ಬಿಜೆಪಿ ಅಜೆಂಡಾ ಧರ್ಮ ರಾಜಕಾರಣ ಮಾತ್ರ: ಟಿಎಂಸಿಗೆ ಮರಳಿದ ರಾಜೀವ್ ಬ್ಯಾನರ್ಜಿ ಆರೋಪ

ಮತ ಗಳಿಸುವುದು ಹಾಗೂ ಧರ್ಮ ರಾಜಕಾರಣ ಮಾತ್ರವೇ ಬಿಜೆಪಿಯ ಅಜೆಂಡಾವಾಗಿದೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುಂಚೆ ಟಿಎಂಸಿಯಿಂದ ಬಿಜೆಪಿಗೆ ಜಿಗಿದಿದ್ದ ಮುಖಂಡ ರಾಜೀವ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಿಜೆಪಿ ಅಜೆಂಡಾ ಧರ್ಮ ರಾಜಕಾರಣ ಮಾತ್ರ: ಟಿಎಂಸಿಗೆ ಮರಳಿದ ರಾಜೀವ್ ಬ್ಯಾನರ್ಜಿ ಆರೋಪ
Linkup
ಕೋಲ್ಕತಾ: ವಿಧಾನಸಭೆ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಜಿಗಿದಿದ್ದ ಮುಖಂಡ , ನೇತೃತ್ವದ ಮಾತೃಪಕ್ಷಕ್ಕೆ ಭಾನುವಾರ ಮರಳಿ ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾಗಿದ್ದು ತಾವು ಮಾಡಿದ್ದ ದೊಡ್ಡ ತಪ್ಪು ಎಂದು ಹೇಳಿಕೊಂಡಿರುವ ರಾಜೀವ್ ಬ್ಯಾನರ್ಜಿ, ಟಿಎಂಸಿಗೆ ಮರಳಿ ಸೇರಿಕೊಳ್ಳಲು ಅನುಮತಿ ನೀಡಿದ್ದಕ್ಕಾಗಿ ಅಭಿಷೇಕ್ ಬ್ಯಾನರ್ಜಿ ಹಾಗೂ ಮಮತಾ ಬ್ಯಾನರ್ಜಿ ಅವರಿಗೆ ಕೃತಜ್ಞರಾಗಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, ಪಕ್ಷವು ಬಣ್ಣ ಬಣ್ಣದ ಚಿತ್ರ ತೋರಿಸಿತ್ತು ಎಂದು ಹೇಳಿದ್ದಾರೆ. 'ಬಿಜೆಪಿ ಸೇರಿಕೊಳ್ಳುವ ಮುನ್ನ ಉದ್ಯೋಗ ಮತ್ತು ಕೃಷಿಗೆ ಸಂಬಂಧಿಸಿದಂತೆ ಅನೇಕ ಭರವಸೆಗಳನ್ನು ನೀಡಲಾಗಿತ್ತು. ಅದು ಈಡೇರಲಿಲ್ಲ' ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಮತಗಳನ್ನು ಪಡೆಯುವುದು ಹಾಗೂ ಧಾರ್ಮಿಕ ರಾಜಕಾರಣ ಮಾತ್ರವೇ ಬಿಜೆಪಿಯ ಅಜೆಂಡಾ. ನಾನು ಕೂಡ ಕೃಷಿ ಅಭಿವೃದ್ಧಿ ಹಾಗೂ ಯುವಜನರಿಗೆ ಉದ್ಯೋಗವನ್ನು ಬಯಸಿದ್ದೆ. ಕೈಗಾರಿಕೆಗಳು ಅಭಿವೃದ್ಧಿಯಾಗಬೇಕೆಂದರೆ ಡುನ್ಲೋಪ್ ಕಾರ್ಖಾನೆಯನ್ನು ಮರು ಆರಂಭಿಸಿ ಎಂದು ಕೇಂದ್ರದ ನಾಯಕತ್ವಕ್ಕೆ ಹೇಳಿದ್ದೆ. ಆದರೆ ಅವರ ಏಕೈಕ ಅಜೆಂಡಾ ಎಂದರೆ ಮತಗಳನ್ನು ಪಡೆಯುವುದಾಗಿದೆ ಎಂದು ಟೀಕಿಸಿದ್ದಾರೆ. 'ಅವರ ಮುಖ್ಯ ಕಾರ್ಯಸೂಚಿ ಎಂದರೆ ಧಾರ್ಮಿಕ ರಾಜಕಾರಣ. ನಾನು ಬಿಜೆಪಿ ತೊರೆಯುವ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಬಹಳ ತಡವಾಗಿತ್ತು. ನಾನು ನಿರ್ಧಾರ ತೆಗೆದುಕೊಳ್ಳುವ ಮೊದಲು ಮಮತಾ ಬ್ಯಾನರ್ಜಿ ಅವರು ನನ್ನನ್ನು ತಡೆದಿದ್ದರು. ಅಭಿಷೇಕ್ ಬ್ಯಾನರ್ಜಿ ಕೂಡ ನನಗೆ ವಿವರಣೆ ನೀಡಿದ್ದರು. ಆದರೆ ಇಂದು ನನಗೆ ನಾಚಿಕೆಯಾಗುತ್ತಿದೆ. ನಾನು ಇಲ್ಲಿಯೇ ಉಳಿದಿದ್ದರೆ, ನನಗೆ ಮುನ್ನಡೆಯಲು ಉತ್ತಮ ದಾರಿ ಸಿಗುತ್ತಿತ್ತು' ಎಂದು ಹೇಳಿದ್ದಾರೆ. 'ಬದಲಾವಣೆ ಬರುತ್ತಿದೆ. ನಾನು ಜನರಿಗಾಗಿ ಕೆಲಸ ಮಾಡಲು ಬಯಸಿದ್ದೇನೆ. ಮಮತಾ ಬ್ಯಾನರ್ಜಿ ಅವರು ಬಂಗಾಳದ ನಾಯಕಿ ಮಾತ್ರವಲ್ಲ, ಅವರು ದೇಶದ ಇತರೆ ಭಾಗಕ್ಕೂ ನಾಯಕಿ' ಎಂದು ಕೊಂಡಾಡಿದರು.