ್ಟರ್‌ ಹೆಚ್ಚಳ!ಕೆಲವು ರಾಜ್ಯಗಳಲ್ಲಿ'ಆರ್‌-ಫ್ಯಾಕ್ಟರ್‌' (ಕೋವಿಡ್‌ ಸೋಂಕು ಹರಡುವ ವೇಗವನ್ನು ಸೂಚಿಸುವ ಮಾನದಂಡ) ಹೆಚ್ಚಳದ ಭಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ. ''ಆರ್‌-ಫ್ಯಾಕ್ಟರ್‌ 1.0 ಇದ್ದರೆ ಅಥವಾ ಒಂದಕ್ಕಿಂತ ಕಡಿಮೆ ಇದ್ದರೆ ಒಬ್ಬ ವ್ಯಕ್ತಿಯಿಂದ ಒಬ್ಬರಿಗೆ ಮಾತ್ರ ಸೋಂಕು ಹರಡುತ್ತಿರುವುದನ್ನು ಸೂಚಿಸುತ್ತದೆ. ಆರ್‌-ಫ್ಯಾಕ್ಟರ್‌ 1.0ಗಿಂತ ಹೆಚ್ಚಾದಷ್ಟೂ ಸೋಂಕಿನ ವೇಗ ಹೆಚ್ಚುತ್ತಿದೆ ಎಂದರ್ಥ. ಇದು ಯಾವ ಕಾರಣಕ್ಕೂ ಏರಿಕೆಯಾಗದಂತೆ ನೋಡಿಕೊಳ್ಳಬೆಕು,'' ಎಂದು ಎಚ್ಚರಿಸಿದ್ದಾರೆ. ಮತ್ತೆ ನಿರ್ಬಂಧ ಹೇರಿ ಮಾರುಟಕ್ಟೆಗಳು, ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳು, ಮಾಲ್‌ಗಳು, ರೈಲು ಮತ್ತು ಬಸ್‌ ನಿಲ್ದಾಣಗಳು, ಪಾರ್ಕ್ ಸೇರಿದಂತೆ ಜನಸಂದಣಿ ಇರುವಂತಹ ಎಲ್ಲಾಕಡೆ ಕೋವಿಡ್‌ ನಿಯಮಗಳ ಕಠಿಣ ಅನುಷ್ಠಾನವಾಗಬೇಕು. ಒಂದು ವೇಳೆ ನಿಯಮಗಳ ಪಾಲನೆಯಾಗುತ್ತಿಲ್ಲವೆಂದು ಕಂಡು ಬಂದರೆ, ಕೂಡಲೇ ನಿರ್ಬಂಧ ಜಾರಿಗೊಳಿಸಿ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ರಾಜ್ಯಗಳಿಗೆ ಸೂಚಿಲಾಗಿದೆ. ಜಿಲ್ಲಾಡಳಿತಗಳಿಗೂ ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ನೀಡುವಂತೆ, ಕೋವಿಡ್‌ ನಿಯಮಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಖಾಸಗಿ ಲಸಿಕೆಯೂ ನಿಧಾನ!ದೇಶಾದ್ಯಂತ ಖಾಸಗಿ ಲಸಿಕಾ ಕೇಂದ್ರಗಳಲ್ಲಿವ್ಯಾಕ್ಸಿನ್‌ ನೀಡಿಕೆ ನಿಧಾನವಾಗಿರುವ ಬಗ್ಗೆಯೂ ಕೇಂದ್ರ ಆತಂಕ ವ್ಯಕ್ತಪಡಿಸಿದೆ. ಇದರ ವೇಗ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ''ಖಾಸಗಿ ಲಸಿಕಾ ಕೇಂದ್ರಗಳು ಲಸಿಕೆ ತಯಾರಿಕೆ ಸಂಸ್ಥೆಗಳಿಗೆ ಅಗತ್ಯ ಪ್ರಮಾಣದ ವ್ಯಾಕ್ಸಿನ್‌ಗಾಗಿ ಇಂಡೆಂಟ್‌ ನೀಡುವಂತೆ ಮತ್ತು ಲಸಿಕೆ ಪೂರೈಕೆ ಪ್ರಕ್ರಿಯೆ ಸುಗಮವಾಗುವಂತೆ ಕ್ರಮ ಕೈಗೊಳ್ಳಬೇಕು. ನಿತ್ಯ ಈ ಬಗ್ಗೆ ನಿಗಾ ವಹಿಸಬೇಕೆಂದು ನಿರ್ದೇಶಿಸಲಾಗಿದೆ.