ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಡಗಿನಲ್ಲಿತ್ತು 3 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತು..!

ಕೊಚ್ಚಿಯಲ್ಲಿ ಹಡಗಿನ ಸಿಬ್ಬಂದಿಯ ತೀವ್ರ ವಿಚಾರಣೆ ನಡೆಯುತ್ತಿದೆ. ಹಡಗಿನಲ್ಲಿದ್ದ 300 ಕೆಜಿ ಮಾದಕ ದ್ರವ್ಯದ ಒಟ್ಟು ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3 ಸಾವಿರ ಕೋಟಿ ರೂ. ಎಂದು ತಿಳಿದುಬಂದಿದೆ.

ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಡಗಿನಲ್ಲಿತ್ತು 3 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತು..!
Linkup
ಕೊಚ್ಚಿ (ಕೇರಳ): ಇಡೀ ದೇಶ ಕೊರೊನಾ ವೈರಸ್ ಭೀತಿಯಲ್ಲಿ ಇರುವಾಗ, ಅರಬ್ಬಿ ಸಮುದ್ರದಲ್ಲಿ ದೊಡ್ಡದೊಂದು ಮಾದಕ ದ್ರವ್ಯ ಜಾಲ ಸೇನೆಯ ಬಲೆಗೆ ಬಿದ್ದಿದೆ. ಬರೋಬ್ಬರಿ 3 ಸಾವಿರ ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ನೌಕಾ ಪಡೆ ಕಣ್ಣಿಗೆ ಬಿದ್ದಿದೆ..! ನೌಕಾ ಪಡೆಯ ಐಎನ್‌ಎಸ್‌ ಸುವರ್ಣ ನೌಕೆ ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಮೀನುಗಾರಿಕಾ ಹಡಗೊಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿರೋದು ಗಮನಕ್ಕೆ ಬಂತು. ಕೂಡಲೇ ಕಾರ್ಯಪ್ರವೃತ್ತರಾದ ಐಎನ್‌ಎಸ್‌ ಸುವರ್ಣ ನೌಕೆಯ ಯೋಧರು, ಹಗಡಿನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಯೋಧರು ಮೀನುಗಾರಿಕಾ ಹಡಗಿನಲ್ಲಿ ತಪಾಸಣೆಯನ್ನೂ ಕೈಗೊಂಡರು. ಈ ವೇಳೆ, ನೌಕಾ ಪಡೆಗೆ ಸುಮಾರು 300 ಕೆಜಿ ಮಾದಕ ದ್ರವ್ಯ ಪತ್ತೆಯಾಗಿದೆ. ಕೂಡಲೇ ಹಾಗೂ ಅದರಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದ ನೌಕಾ ಪಡೆ, ಸಮೀಪದ ಕೊಚ್ಚಿ ಬಂದರಿಗೆ ಹಡಗನ್ನು ರವಾನಿಸಿತು. ಇದೀಗ ಹಡಗಿನ ಸಿಬ್ಬಂದಿಯ ತೀವ್ರ ವಿಚಾರಣೆ ನಡೆಯುತ್ತಿದೆ. ಹಡಗಿನಲ್ಲಿದ್ದ 300 ಕೆಜಿ ಮಾದಕ ದ್ರವ್ಯದ ಒಟ್ಟು ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3 ಸಾವಿರ ಕೋಟಿ ರೂ. ಎಂದು ತಿಳಿದುಬಂದಿದೆ.