ಬಂಗಾಳದಲ್ಲಿ 'ಕೈ' ಸೋಲಿನ ಸುಳಿವು ಸಿಕ್ಕಿದೆ, ಪ್ರಚಾರ ರದ್ದತಿಗೆ ಕೋವಿಡ್ ನೆಪವಷ್ಟೇ: ರವಿಶಂಕರ್ ಪ್ರಸಾದ್

'ತಮ್ಮ ಹಡಗು ಮುಳುಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅರಿವಾಗಿದೆ. ಹೀಗಾಗಿ, ಅವರು ಕೋವಿಡ್ ಹೆಸರೇಳಿ ಪ್ರಚಾರದಿಂದಲೇ ದೂರ ಸರಿದರು' - ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಬಂಗಾಳದಲ್ಲಿ 'ಕೈ' ಸೋಲಿನ ಸುಳಿವು ಸಿಕ್ಕಿದೆ, ಪ್ರಚಾರ ರದ್ದತಿಗೆ ಕೋವಿಡ್ ನೆಪವಷ್ಟೇ: ರವಿಶಂಕರ್ ಪ್ರಸಾದ್
Linkup
ಕೋಲ್ಕತ್ತಾ (ಪಶ್ಚಿಮ ): ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಗೊತ್ತಾದ ಕೂಡಲೇ ವೈರಸ್ ನೆಪ ಹೇಳಿರುವ , ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನ ಸಮಾವೇಶ ರದ್ದುಗೊಳಿಸಿದ್ಧಾರೆ ಎಂದು ಕೇಂದ್ರ ಸಚಿವ ತಿರುಗೇಟು ನೀಡಿದ್ದಾರೆ. ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಪ್ರಚಾರ ಸಮಾವೇಶ ರದ್ದತಿಗೆ ಕೊರೊನಾ ಅನ್ನೋದು ಕೇವಲ ಒಂದು ನೆಪ ಮಾತ್ರ, ಬಂಗಾಳದಲ್ಲಿ ಕಾಂಗ್ರೆಸ್ ಪರ ಅಲೆ ಇಲ್ಲದಿರೋದೇ ಪ್ರಚಾರ ಸಮಾವೇಶ ರದ್ದು ಮಾಡಲು ಕಾರಣ ಎಂದು ವಿಶ್ಲೇಷಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರವಿಶಂಕರ್ ಪ್ರಸಾದ್, ತಮ್ಮ ಹಡಗು ಮುಳುಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅರಿವಾಗಿದೆ. ಹೀಗಾಗಿ, ಅವರು ಕೋವಿಡ್ ಹೆಸರೇಳಿ ಪ್ರಚಾರದಿಂದಲೇ ದೂರ ಸರಿದರು ಎಂದು ಹೇಳಿದರು. ಇನ್ನು ಚುನಾವಣಾ ಪ್ರಚಾರ ಸಮಾವೇಶಗಳು ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗುತ್ತಿವೆ ಎಂಬ ಸವಾಲಿಗೆ ಉತ್ತರಿಸಿದ ರವಿಶಂಕರ್ ಪ್ರಸಾದ್, ಕೊರೊನಾ ನಿಗ್ರಹಕ್ಕೆ ಕೇಂದ್ರ ಸರ್ಕಾರ ಸರ್ವ ಕ್ರಮ ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೂ ಹರಿಹಾಯ್ದ ರವಿಶಂಕರ್ ಪ್ರಸಾದ್, ಬಂಗಾಳದಲ್ಲಿ ದುರಾಡಳಿತ, ಭ್ರಷ್ಟಾಚಾರ ಹಾಗೂ ಮುಸ್ಲಿಮರ ಓಲೈಕೆ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.