ರಶ್ಮಿಕಾರನ್ನು ಹುಡುಕಿಕೊಂಡು ತೆಲಂಗಾಣದಿಂದ ಮಡಿಕೇರಿಗೆ ಬಂದ ಅಭಿಮಾನಿ! ಈತನ ಕಥೆಯೇ ರೋಚಕ!

'ನ್ಯಾಷನಲ್‌ ಕ್ರಶ್‌' ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ಟಾಲಿವುಡ್‌ನ ಅಭಿಮಾನಿಯೊಬ್ಬ ರಶ್ಮಿಕಾರನ್ನು ಹುಡುಕಿಕೊಂಡು ಬಂದಿದ್ದಾನೆ. ಆನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ! ಹಾಗಾದರೆ, ಮುಂದೇನಾಯ್ತು?

ರಶ್ಮಿಕಾರನ್ನು ಹುಡುಕಿಕೊಂಡು ತೆಲಂಗಾಣದಿಂದ ಮಡಿಕೇರಿಗೆ ಬಂದ ಅಭಿಮಾನಿ! ಈತನ ಕಥೆಯೇ ರೋಚಕ!
Linkup
ಐದು ವರ್ಷಗಳ ಹಿಂದೆ ಕಿರಿಕ್ ಪಾರ್ಟಿ ಮೂಲಕ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದ ಅವರು ಈಗ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ತೆಲುಗಿನಲ್ಲಿ ದೊಡ್ಡಮಟ್ಟದ ಹವಾ ಸೃಷ್ಟಿ ಮಾಡಿದ್ದಾರೆ. ಅಲ್ಲಿನ ಸ್ಟಾರ್ ಸಿನಿಮಾಗಳಿಗೆ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಅವರ ಒಬ್ಬ ಅಭಿಮಾನಿ ಮಾಡಿರುವ ಕೆಲಸ ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಕೊಡಗಿನ ಬೆಡಗಿ ರಶ್ಮಿಕಾರಶ್ಮಿಕಾ ಅವರು ಮೂಲತಃ ಕೊಡಗಿನವರು. ಅವರ ಪೋಷಕರು ಇರುವುದು ಅಲ್ಲಿಯೇ. ಇದೀಗ ರಶ್ಮಿಕಾರನ್ನು ನೋಡುವುದಕ್ಕೆಂದು ತೆಲಂಗಾಣದ ಯುವಕನೋರ್ವ ವಿರಾಜಪೇಟೆಗೆ ಬಂದಿದ್ದಾನೆ. ಈತ ರಶ್ಮಿಕಾ ಅವರ ದೊಡ್ಡ ಅಭಿಮಾನಿಯಂತೆ! ಈತನ ಹೆಸರು ಆಕಾಶ್ ತ್ರಿಪಾಠಿ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಈತ ರಶ್ಮಿಕಾ ಮನೆಯನ್ನು ಹುಡುಕಾಡಿದ್ದಾನೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ, ರಶ್ಮಿಕಾ ನೋಡಲು ಬಂದಿರುವುದಾಗಿ ಆಕಾಶ್ ತ್ರಿಪಾಠಿ ಹೇಳಿಕೆ ನೀಡಿದ್ದಾರೆ. ತೆಲಂಗಾಣದಿಂದ ಮೈಸೂರಿಗೆ ರೈಲಿನಲ್ಲಿ ಬಂದಿದ್ದ ಈತ, ಅಲ್ಲಿಂದ ವಿರಾಜಪೇಟೆಗೆ ಗೂಡ್ಸ್‌ ಆಟೋದಲ್ಲಿ ಬಂದಿದ್ದಾನೆ. ಸದ್ಯ ಪೊಲೀಸರು ಈತನಿಗೆ ಬುದ್ಧಿವಾದ ಹೇಳಿ, ವಾಪಸ್ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೂ, ಕೂಡ ಅಷ್ಟು ದೂರದಿಂದ, ಅದರಲ್ಲೂ ಈ ಕೊರೊನಾ ಸಮಯದಲ್ಲಿ ರಶ್ಮಿಕಾರನ್ನು ಹುಡುಕಿಕೊಂಡು ಬಂದಿರುವ ಅಭಿಮಾನಿಯ ವರ್ತನೆ ಅನೇಕರಲ್ಲಿ ಅಚ್ಚರಿ ಹುಟ್ಟಿಸಿದೆ. ಇನ್ನು, ಮಡಿಕೇರಿಯಲ್ಲಿ ರಶ್ಮಿಕಾ ಇಲ್ಲ. ಸದ್ಯ ಅವರು ಎರಡು ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅದರ ಶೂಟಿಂಗ್‌ಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಈಚೆಗಷ್ಟೇ ಅಮಿತಾಭ್ ಬಚ್ಚನ್‌ ಅವರಿಗೆ ಅಪ್ಪಂದಿರ ದಿನದಂದು ರಶ್ಮಿಕಾ ಗಿಫ್ಟ್ ನೀಡಿದ್ದರು. ಸದ್ಯ ಅವರ ಜೊತೆಯಲ್ಲಿ '' ಅನ್ನೋ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದರೊಂದಿಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.