ಸರ್ವರಿಗೂ ಶುಭವ ತರಲಿ ಶ್ರೀಕೃಷ್ಣ ಜನ್ಮಾಷ್ಟಮಿ:ಇಲ್ಲಿವೆ ಹಬ್ಬದ ಶುಭ ಸಂದೇಶಗಳು :

ಸರ್ವರಿಗೂ ಶುಭವ ತರಲಿ ಶ್ರೀಕೃಷ್ಣ ಜನ್ಮಾಷ್ಟಮಿ:ಇಲ್ಲಿವೆ ಹಬ್ಬದ ಶುಭ ಸಂದೇಶಗಳು :
Linkup

 ಖುಷಿಯ ಶ್ರೀಕೃಷ್ಣ ಜನ್ಮಾಷ್ಟಮಿ ಎಲ್ಲರಿಗೂ ಶುಭವನ್ನೇ ತರಲಿ. ಸಡಗರ ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಇಷ್ಟಪಾತ್ರರಿಗೆ ಕಳುಹಿಸಿ ಕೊಡುವಂತಹ ಕೆಲ
ಶ್ರೀಕೃಷ್ಣ ಜನ್ಮಾಷ್ಟಮಿ. ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದು. ಹಿಂದೂ ಧರ್ಮೀಯರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಬಾಲಕೃಷ್ಣನ ಜನ್ಮದಿನವನ್ನು ಆಚರಿಸಿ ಖುಷಿಪಡುತ್ತಾರೆ. ಈ ಹಬ್ಬವನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ.

ಕೃಷ್ಣ ಭಕ್ತರಿಗಂತು ಜನ್ಮಾಷ್ಟಮಿ ಅತ್ಯಂತ ಮಹತ್ವದ ದಿನ. ಜಗತ್ತನ್ನೇ ಹರಸುವ ನಂದಗೋಪಾಲನ ಜನ್ಮದಿನದ ಈ ಹಬ್ಬವನ್ನು ವ್ರತಾಚರಣೆ, ಉಪವಾಸ, ಪೂಜೆ ಅರ್ಚನೆ ಮೂಲಕ ಎಲ್ಲರೂ ಆಚರಿಸುತ್ತಾರೆ. ಈ ಮೂಲಕ ಆನಂದ ಸ್ವರೂಪನನ್ನು ತಮ್ಮ ಮನೆಗೆ ಎಲ್ಲರೂ ಬರ ಮಾಡಿಕೊಳ್ಳುತ್ತಾರೆ. ಜಗದ ಉದ್ಧಾರಕ್ಕಾಗಿ ಅವತಾರವೆತ್ತಿದ್ದ ಭಗವಂತ ತಮ್ಮ ಅದ್ಭುತ ಸಂದೇಶದ ಮೂಲಕವೇ ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬವನ್ನು ಆಗಸ್ಟ್ 30 ಸೋಮವಾರದಂದು ಎಲ್ಲೆಡೆ ಸಡಗರದಿಂದ ಆಚರಿಸಲಾಗುತ್ತಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದೇಶಗಳು :

* ಭಗವಾನ್ ಶ್ರೀಕೃಷ್ಣನು ಪ್ರತಿಯೊಬ್ಬರ ಮೇಲೆ ಅತ್ಯಂತ ಹರ್ಷಚಿತ್ತದಿಂದ ಆಶೀರ್ವಾದದ ಮಳೆಗರೆಯಲಿ ಮತ್ತು ಎಲ್ಲರ ಬದುಕಿನಲ್ಲೂ ಆನಂದದ ಹೊನಲು ಹರಿಸಲಿ. ಎಂತಹದ್ದೇ ಕಷ್ಟ, ಸವಾಲುಗಳನ್ನು ಎದುರಿಸಿ ಗೆಲ್ಲುವ ಧೈರ್ಯ ತುಂಬಲಿ. ಸರ್ವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

* ಮಹಾಭಾರತದ ಯುದ್ಧದಲ್ಲಿ ಅರ್ಜುನನಿಗೆ ದಾರಿ ತೋರಿಸಿದಂತೆ ನಿಮ್ಮ ಜೀವನದಲ್ಲೂ ಭಗವಾನ್ ಶ್ರೀಕೃಷ್ಣ ದಾರಿ ತೋರಲಿ, ನಿಮ್ಮ ಬದುಕನ್ನು ಸುಖಮಯವನ್ನಾಗಿಸಲಿ. ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

* ಕೃಷ್ಣ ಜನ್ಮಾಷ್ಟಮಿಯ ಈ ಶುಭ ಸಂದರ್ಭದಲ್ಲಿ ನಿಮ್ಮ ಬದುಕಿನ ಎಲ್ಲಾ ಕಷ್ಟಗಳು ಕರಗಲಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂಬ ತುಂಬು ಹೃದಯದ ಹಾರೈಕೆ ನನ್ನದು. ನಿಮಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

* ನಿಮ್ಮ ಬದುಕು ಸುಖಮಯವಾಗಿರಲಿ. ಭಗವಂತನ ಕೃಪಾಶೀರ್ವಾದದಿಂದ ಉತ್ತಮ ಆರೋಗ್ಯ, ನೆಮ್ಮದಿ, ಖುಷಿ ನಿಮ್ಮದಾಗಲಿ. ನಿಮ್ಮ ಜೀವನ ಉತ್ತರೋತ್ತರ ಶ್ರೇಯಸ್ಸನ್ನು ಕಾಣಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

* ಕರುಣಾನಿಧಿ ಶ್ರೀಕೃಷ್ಣನು ನಿಮ್ಮ ಮನೆಗೆ ಬಂದು ನಿಮ್ಮನ್ನು ಹರಸಲಿ. ನಿಮ್ಮ ಎಲ್ಲಾ ಚಿಂತೆ, ದುಃಖಗಳನ್ನು ದೂರ ಮಾಡಲಿ. ಸುಖ, ಶಾಂತಿ, ನೆಮ್ಮದಿ ನಿಮ್ಮ ಮನೆ ಮನಗಳಲ್ಲಿ ತುಂಬಿರಲಿ. ನಿಮಗೆ ಜನ್ಮಾಷ್ಟಮಿಯ ಶುಭಾಶಯಗಳು


* ಶ್ರೀಕೃಷ್ಣನ ಕೊಳಲಿನ ನಾದವು ನಿಮ್ಮ ಜೀವನದಲ್ಲಿ ಮಧುರ ಪ್ರೀತಿಯನ್ನು ತುಂಬಲಿ. ಶಾಶ್ವತ ಪ್ರೀತಿ, ಖುಷಿ ನಿಮ್ಮದಾಗಲಿ. ನಿಮಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

* ಶ್ರೀಕೃಷ್ಣ ಜನ್ಮಾಷ್ಟಮಿ ಖುಷಿ, ಸಡಗರದ ಹಬ್ಬ. ಶ್ರೀಕೃಷ್ಣ ತನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದಂತೆಯೇ ನೀವು ಕೂಡಾ ನಿಮ್ಮ ಬದುಕಿನಲ್ಲಿ ಬರೀ ಖುಷಿಯನ್ನಷ್ಟೇ ಪಡೆಯಿರಿ. ನಿಮ್ಮ ಬದುಕಿನ ಪ್ರತಿಕ್ಷಣವೂ ಆನಂದದಿಂದ ಕೂಡಿರಲಿ. ನಿಮಗೆ ಜನ್ಮಾಷ್ಟಮಿಯ ಶುಭಾಶಯಗಳು

* ಬಾಲಕೃಷ್ಣನು ನಿಮ್ಮ ಮನೆಗೆ ಬರಲಿ. ಶ್ರೀಕೃಷ್ಣನ ಹೆಜ್ಜೆ ನಿಮ್ಮ ಮನೆ ಮನಗಳಲ್ಲಿ ಖುಷಿಯ ದೀಪ ಹಚ್ಚಲಿ. ಜಗದೋದ್ಧಾರಕನ ಆಶೀರ್ವಾದದ ಪ್ರಭೆಯಲ್ಲಿ ನಿಮ್ಮ ಬದುಕು ಬೆಳಗಲಿ. ಸರ್ವರಿಗೂ ಶುಭವ ತರಲಿ ಶ್ರೀಕೃಷ್ಣ ಜನ್ಮಾಷ್ಟಮಿ

* ಹರೇ ಕೃಷ್ಣ, ಹರೇ ಕೃಷ್ಣ ... ಕೃಷ್ಣ ಕೃಷ್ಣ, ಹರೇ ಹರೇ . ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ನಿಮ್ಮ ಸಕಲ ಇಷ್ಟಾರ್ಥಗಳೂ ಈಡೇರಲಿ. ಭಗವಂತನ ಕೃಪಾಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.

* ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಾರಿದ ಆದರ್ಶ ಸಂದೇಶಗಳನ್ನು ಪಾಲಿಸೋಣ. ಸದಾ ಸತ್ಯ, ಧರ್ಮದ ಹಾದಿಯಲ್ಲಿ ಸಾಗೋಣ. ಸರ್ವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು