8.45ಕ್ಕೆ ದೇಶವನ್ನುದ್ದೇಶಿಸಿ ಮೋದಿ ಭಾಷಣ, ಎಲ್ಲರ ಚಿತ್ತ ಪ್ರಧಾನಿಯತ್ತ

ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಮಿತಿ ಮೀರಿ ಹೆಚ್ಚುತ್ತಿದ್ದು, ಲಸಿಕೆ, ಬೆಡ್‌, ಆಕ್ಸಿಜನ್‌ ಕೊರತೆ ಕಾಣಿಸಿಕೊಂಡಿರುವ ಹೊತ್ತಲ್ಲೇ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕುತೂಹಲ ಹುಟ್ಟಿಸಿದೆ.

8.45ಕ್ಕೆ ದೇಶವನ್ನುದ್ದೇಶಿಸಿ ಮೋದಿ ಭಾಷಣ, ಎಲ್ಲರ ಚಿತ್ತ ಪ್ರಧಾನಿಯತ್ತ
Linkup
ಹೊಸದಿಲ್ಲಿ: ಮಂಗಳವಾರ ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ದೇಶದಲ್ಲಿ ಪ್ರಕರಣಗಳು ಮಿತಿ ಮೀರಿ ಹೆಚ್ಚುತ್ತಿರುವ ಹೊತ್ತಲ್ಲೇ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕುತೂಹಲ ಹುಟ್ಟಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈಗಾಗಲೇ ದಿಲ್ಲಿಯಲ್ಲಿ ಲಾಕ್‌ಡೌನ್‌ ಜಾರಿಯಾಗಿದೆ. ಸೋಮವಾರವಷ್ಟೆ ಅಲಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶ ಐದು ನಗರಗಳಲ್ಲಿ ಲಾಕ್‌ಡೌನ್‌ ಹೇರಿತ್ತು. ನಂತರ ಸುಪ್ರೀಂ ಕೋರ್ಟ್‌ ಲಾಕ್‌ಡೌನ್‌ ರದ್ದುಗೊಳಿಸಿತ್ತು. ಇತ್ತ ಜಾರ್ಖಂಡ್‌ ಸರಕಾರ ಏಪ್ರಿಲ್‌ 22ರಿಂದ ಆರಂಭಿಸಿ ರಾಜ್ಯದಲ್ಲಿ ಕರ್ಫ್ಯೂ ಘೋಷಿಸಿದೆ. ಕರ್ನಾಟಕದಲ್ಲೂ ಮಂಗಳವಾರ ಸರ್ವ ಪಕ್ಷ ಸಭೆ ನಡೆದು, ರಾಜ್ಯ ಸರಕಾರದ ತೀರ್ಮಾನವನ್ನು ಎದುರು ನೋಡಲಾಗುತ್ತಿದೆ. ಬೆಂಗಳೂರಿನಲ್ಲಿ ಲಾಕ್‌ಡೌನ್‌ ಹೇರಲಾಗುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಇದೇ ಹೊತ್ತಲ್ಲಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ದೇಶದ ಮಟ್ಟದಲ್ಲೇ ಕಠಿಣ ಕ್ರಮಗಳು ಜಾರಿಯಾಗಲಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ.