ಅದೊಂದು ಅಪಘಾತದಿಂದ ಹೇಗಿದ್ದ ಬಿಗ್ ಬಾಸ್ ಸ್ಪರ್ಧಿ ಯಶಿಕಾ ಆನಂದ್ ಹೇಗಾದ್ರು ನೋಡಿ!

ತಮಿಳು ಬಿಗ್ ಬಾಸ್ ಸ್ಪರ್ಧಿ, ನಟಿ ಯಶಿಕಾ ಆನಂದ್ ಅವರು ಕಳೆದ ಜುಲೈ ತಿಂಗಳಲ್ಲಿ ಕಾರ್ ಅಪಘಾತಕ್ಕೊಳಗಾಗಿದ್ದರು. ಆಗ ಅವರಿಗೆ ದೊಡ್ಡ ಮಟ್ಟದ ಗಾಯಗಳಾಗಿತ್ತು. ಈಗ ಯಶಿಕಾ ಆನಂದ್ ಆರೋಗ್ಯ ಈಗ ಹೇಗಿದೆ?

ಅದೊಂದು ಅಪಘಾತದಿಂದ ಹೇಗಿದ್ದ ಬಿಗ್ ಬಾಸ್ ಸ್ಪರ್ಧಿ ಯಶಿಕಾ ಆನಂದ್ ಹೇಗಾದ್ರು ನೋಡಿ!
Linkup
ಕಳೆದ ಜುಲೈ ತಿಂಗಳಲ್ಲಿ ಭೀಕರ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದ ನಟಿ ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರದಿದ್ದರೂ ಕೂಡ, ಆಗಾಗ ಆರೋಗ್ಯದ ಮಾಹಿತಿ ನೀಡುತ್ತಿರುತ್ತಾರೆ. ಈಗ ಮುದ್ದಿನ ನಾಯಿ ಜೊತೆ ಊಟ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡು, ಗುಣಮುಖವಾಗುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಯಶಿಕಾ ಆನಂದ್ ಹೊಸ ಫೋಟೋ ನೋಡಿ ನೆಟ್ಟಿಗರು ಖುಷಿಯಿಂದ, ಬೇಗ ಹುಷಾರಾಗುವಂತೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನೂ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಯಶಿಕಾ ಬೇಗ ಹುಷಾರಾಗುವಂತೆ ಹರಸುತ್ತಿದ್ದಾರೆ. ಚೆನ್ನೈನ East Coast Road ಬಳಿ ಸ್ನೇಹಿತರೊಂದಿಗೆ ಹೋಗುವಾಗ ಯಶಿಕಾ ಆನಂದ್‌ ಕಾರ್ ಅಪಘಾತವಾಗಿತ್ತು. ಮಾಮಲ್ಲಪುರಂನ ಸುಲೇರಿಕಡು ಬಳಿ ರಾತ್ರಿ 1ಕ್ಕೆ (2021 ಜುಲೈ 25) ಕಾರ್ ಅಪಘಾತವಾಗಿತ್ತು. ಆ ಕಾರ್‌ನಲ್ಲಿ ಯಶಿಕಾ ಗೆಳತಿ, ಇಬ್ಬರು ಸ್ನೇಹಿತರು ಇದ್ದರು. ಸ್ಥಳದಲ್ಲಿಯೇ ಯಶಿಕಾ ಗೆಳತಿ ವಲ್ಲಿಚೆಟ್ಟಿ ಭವಾನಿ ಸಾವನ್ನಪ್ಪಿದ್ದರು. ಅತಿ ವೇಗವಾಗಿ ಸಾಗುತ್ತಿದ್ದ ಯಶಿಕಾ ಆನಂದ್ ಅವರ ಕಾರ್, ನಿಯಂತ್ರಣಕ್ಕೆ ಸಿಗದೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ಹಳ್ಳಕ್ಕೆ ಜಾರಿ ಬಿತ್ತು. ಆ ಸಮಯದಲ್ಲಿ ಕಾರ್‌ನಲ್ಲಿ ಇದ್ದವರನ್ನು ರಕ್ಷಿಸಲು ಪ್ರತ್ಯಕ್ಷದರ್ಶಿಗಳು ಓಡಿ ಬಂದರು. ಆಗಲೇ, ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು, ಭವಾನಿ ನಿಧನರಾಗಿದ್ದರು. ಗೆಳತಿ ನಿಧನ ಆಗಿದ್ದಕ್ಕೆ ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ. ಈ ಕುರಿತು ಅಪಘಾತ ಆದ ಕೆಲ ದಿನಗಳ ನಂತರ ಸುದೀರ್ಘ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಅವರು, "ನನ್ನನ್ನು ಅಪಘಾತದಿಂದ ಬದುಕಿಸಿದೆ ಎಂದು ದೇವರಿಗೆ ಧನ್ಯವಾದ ಹೇಳಲಾ? ಅಥವಾ ಭವಾನಿ ಕರೆದುಕೊಂಡು ಹೋದೆ ಅಂತ ದೂಷಿಸಲಾ? ನಿಜಕ್ಕೂ ಏನೂ ಅರ್ಥವಾಗುತ್ತಿಲ್ಲ. ಪಾವನಿಯನ್ನು ತುಂಬ ಮಿಸ್ ಮಾಡಿಕೊಳ್ತೀನಿ. ಭವಾನಿ, ನನ್ನನ್ನು ನೀನು ಕ್ಷಮಿಸುತ್ತೀಯಾ ಎಂದು ನನಗೆ ಗೊತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸು. ನಿನ್ನ ಕುಟುಂಬವನ್ನು ನಾನು ತುಂಬ ಭಯಂಕರ ಸ್ಥಿತಿಗೆ ದೂಕಿದೆ" ಎಂದು ಯಶಿಕಾ ಬೇಸರ ಹೊರಹಾಕಿದ್ದರು. "ನಾನು ಆ ಕಾರ್ ಅಪಘಾತದಲ್ಲಿ ಗೆಳತಿಯನ್ನು ಕಳೆದುಕೊಂಡು, ಬದುಕಿರುವುದಕ್ಕೆ ಕೊನೆಯ ತನಕ ಪಶ್ಚಾತ್ತಾಪದಲ್ಲಿ ಇರುವೆ. ನಿನ್ನ ಆತ್ನಕ್ಕೆ ಶಾಂತಿ ಸಿಗಲಿ, ಆದಷ್ಟು ಬೇಗ ನನ್ನ ಹತ್ತಿರ ಬಾ ಎಂದು ಪ್ರಾರ್ಥಿಸುವೆ. ಇದು ನನ್ನ ಮರುಜನ್ಮ. ಮಾನಸಿಕವಾಗಿ, ದೈಹಿಕವಾಗಿ ನನಗೆ ತುಂಬ ಗಾಯಗಳಾಗಿವೆ. ನಾನು ಏನು ಕಳೆದುಕೊಂಡಿದ್ದೀನೋ ಅದರ ಮುಂದೆ ಇದು ಏನೂ ಅಲ್ಲ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ನಾವು ಕುಡಿದು ಗಾಡಿ ಓಡಿಸುತ್ತಿರಲಿಲ್ಲ. ಸುಮ್ಮನೇ ಗಾಸಿಪ್ ಹಬ್ಬಿಸಬೇಡಿ, ಕಾನೂನು ಎಲ್ಲರಿಗೂ ಒಂದೇ" ಎಂದು ಯಶಿಕಾ ಆನಂದ್ ಹೇಳಿದ್ದರು. 5 ತಿಂಗಳುಗಳ ಕಾಲ ಯಶಿಕಾ ಆನಂದ್‌ಗೆ ನಡೆಯಲು, ನಿಂತುಕೊಳ್ಳಲು ಆಗೋದಿಲ್ಲವಂತೆ. ಪೂರ್ತಿ ದಿನ ಅವರು ಹಾಸಿಗೆ ಮೇಲೆ ಇರಬೇಕಾದ ಸ್ಥಿತಿ ಬಂದಿದೆ. ಅದೇ ಹಾಸಿಗೆ ಮೇಲೆ ಮೂತ್ರ-ಮಲ ವಿಸರ್ಜನೆ ಮಾಡಿಕೊಳ್ಳಬೇಕು. ಬಲ ಹಾಗೂ ಎಡಕ್ಕೂ ತಿರುಗಲು ಆಗದ ಸ್ಥಿತಿಯಲ್ಲಿ ಯಶಿಕಾ ಇದ್ದಾರೆ ಎಂದು ಅವರೇ ಈ ಹಿಂದೆ ಮಾಹಿತಿ ನೀಡಿದ್ದರು. ಧುರುವಾಂಗಲ್ ಪಾಥಿನಾರು', ಕವಲೈ ವೇಡಮ್', 'ನೋಟಾ', 'ಮುಂತಾದ ಚಿತ್ರಗಳಲ್ಲಿ ಯಶಿಕಾ ಆನಂದ್ ನಟಿಸಿದ್ದಾರೆ. ತಮಿಳಿನ ಶೋನಲ್ಲಿಯೂ ಅವರು ಭಾಗವಹಿಸಿದ್ದರು.